ಪೌರಿ(ಉತ್ತರಾಖಂಡ): ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ತವರು ರಾಜ್ಯವಾದ ಉತ್ತರಾಖಂಡಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಅವರು ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರನ್ನು ಸ್ವಾಗತಿಸಿದರು.
ಯುಪಿ ಸಿಎಂ ಅದಿತ್ಯನಾಥ್ ಅವರು ಐದು ವರ್ಷಗಳ ನಂತರ ಇಂದು ತಮ್ಮ ಗ್ರಾಮವನ್ನು ತಲುಪಿದ್ದಾರೆ. ಅವರು ತಮ್ಮ ತಾಯಿ ಸಾವಿತ್ರಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ, ಇತರ ಕುಟುಂಬ ಸದಸ್ಯರು ಮತ್ತು ಜನರನ್ನು ಸಹ ಭೇಟಿಯಾದರು. ಯೋಗಿ ಆದಿತ್ಯನಾಥ್ ಅವರು 28 ವರ್ಷಗಳ ನಂತರ ಇಲ್ಲಿ ರಾತ್ರಿ ಕಳೆಯಲಿದ್ದಾರೆ. ರಾಜ್ಯಕ್ಕೆ ಸಿಎಂ ಯೋಗಿ ಆಗಮನದ ಸಂಭ್ರಮ ಎಲ್ಲರಲ್ಲೂ ಮನೆ ಮಾಡಿದೆ. ಸಿಎಂಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಸುಮಾರು ಐದು ವರ್ಷಗಳ ಹಿಂದೆ 2017ರಲ್ಲಿ ಚುನಾವಣೆಗೂ ಮುನ್ನ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಮನೆಗೆ ಭೇಟಿ ನೀಡಿದ್ದರು.
ಮೂರು ದಿನಗಳ ಪ್ರವಾಸದಲ್ಲಿ ಉತ್ತರಾಖಂಡಕ್ಕೆ ಭೇಟಿ ನೀಡಿರುವ ಸಿಎಂಗೆ ಭವ್ಯ ಸ್ವಾಗತ ದೊರೆತಿದೆ. ಉತ್ತರಾಖಂಡಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರನ್ನು ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸ್ವಾಗತಿಸಿದರು. ಈ ವೇಳೆ, ಸಿಎಂ ಧಾಮಿ ಮತ್ತು ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಸಿಂಗ್ ಅವರು ವರ್ಷಗಳ ನಂತರ ಸನ್ಯಾಸಿಯೊಬ್ಬ ಇಂದು ತನ್ನ ತಾಯಿಯನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇದು ತುಂಬಾ ಭಾವನಾತ್ಮಕ ಕ್ಷಣವಾಗಿರುತ್ತದೆ ಎಂದೂ ಇದೇ ವೇಳೆ ಹೇಳಿದ್ದರು.
ಇದನ್ನೂ ಓದಿ: 2014ಕ್ಕಿಂತಲೂ ಮೊದಲು ಅಂತಾರಾಷ್ಟ್ರೀಯ ಕ್ರೀಡೆಗಳ ಪದಕ ಪಟ್ಟಿಯಲ್ಲಿ ಭಾರತದ ಹೆಸರೇ ಇರ್ತಿರಲಿಲ್ಲ: ಅಮಿತ್ ಶಾ
ಸಿಎಂ ತಮ್ಮ ಹುಟ್ಟೂರು ಯಮಕೇಶ್ವರದ ಪಂಚೂರ್ ತಲುಪಿದ ನಂತರ ಪಂಚೂರಿನಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಬಿತ್ಯಾನಿಯಲ್ಲಿರುವ ಮಹಾಯೋಗಿ ಗುರು ಗೋರಖನಾಥ್ ಸರ್ಕಾರಿ ಕಾಲೇಜಿನ ಆವರಣದಲ್ಲಿ ಗುರು ಮಹಂತ್ ಅವೈದ್ಯನಾಥರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ವೇಳೆ, ಗುರುಗಳನ್ನು ನೆನೆದು ಸಿಎಂ ಯೋಗಿ ಆದಿತ್ಯನಾಥ್ ಕೆಲಕಾಲ ಗದ್ಘದಿತರಾದ ಘಟನೆಯೂ ನಡೆಯಿತು.