ETV Bharat / bharat

ಪ್ರವೇಶ ದಾಖಲೆ ಇಲ್ಲದೇ ಎಂಬಿಬಿಎಸ್​ ತರಗತಿಗೆ ಹಾಜರಾದ ವಿದ್ಯಾರ್ಥಿ: ತನಿಖೆಗೆ ಮುಂದಾದ ಕೇರಳ ಪೊಲೀಸರು

author img

By

Published : Dec 10, 2022, 12:46 PM IST

ಅನೇಕ ವಿದ್ಯಾರ್ಥಿಗಳು ಮೊದಲ ದಿನ ತಡವಾಗಿ ತರಗತಿಗೆ ಬರುತ್ತಾರೆ. ಈ ವೇಳೆ ಅವರ ಆಡ್ಮಿಶನ್​ ಕಾರ್ಡ್​ ಪರಿಶೀಲಿಸದೇ ತರಗತಿಗೆ ಅನುಮತಿ ನೀಡುತ್ತೇವೆ. ಅದೇ ರೀತಿ ಯಾರೋ ವಿದ್ಯಾರ್ಥಿ ಸರಿಯಾದ ದಾಖಲಾತಿ ಪಡೆಯದೇ ವಿದ್ಯಾರ್ಥಿ ನಾಲ್ಕು ದಿನ ತರಗತಿಗೆ ಹಾಜರಾಗಿದ್ದಾನೆ.

ಪ್ರವೇಶ ದಾಖಲೆ ಇಲ್ಲದೇ ಎಂಬಿಬಿಎಸ್​ ತರಗತಿಗೆ ಹಾಜರಾದ ವಿದ್ಯಾರ್ಥಿ; ತನಿಖೆಗೆ ಮುಂದಾದ ಕೇರಳ ಪೊಲೀಸರು
class-12-student-who-attended-mbbs-class-without-admission-record-the-kerala-police-has-started-an-investigation

ಕೋಯಿಕ್ಕೋಡ್​​: ಯಾವುದೇ ಪ್ರವೇಶ ದಾಖಲಾತಿ ಪಡೆಯದೇ ಕ್ಲಾಸ್​ 12 ವಿದ್ಯಾರ್ಥಿ ನಾಲ್ಕು ದಿನಗಳ ಕಾಲ ಎಂಬಿಬಿಎಸ್​ನ ತರಗತಿಗೆ ಹಾಜರಾಗಿದ್ದಾನೆ ಎಂದು ಕೋಯಿಕ್ಕೋಡ್​​ ಮೆಡಿಕಲ್​ ಕಾಲೇಜು ನೀಡಿದ ದೂರಿನ ಅನ್ವಯ ಕೇರಳ ಪೊಲೀಸರು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ನಕಲಿ ದಾಖಲೆ ಅಥವಾ ವಂಚನೆ ಪ್ರಕರಣವಲ್ಲ. ಸರಿಯಾದ ದಾಖಲಾತಿ ಪ್ರವೇಶ ಪಡೆಯದೇ ಯಾರೋ ತರಗತಿಗೆ ಹಾಜರಾಗಿದ್ದಾರೆ ಎಂಬುದರ ಕುರಿತಾಗಿದೆ. ಈ ಕುರಿತು ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆ ಬಳಿಕ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅನೇಕ ವಿದ್ಯಾರ್ಥಿಗಳು ಮೊದಲ ದಿನ ತಡವಾಗಿ ತರಗತಿಗೆ ಬರುತ್ತಾರೆ. ಈ ವೇಳೆ, ಅವರ ಅಡ್ಮಿಶನ್​ ಕಾರ್ಡ್​ ಪರಿಶೀಲಿಸದೇ ತರಗತಿಗೆ ಅನುಮತಿ ನೀಡುತ್ತೇವೆ. ಅದೇ ರೀತಿ ಯಾರೋ ವಿದ್ಯಾರ್ಥಿ ಸರಿಯಾದ ದಾಖಲಾತಿ ಪಡೆಯದೇ ವಿದ್ಯಾರ್ಥಿ ನಾಲ್ಕು ದಿನ ತರಗತಿಗೆ ಹಾಜರಾಗಿದ್ದಾನೆ. ಐದನೇ ದಿನ ವಿದ್ಯಾರ್ಥಿಗೆ ತರಗತಿಗೆ ಹಾಜರಾಗದ ಬೆನ್ನಲ್ಲೇ ಈ ಕುರಿತು ನಮಗೆ ಅರಿವಿಗೆ ಬಂದಿದೆ ಎಂದು ಕಾಲೇಜಿನ ಉಪ ಪ್ರಾಂಶುಪಾಲರಾದ ಕೆಜಿ ಸಜಿತ್​ ಕುಮಾರ್​ ತಿಳಿಸಿದ್ದಾರೆ.

ಪ್ರಥಮ ವರ್ಷದ ಎಂಬಿಬಿಎಸ್​ ತರಗತಿಗಳು ನವೆಂಬರ್​ 25 ರಿಂದ ಆರಂಭವಾಗಿದ್ದು, 245 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಅವರ ದಾಖಲೆಗಳನ್ನು ಪಡೆದು ಆಡ್ಮಿಶನ್​ ಕಾರ್ಡ್​ ಅನ್ನು ನೀಡಲಾಗಿದೆ. ಈ ವಿದ್ಯಾರ್ಥಿ ಬಳಿಕ ಆಡ್ಮಿಶನ್​ ಕಾರ್ಡ್​ ಇರಲಿಲ್ಲ. ಮೊದಲ ದಿನ ಬಂದ ವಿದ್ಯಾರ್ಥಿಗಳ ದಾಖಲೆ ಪರಿಶೀಲಿಸದೇ ಎಲ್ಲರನ್ನೂ ತರಗತಿ ಒಳಗೆ ಸೇರಿಸಲಾಗಿದೆ.

ಆಡ್ಮಿಶನ್​ ಕಾರ್ಡ್​ ಅನುಸಾರ ಹಾಜರಾತಿ ದಾಖಲೆ ತಯಾರು ಮಾಡಲಾಗಿದೆ. ಆದರೆ, ತರಗತಿಯಲ್ಲಿ 246 ವಿದ್ಯಾರ್ಥಿಗಳು ಇರುವುದು ಪತ್ತೆಯಾಗಿದೆ. ಆಗ ಯಾರೋ ವಿದ್ಯಾರ್ಥಿ ನಾಲ್ಕು ದಿನ ಪ್ರವೇಶ ದಾಖಲಾತಿ ಇಲ್ಲದೇ ಹಾಜರಾಗಿರುವುದು ಪತ್ತೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಉಪ್ಪು ಕಮ್ಮಿ ಹಾಕಿದ್ದಕ್ಕೆ ಅಡುಗೆಯವನ ಕೊಲೆ: ಡಾಬಾ ಮಾಲೀಕರಿಗೆ ಜೈಲೂಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.