ಚೆನ್ನೈ (ತಮಿಳುನಾಡು) : ಡಿಎಂಕೆ ಪಕ್ಷಕ್ಕೆ 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅದರ ನಾಯಕ ಮತ್ತು ಸಿಎಂ ಎಂಕೆ ಸ್ಟಾಲಿನ್ ಅವರು 'ಸ್ಪೀಕಿಂಗ್ ಫಾರ್ ಇಂಡಿಯಾ' ಎಂಬ ಪಾಡ್ಕಾಸ್ಟಿಂಗ್ ಕಾರ್ಯಕ್ರಮವನ್ನು ಸೋಮವಾರ ಆರಂಭಿಸಿದ್ದು, ಮೊದಲ ಕಂತಿನ ಕಾರ್ಯಕ್ರಮವನ್ನು ಇಂದು ಬಿಡುಗಡೆ ಮಾಡಿದರು. ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳನ್ನು ಇದು ಪ್ರಸಾರ ಕಂಡಿದೆ.
-
To watch/listen to all episodes of 'Speaking for India' Podcast series in Tamil, Telugu, Malayalam, Kannada, Hindi languages visit the official website: https://t.co/QxIOWAaSwV#Speaking4India வலையொலித் தொடரின் அனைத்து அத்தியாயங்களையும் தமிழ், தெலுங்கு, மலையாளம், கன்னடம், இந்தி… https://t.co/I5ZTWN9Dkf
— M.K.Stalin (@mkstalin) September 4, 2023 " class="align-text-top noRightClick twitterSection" data="
">To watch/listen to all episodes of 'Speaking for India' Podcast series in Tamil, Telugu, Malayalam, Kannada, Hindi languages visit the official website: https://t.co/QxIOWAaSwV#Speaking4India வலையொலித் தொடரின் அனைத்து அத்தியாயங்களையும் தமிழ், தெலுங்கு, மலையாளம், கன்னடம், இந்தி… https://t.co/I5ZTWN9Dkf
— M.K.Stalin (@mkstalin) September 4, 2023To watch/listen to all episodes of 'Speaking for India' Podcast series in Tamil, Telugu, Malayalam, Kannada, Hindi languages visit the official website: https://t.co/QxIOWAaSwV#Speaking4India வலையொலித் தொடரின் அனைத்து அத்தியாயங்களையும் தமிழ், தெலுங்கு, மலையாளம், கன்னடம், இந்தி… https://t.co/I5ZTWN9Dkf
— M.K.Stalin (@mkstalin) September 4, 2023
ಸ್ಪೀಕಿಂಗ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ದೇಶದ ಹಲವು ವಿಷಯಗಳ ಮೇಲೆ ಸ್ಟಾಲಿನ್ ಅವರ ಗಮನ ಸೆಳೆದರು. ಅದರ ಆಡಿಯೋ ರೆಕಾರ್ಡ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಪಾಡ್ಕಾಸ್ಟಿಂಗ್ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಡಿಎಂಕೆ ಆಗಸ್ಟ್ 31 ರಂದು ಘೋಷಣೆ ಮಾಡಿತ್ತು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಳೆದ ಕೆಲವು ತಿಂಗಳುಗಳಿಂದ 'ನಿಮ್ಮಲ್ಲಿ ಒಬ್ಬರು' ಎಂಬ ವಿಷಯದ ಕುರಿತು ಪ್ರಶ್ನೋತ್ತರ ರೂಪದಲ್ಲಿ ವಿಡಿಯೋ ಮೂಲಕ ವಿವಿಧ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಈಗ ಆಡಿಯೋ ಮಾದರಿಯ ಸ್ಪೀಕಿಂಗ್ ಫಾರ್ ಇಂಡಿಯಾ ಶೀರ್ಷಿಕೆಯಡಿ ಪಾಡ್ಕಾಸ್ಟ್ ಕಾರ್ಯಕ್ರಮವನ್ನೂ ಆರಂಭಿಸಿದ್ದಾರೆ.
ಆಡಿಯೋದಲ್ಲೇನಿದೆ?; ಸ್ಟಾಲಿನ್ ಅವರು ಬಿಡುಗಡೆ ಮಾಡಿರುವ ಮೊದಲ ಕಂತಿನ ಆಡಿಯೋದಲ್ಲಿ ಗುಜರಾತ್ ಮಾದರಿಯ ಅಭಿವೃದ್ಧಿ, 2024 ರ ಚುನಾವಣೆ, ದೇಶದ ಉದ್ಯಮಿಗಳು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆಯೂ ಆಡಿಯೋದಲ್ಲಿ ಹೇಳಲಾಗಿದೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಆಡಿಯೋ ಸರಣಿಯನ್ನು ಈ ಆಡಿಯೋ ಯೂಟ್ಯೂಬ್, ಸ್ಪಾಟಿಫೈ, ಸೌಂಡ್‌ಕ್ಲೌಡ್, ಅಮೆಜಾನ್ ಸೇರಿ ಇತರ ಸಾಮಾಜಿಕ ವೇದಿಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ತಮಿಳು ಜೊತೆಗೆ, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇತರ ಭಾಷೆಗಳಲ್ಲಿ ಹಿನ್ನೆಲೆ ಧ್ವನಿಯೊಂದಿಗೆ ಪ್ರಕಟಿಸಲಾಗಿದೆ.
ಇಂಡಿಯಾ ಮೈತ್ರಿಕೂಟದ ಕಾರ್ಯತಂತ್ರ: ಪ್ರಧಾನಿ ಮೋದಿ ಅವರ ವಿರುದ್ಧ ರಚಿಸಲಾಗಿರುವ ಇಂಡಿಯಾ ಮೈತ್ರಿಕೂಟದ ಕಾರ್ಯತಂತ್ರದ ಭಾಗವಾಗಿ ಮುಂಬೈನಲ್ಲಿ ಸಭೆ ನಡೆಸಿದ ಮೂರು ದಿನಗಳ ನಂತರ ಈ ಸರಣಿಯನ್ನು ಆರಂಭಿಸಲಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಎಲ್ಲ ವಿಪಕ್ಷಗಳು ಸೇರಿಕೊಂಡು I.N.D.I.A ಕೂಟವನ್ನು ಆರಂಭಿಸಿವೆ.
ಸ್ಟಾಲಿನ್ ಪುತ್ರನ ಸನಾತನ ಧರ್ಮ ವಿವಾದ : ಸನಾತನ ಧರ್ಮದ ಬಗ್ಗೆ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ದೇಶಾದ್ಯಂತ ಭಾರೀ ಟೀಕೆಗೆ ಗುರಿಯಾಗಿದೆ. ರಾಜಸ್ಥಾನ ಸೇರಿದಂತೆ ವಿವಿಧೆಡೆ ಉದಯನಿಧಿ ವಿರುದ್ಧ ಪ್ರಕರಣ ದಾಖಲಾಗಿವೆ.