ETV Bharat / bharat

ಕೇಂದ್ರ ಸರ್ಕಾರ, ತನಿಖಾ ಸಂಸ್ಥೆಗಳಿಂದ ನನ್ನ ಕುಟುಂಬಕ್ಕೆ ಕಿರುಕುಳ: ಮಮತಾ ಬ್ಯಾನರ್ಜಿ - Mamata Banerjee

ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರೋಧಿಯಾಗಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದಾರೆ.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
author img

By ETV Bharat Karnataka Team

Published : Sep 4, 2023, 6:46 PM IST

ಕೋಲ್ಕತ್ತಾ (ಪಶ್ಚಿಮಬಂಗಾಳ) : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದ್ದಾರೆ. ಸರ್ಕಾರ ತನಿಖಾ ಸಂಸ್ಥೆಗಳನ್ನು ಇತರ ಪಕ್ಷಗಳು, ಉದ್ಯಮಿಗಳ ವಿರುದ್ಧ ಬಳಸುತ್ತಿದೆ. ಇದರಿಂದ ನನ್ನ ಕುಟುಂಬವೂ ಬಾಧಿತವಾಗಿದೆ. ಇದು ರಾಜಕೀಯ ಸೇಡು ಎಂದು ಆರೋಪಿಸಿದ್ದಾರೆ.

ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಕ್ರೆಡೈ) ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನಿಖಾ ಸಂಸ್ಥೆಗಳು ಉದ್ಯಮಿಗಳ ಮೇಲೂ ದಾಳಿ ನಡೆಸಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಅವರು, ಇದರಿಂದ ನನ್ನ ಕುಟುಂಬವೂ ಸಮಸ್ಯೆಗೆ ಸಿಲುಕಿದೆ. ಇದು ಶುದ್ಧ ರಾಜಕೀಯ ಸೇಡಿನಿಂದ ಕೂಡಿದೆ ಎಂದು ಹೇಳಿದರು.

ನನ್ನ ಕುಟುಂಬವೂ ರಾಜಕೀಯ ದ್ವೇಷದ ಬಲಿಪಶುವಾಗಿದೆ. ನಾನು ಯಾರಿಂದಲೂ ಒಂದು ರೂಪಾಯಿ ಸಹ ತೆಗೆದುಕೊಂಡಿಲ್ಲ. ನನಗೆ ಅರ್ಥವಾಗದ ವಿಷಯ ಎಂದರೆ, ನಾನು ಏನನ್ನಾದರೂ ಖರೀದಿಸಿದರೆ ಅಥವಾ ಕಪ್, ಪ್ಲೇಟ್ ಖರೀದಿಸಿದರೆ ಇಡಿ ಈ ಬಗ್ಗೆ ತನಿಖೆ ನಡೆಸಬಹುದೇ? ಎಂದು ವ್ಯಂಗ್ಯವಾಡಿದರು. ಆರೋಪಗಳ ಸುರಿಮಳೆಯನ್ನೇ ಹರಿಸಿದ ಮಮತಾ ಬ್ಯಾನರ್ಜಿ ಅವರು ಒಮ್ಮೆಯೂ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಹೆಸರೆತ್ತದೇ ಭಾಷಣದ ಉದ್ದಕ್ಕೂ ಟೀಕಾಪ್ರಹಾರ ನಡೆಸಿದರು.

ಉದ್ಯಮಿಗಳಿಗೆ ಕಿರುಕುಳ: ರಿಯಲ್ ಎಸ್ಟೇಟ್ ಸಮಾವೇಶದ ವೇದಿಕೆಯಿಂದಲೇ ಉದ್ಯಮಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ ಸಿಎಂ ಮಮತಾ, ಕೆಲ ಏಜೆನ್ಸಿಗಳು ಇಂತಹ ಕಿರುಕುಳ ನೀಡುತ್ತಿವೆ. ಉದ್ಯಮಿಗಳು ಧೈರ್ಯ ಕಳೆದುಕೊಳ್ಳಬೇಡಿ. ಕೆಲವರು ಕೀಟಲೆ ಮಾಡುತ್ತಾರೆ. ಎಲ್ಲ ವ್ಯಾಪಾರಿಗಳಿಗೂ ಯಾವುದೋ ಏಜೆನ್ಸಿಯವರು ಪದೇ ಪದೆ ಕಿರುಕುಳ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯಮಿಗಳು ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ತೃಣಮೂಲ ಕಾಂಗ್ರೆಸ್‌ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮುಖ್ಯಮಂತ್ರಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, ತನಿಖಾ ಸಂಸ್ಥೆಗಳು ಅವರ ವಿಚಾರಣೆ ನಡೆಸುತ್ತಿದೆ. ಇದನ್ನು ಮಮತಾ ಅವರು ಪ್ರಸ್ತಾಪಿಸಿ ತಮ್ಮ ಕುಟುಂಬವೂ ರಾಜಕೀಯ ಸೇಡಿಗೆ ಬಲಿಯಾಗಿದೆ ಎಂದು ಹೇಳಿದ್ದಾರೆ.

ಮಾಧ್ಯಮದವರನ್ನೂ ಬಳಸಿಕೊಂಡು ಬಂಗಾಳ ಸರ್ಕಾರವನ್ನು ದೂಷಿಸಲು ಹಲವಾರು ಬಾರಿ ಪ್ರಯತ್ನಿಸಲಾಗಿದೆ. ರಾಜ್ಯದಲ್ಲಿ ಕೋಮುಗಲಭೆ ಹೊರತು ಬೇರೇನೂ ಅಭಿವೃದ್ಧಿಯಾಗುತ್ತಿಲ್ಲ ಎಂದು ರಾಜಕೀಯ ಒತ್ತಡದ ಹೇರಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಮಾಡಲಾಗುತ್ತಿದೆ. ಆದರೆ ವಾಸ್ತವ ಪರಿಸ್ಥಿತಿಯನ್ನು ನೋಡಿದರೆ, ಬಂಗಾಳವು ಎಲ್ಲಾ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆ: ಮೋದಿ ವಿರುದ್ಧ ಕೇಜ್ರಿ ಆಕ್ರೋಶ... ಮಸೂದೆ ಉದ್ದೇಶ ಒಳ್ಳೆಯದಾಗಿದ್ದರೆ ಬೆಂಬಲ - ಪ್ರಶಾಂತ್​ ಕಿಶೋರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.