ETV Bharat / bharat

ಡ್ರಾಪ್​ ನೆಪದಲ್ಲಿ ಬಾಲಕಿಯನ್ನ ಕರೆದೊಯ್ದು ಸಾಮೂಹಿಕ ಅತ್ಯಾಚಾರ.. ಪರಿಚಯಸ್ಥನಿಂದಲೇ ನಡೀತು ದುಷ್ಕೃತ್ಯ - ಪಶ್ಚಿಮಬಂಗಾಳದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ,

ಆರೋಪಿಗಳಿಬ್ಬರು ಆಕೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಆಕೆ ಮಾರುಕಟ್ಟೆಗೆ ಹಿಂತಿರುಗಿ ಘಟನೆಯ ಬಗ್ಗೆ ಸ್ಥಳೀಯರಿಗೆ ತಿಳಿಸಿದ್ದಾಳೆ. ಈ ಘಟನೆ ಪೋಷಕರಿಗೆ ತಿಳಿದಿದ್ದು, ಕೂಡಲೇ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ..

Class 9 student gangraped, Class 9 student gangraped in Bengal, Bengal crime news, ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ಪಶ್ಚಿಮಬಂಗಾಳದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, ಪಶ್ಚಿಮಬಂಗಾಳ ಅಪರಾಧ ಸುದ್ದಿ,
ಡ್ರಾಪ್​ ನೆಪದಲ್ಲಿ ಬಾಲಕಿಯನ್ನ ಕರೆದೊಯ್ದು ಸಾಮೂಹಿಕ ಅತ್ಯಾಚಾರ
author img

By

Published : Dec 18, 2021, 2:35 PM IST

ಬರ್ಧಮಾನ್ : ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ಗುರುವಾರ ಸಂಜೆ 9ನೇ ತರಗತಿಯ ವಿದ್ಯಾರ್ಥಿ ಮಾರುಕಟ್ಟೆಗೆ ಹೋದಾಗ ಭಟಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮರುನ್ ಬಜಾರ್ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿ ಇ-ರಿಕ್ಷಾ ಚಾಲಕನಾಗಿದ್ದು, ಬಾಲಕಿಯ ಪರಿಚಯಸ್ಥಳಾಗಿದ್ದಾಳೆ. ಘಟನೆಯ ದಿನ ಆಕೆ ಮಾರುಕಟ್ಟೆಯ ಕಡೆಗೆ ಹೋಗುತ್ತಿರುವುದನ್ನು ನೋಡಿದ ಆತ ಡ್ರಾಪ್​ ಮಾಡುವುದಾಗಿ ಹೇಳಿದ್ದಾನೆ.

ಪರಿಚಯಸ್ಥ ಹಿನ್ನೆಲೆ ಬಾಲಕಿ ಆತನೊಂದಿಗೆ ತೆರಳಿದ್ದಾಳೆ. ಬಳಿಕ ಮಾರ್ಗಮಧ್ಯೆ ಮತ್ತೊಬ್ಬ ಆರೋಪಿ ವಾಹನವನ್ನು ಹತ್ತಿದ್ದಾನೆ. ಇಬ್ಬರೂ ಸೇರಿ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಆರೋಪಿಗಳಿಬ್ಬರು ಆಕೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಆಕೆ ಮಾರುಕಟ್ಟೆಗೆ ಹಿಂತಿರುಗಿ ಘಟನೆಯ ಬಗ್ಗೆ ಸ್ಥಳೀಯರಿಗೆ ತಿಳಿಸಿದ್ದಾಳೆ. ಈ ಘಟನೆ ಪೋಷಕರಿಗೆ ತಿಳಿದಿದ್ದು, ಕೂಡಲೇ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಬಾಲಕಿಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದು, ಇ-ರಿಕ್ಷಾ ಚಾಲಕನನ್ನು ಶುಕ್ರವಾರ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಬರ್ಧಮಾನ್ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.