ನವದೆಹಲಿ : ರೂಪಾಂತರ ವೈರಸ್ ಒಮಿಕ್ರೋನ್ ಈವರೆಗೆ ಭಾರತದಲ್ಲಿ ಕಾಣಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಂಡಿವೆ. ವಿದೇಶಿ ಪ್ರವಾಸಿಗರ ಮೇಲೆ ಹದ್ದಿನ ಕಣ್ಣು ಇಟ್ಟಿವೆ. ದೆಹಲಿ ಕೇಜ್ರಿವಾಲ್ ಸರ್ಕಾರ ಕೂಡ ಕೆಲವೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಒಮಿಕ್ರೋನ್ಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಹತ್ವದ ಸಭೆ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾಹಿತಿ ನೀಡಿರುವ ಅವರು, ಭಾರತಕ್ಕೆ ಈವರೆಗೆ ರೂಪಾಂತರ ಒಮಿಕ್ರೋನ್ ಲಗ್ಗೆ ಹಾಕಿಲ್ಲ.
ಆದರೆ, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕಾಗಿರುವುದು ಸರ್ಕಾರಗಳ ಕರ್ತವ್ಯವಾಗಿದೆ. ದೆಹಲಿಯಲ್ಲಿ 30,000 ಆಮ್ಲಜನಕ ಹಾಸಿಗೆ ಸಿದ್ಧಗೊಂಡಿವೆ. ಅದರಲ್ಲಿ 10,000 ಐಸಿಯು ಹಾಸಿಗೆ ಸೇರಿವೆ ಎಂದಿದ್ದಾರೆ.
-
I held a meeting with the officials today. We hope #Omicron doesn't come to India, but we need to be prepared as responsible governments...As far as the beds are concerned, we have prepared 30,000 oxygen beds and around 10,000 of these are ICU beds: Delhi CM Arvind Kejriwal pic.twitter.com/UQ38ZWaSQR
— ANI (@ANI) November 30, 2021 " class="align-text-top noRightClick twitterSection" data="
">I held a meeting with the officials today. We hope #Omicron doesn't come to India, but we need to be prepared as responsible governments...As far as the beds are concerned, we have prepared 30,000 oxygen beds and around 10,000 of these are ICU beds: Delhi CM Arvind Kejriwal pic.twitter.com/UQ38ZWaSQR
— ANI (@ANI) November 30, 2021I held a meeting with the officials today. We hope #Omicron doesn't come to India, but we need to be prepared as responsible governments...As far as the beds are concerned, we have prepared 30,000 oxygen beds and around 10,000 of these are ICU beds: Delhi CM Arvind Kejriwal pic.twitter.com/UQ38ZWaSQR
— ANI (@ANI) November 30, 2021
ಇದನ್ನೂ ಓದಿರಿ: Twitter CEO ಆಗಿ ನೇಮಕಗೊಂಡ ಪರಾಗ್ ಅಗರವಾಲ್ ತಿಂಗಳ ಸ್ಯಾಲರಿ ಎಷ್ಟು?
ಇದಲ್ಲದೆ, 6,800 ಐಸಿಯು ಹಾಸಿಗೆಗಳ ಕಟ್ಟಡ ನಿರ್ಮಾಣ ಹಂತದಲ್ಲಿವೆ. ಫೆಬ್ರವರಿ ವೇಳೆಗೆ ಬಳಕೆಗೆ ಸಿದ್ಧಗೊಳ್ಳಲಿವೆ ಎಂದರು. ಪ್ರತಿ ಮುನ್ಸಿಪಾಲ್ ವಾರ್ಡ್ ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ಸಿದ್ಧಗೊಳಿಸಲು ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ 27,000 ಆಕ್ಸಿಜನ್ ಬೆಡ್ ಸಿದ್ಧಗೊಳ್ಳಲಿವೆ ಎಂದರು.
ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅರವಿಂದ್ ಕೇಜ್ರಿವಾಲ್, ವಿದೇಶಿ ವಿಮಾನಯಾನ ಹಾರಾಟ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಅಲ್ಲಿಂದ ಬರುವ ಪ್ರವಾಸಿಗರ ಮೇಲೆ ತೀವ್ರ ನಿಗಾವಹಿಸುವಂತೆ ತಿಳಿಸಿದ್ದಾರೆ.