ETV Bharat / bharat

ದಕ್ಷಿಣ ಕಾಶ್ಮೀರದಲ್ಲಿ ಮೇಘ ಸ್ಫೋಟ; ಮುನ್ನೆಚ್ಚರಿಕೆಯಿಂದಾಗಿ ತಪ್ಪಿದ ಜೀವಹಾನಿ.. - ನಾಲ್ ಲಾಮರ್ ಪ್ರದೇಶ

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬ್ರಿನಾಲ್ ಲಾಮರ್ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, ಜನರಲ್ಲಿ ಭಯ ಮೂಡಿದೆ. ಅಬ್ಬರದ ಮಳೆಯಿಂದ ಇಲ್ಲಿನ ಶಾಲೆ ನೀರು ನುಗ್ಗಿದ್ದು, ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Cloud burst
ದಕ್ಷಿಣ ಕಾಶ್ಮೀರದಲ್ಲಿ ಮೇಘ ಸ್ಫೋಟ
author img

By

Published : May 3, 2023, 6:31 PM IST

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬ್ರಿನಾಲ್ ಲಾಮರ್ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿದೆ.

ಶ್ರೀನಗರ: ಕುಲ್ಗಾಮ್ ಜಿಲ್ಲೆಯ ಗ್ರಾಮಗಳಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಆದರೆ, ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬ್ರಿನಾಲ್ ಲಾಮರ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೇ ಮೇಘ ಸ್ಫೋಟವಾಗಿದ್ದು, ಜನರಲ್ಲಿ ಭೀತಿ ಮೂಡಿದೆ. ಬರ್ನಾಲ್ ಲಾಮರ್ ಗ್ರಾಮದಲ್ಲಿ ಬುಧವಾರ ಮೇಘ ಸ್ಫೋಟವಾಗಿದ್ದು, ಪರ್ವತಗಳಿಂದ ಗ್ರಾಮಕ್ಕೆ ಮಳೆ ನೀರು ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದರು.

ಶಾಲೆ ಜಾಲಾವೃತ- ಮಕ್ಕಳನ್ನು ಬೇರೆಡೆ ಸ್ಥಳಾಂತರ: ಮೇಘ ಸ್ಫೋಟದ ಹಿನ್ನೆಲೆ ತಕ್ಷಣವೇ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿದೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ಶಾಲೆಯ ಆಡಳಿತವು ಈ ಹಿಂದೆ ಶಾಲಾ ಮಕ್ಕಳನ್ನು ಸುರಕ್ಷಿತ ವಹಿಸಿತು. ಶಾಲೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ ಅವರು, ''ಮೊದಲು ಮಕ್ಕಳನ್ನು ಶಾಲೆಯಿಂದ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದೇವೆ. ಇತ್ತ ಶಾಲೆಯ ಅಡುಗೆ ಕೋಣೆ ಜಲಾವೃತವಾಗಿದ್ದು, ಮಕ್ಕಳ ಮಧ್ಯಾಹ್ನದ ಊಟವೂ ನಾಶವಾಗಿಹೊರಗೆ ಬಿದ್ದಿದೆ'' ಎಂದು ತಿಳಿಸಿದರು. ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಇದರಿಂದ ತೋಟಗಳು ಮತ್ತು ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಜೊತೆಗೆ ಆರ್ಥಿಕ ಇಲಾಖೆಯ ತಂಡಗಳು ಪ್ರದೇಶಕ್ಕೆ ಭೇಟಿ ನೀಡಿದ್ದು, ಹಾನಿಯ ಅಂದಾಜು ಮಾಡುತ್ತಿವೆ.

ನಿನ್ನೆಯೂ ಕೋಕರ್ನಾಗ್​ನಲ್ಲಿ ಮೇಘಸ್ಫೋಟ: ದಕ್ಷಿಣ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಕ್ಷೇತ್ರದಲ್ಲಿ ಮೇಘಸ್ಫೋಟದಿಂದಾಗಿ ಏಷ್ಯಾದ ಅತಿದೊಡ್ಡ ಟ್ರೌಟ್ ಫಾರ್ಮ್‌ನಲ್ಲಿ ಮಂಗಳವಾರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ ಸಾಕಷ್ಟು ಹಾನಿಯಾಗಿದೆ. ಆದರೆ, ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಉದ್ಯಾನದಲ್ಲಿ ಸಿಲುಕಿದ್ದ ಅನೇಕ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಅವರಿಗೆ ಸ್ಥಳದಲ್ಲಿ ಆಹಾರ ಮತ್ತು ಪಾನೀಯಗಳನ್ನು ಒದಗಿಸಲಾಗಿತ್ತು.

ಕಾಶ್ಮೀರ ಕಣಿವೆಯಲ್ಲಿ ಮೇ 7ರವರೆಗೆ ಕೆಟ್ಟ ಹವಾಮಾನ: ಕಳೆದ ಹಲವು ದಿನಗಳಿಂದ ಕಾಶ್ಮೀರ ಕಣಿವೆಯಲ್ಲಿ ಭಾರೀ ಮಳೆ ಮುಂದುವರಿದಿದೆ. ಕಣಿವೆಯಲ್ಲಿ ಮೇ 7ರವರೆಗೆ ಹವಾಮಾನವು ಕೆಟ್ಟದಾಗಿರಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದಕ್ಕೂ ಮುನ್ನವೇ, ಅಂದ್ರೆ ಮಂಗಳವಾರ ಸಂಜೆ, ದಕ್ಷಿಣ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಅರಣ್ಯ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಟ್ರೌಟ್ ಫಾರ್ಮ್​ಗೆ ನುಗ್ಗಿದ ಮಳೆ ನೀರು: ಮೂಲಗಳ ಪ್ರಕಾರ, ಕೋಕರ್ನಾಗ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು, ಜನರು ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಪ್ರವಾಹದ ನೀರು ಟ್ರೌಟ್ ಫಾರ್ಮ್ ಅನ್ನು ಪ್ರವೇಶಿಸಿತು. ಅಬ್ಬರ ಮಳೆಯಿಂದ ಫಾರ್ಮ್ ಮತ್ತು ತೋಟಕ್ಕೆ ಗಣನೀಯ ಹಾನಿಯುಂಟಾಯಿತು. ಪ್ರವಾಹ ಪರಿಸ್ಥಿತಿಯ ನಂತರ, ಕೊಕರ್ನಾಗ್ ಆಡಳಿತವು ಪೊಲೀಸ್, ಹಣಕಾಸು ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿತು. ಅವರು ಪ್ರವಾಹದಲ್ಲಿ ಸಿಲುಕಿರುವ ಅನೇಕ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

ಹಲವು ಪ್ರದೇಶಗಳು ಜಲಾವೃತ: ಮೇಲ್ಭಾಗದ ಗುಡ್ಡದಲ್ಲಿ ಮೇಘಸ್ಫೋಟದ ಘಟನೆ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಗುಡ್ಡದಿಂದ ಪ್ರವಾಹದ ನೀರು ಹರಿದು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳು ಜಲಾವೃತಗೊಂಡವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿಸಲು ಹತ್ತಿರದ ನದಿಗಳು ಮತ್ತು ತೊರೆಗಳಿಂದ ದೂರವಿರಲು ಜನರಿಗೆ ಎಚ್ಚರಿಕೆ ನೀಡಲಾಗಿತ್ತು.

ಇದನ್ನೂ ಓದಿ: ಕಾರು ಗುದ್ದಿದ ರಭಸಕ್ಕೆ ಟಾಪ್​ ಮೇಲೆಯೇ ಬಿದ್ದ ಬೈಕ್​ ಸವಾರ: ಶವದೊಂದಿಗೆ 3 ಕಿಮೀ ಚಲಿಸಿದ ಆರೋಪಿ ಚಾಲಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.