ETV Bharat / bharat

ಕೋವಿಡ್​ನಿಂದ ಮಗನ ಕಳೆದುಕೊಂಡ ತಂದೆಗೆ 1 ಕೋಟಿ ರೂ. ಪರಿಹಾರ ನೀಡಿದ ಕೇಜ್ರಿವಾಲ್ - ದೆಹಲಿ ಕೋವಿಡ್​

ಕೊರೊನಾ ಮಹಾಮಾರಿ ವೈರಸ್​​ನಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಇದರಲ್ಲಿ ವೈದ್ಯರು, ಫ್ರಂಟ್​ ಲೈನ್​ ಕಾರ್ಯಕರ್ತರು ಸೇರಿಕೊಂಡಿದ್ದಾರೆ.

CM Kejriwal
CM Kejriwal
author img

By

Published : May 22, 2021, 8:43 PM IST

Updated : May 22, 2021, 9:09 PM IST

ನವದೆಹಲಿ: ಕೊರೊನಾ ವಾರಿಯರ್​ ಆಗಿ ಸೇವೆ ಸಲ್ಲಿಸುತ್ತಿರುವ ಅನೇಕರು ಡೆಡ್ಲಿ ವೈರಸ್​ನಿಂದ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ದೆಹಲಿಯಲ್ಲೂ ಅನೇಕರು ಸಾವಿಗೀಡಾಗಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್​ಗೆ ಬಲಿಯಾಗಿರುವ 26 ವರ್ಷದ ವೈದ್ಯನೊಬ್ಬನ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಇದೀಗ 1 ಕೋಟಿ ರೂ. ಪರಿಹಾರ ನೀಡಿದ್ದಾರೆ.

  • Delhi CM Arvind Kejriwal meets the family of 26-year-old Dr Anas, a doctor who succumbed to #COVID19, and hands over a cheque of Rs 1 Crore to them

    My son was on duty & serving people when he lost his life. I hope my other children may also serve our nation, says Dr Anas' Father pic.twitter.com/PlQBeSTyXe

    — ANI (@ANI) May 22, 2021 " class="align-text-top noRightClick twitterSection" data=" ">

ಕೊರೊನಾ ವಾರಿಯರ್​ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಅನಾಸ್ ಡೆಡ್ಲಿ ವೈರಸ್​ನಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇಂದು ಅವರ ಮನೆಗೆ ಭೇಟಿ ನೀಡಿರುವ ದೆಹಲಿ ಸಿಎಂ, ತಂದೆಗೆ ಸಾಂತ್ವನ ಹೇಳಿದ್ದು, 1 ಕೋಟಿ ರೂ. ಪರಿಹಾರ ಚೆಕ್​ ನೀಡಿದ್ದಾರೆ. ನಿನ್ನೆ ಕೂಡ ಕೋವಿಡ್​ನಿಂದ ಸಾವನ್ನಪ್ಪಿದ್ದ ಶಿಕ್ಷಕನ ಕುಟುಂಬಕ್ಕೆ ಭೇಟಿ ನೀಡಿದ್ದ ಕೇಜ್ರಿವಾಲ್ 1 ಕೋಟಿ ರೂ. ಪರಿಹಾರ ಚೆಕ್​ ನೀಡಿದ್ದರು.

ಇದನ್ನೂ ಓದಿ: ಸರ್ಕಾರಗಳಿಗೆ ಮಾತ್ರ ಲಸಿಕೆ ಪೂರೈಸಿ, ಖಾಸಗಿ ಆಸ್ಪತ್ರೆಗಳಿಗಲ್ಲ: ಆಂಧ್ರ ಸಿಎಂ

ದೆಹಲಿಯಲ್ಲಿ ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪುವ ಕೊರೊನಾ ವಾರಿಯರ್​ಗೆ ಅಲ್ಲಿನ ಸರ್ಕಾರ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ.

ಕಡಿಮೆಯಾಯ್ತು ಕೋವಿಡ್​ ಸಂಖ್ಯೆ: ದೆಹಲಿಯಲ್ಲಿ ಇದೀಗ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 2,260 ಜನರಲ್ಲಿ ಸೋಂಕು ಕಾಣಿಸಿದ್ದು, 182 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್​ 31ರ ಬಳಿಕ ಇದೇ ಮೊದಲ ಸಲ ಇಷ್ಟೊಂದು ಕಡಿಮೆ ಮಟ್ಟದ ಪ್ರಕರಣ ಕಾಣಿಸಿಕೊಂಡಿವೆ.

Last Updated : May 22, 2021, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.