ETV Bharat / bharat

ಹೈದರಾಬಾದ್‌ನಲ್ಲಿ ದಿಢೀರ್ ಕುಸಿದ ಒಳಚರಂಡಿ ಕಾಲುವೆ! - ಇದ್ದಕ್ಕಿದ್ದಂತೆ ಬಾಯ್ದೆರೆದ ಭೂಮಿ

ಹೈದರಾಬಾದ್​​ನಲ್ಲಿ ಇದ್ದಕ್ಕಿದ್ದಂತೆ ಭೂಮಿ ಕುಸಿಯಿತು. ಒಳಚರಂಡಿ ಕಾಲುವೆ ಇದಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ.

Collapsed drainage canal in Hyderabad
Collapsed drainage canal in Hyderabad
author img

By

Published : Dec 23, 2022, 4:46 PM IST

ತೆಲಂಗಾಣ (ಹೈದರಾಬಾದ್‌): ಹೈದರಾಬಾದ್​ನ ಗೋಶಾಮಹಲ್ ಬಳಿ ದಿಢೀರ್ ಭೂಮಿ ಕುಸಿದಿದೆ. ತರಕಾರಿ ಮಾರಾಟ ಮಾಡುತ್ತಿದ್ದವರ ಕೈಗಾಡಿಗಳೂ ಸೇರಿದಂತೆ ಹಲವು ಕಾರು ಮತ್ತು ಬೈಕ್​ಗಳು ಗುಂಡಿಯಲ್ಲಿ ಸಿಲುಕಿಕೊಂಡಿವೆ. ಮೂವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರದೇಶದಲ್ಲಿ ಪ್ರತಿ ಶುಕ್ರವಾರ ಮಾರುಕಟ್ಟೆ ನಡೆಯುತ್ತದೆ. ಎಂದಿನ ವಾರದಂತೆ ಇಂದು ಸಹ ಮಾರುಕಟ್ಟೆ ನಡೆಯುತ್ತಿದ್ದಾಗ ಭೂಮಿ ದಿಢೀರ್ ಬಿರುಕು​ ಬಿಟ್ಟಿತು. ಒಳಚರಂಡಿ ಕಾಲುವೆ ಇದಾಗಿದ್ದು ದೊಡ್ಡ ಅನಾಹುತ ತಪ್ಪಿದೆ. ತರಕಾರಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ರಸ್ತೆಯಲ್ಲಿ ಹೆಚ್ಚು ವಾಹನ ದಟ್ಟಣೆ ಇಲ್ಲದೇ ಇರುವುದರಿಂದ ದುರಂತ ತಪ್ಪಿದೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕನ್ನಡಿಗರಿಗೆ ಗ್ರೂಪ್ ಸಿ, ಡಿ ದರ್ಜೆ ಉದ್ಯೋಗ ಮೀಸಲಾತಿಯ ಖಾಸಗಿ ವಿಧೇಯಕ ಅಂಗೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.