ETV Bharat / bharat

ಲೈಂಗಿಕ ಶೋಷಣೆ: ಡೆತ್​ನೋಟ್​ ಬರೆದಿಟ್ಟು, 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ - ಲೈಂಗಿಕ ಶೋಷಣೆಯಿಂದ ವಿದ್ಯಾರ್ಥಿನಿ ಆತ್ಮಹತ್ಯೆ

ಲೈಂಗಿಕ ಶೋಷಣೆ(Sexual harassments)ಗೊಳಗಾಗಿರುವ ವಿದ್ಯಾರ್ಥಿನಿಯೋರ್ವಳು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ನಿರ್ಧಾರ ಕೈಗೊಂಡಿದ್ದಾಳೆ.

Class 12 girl suicide
Class 12 girl suicide
author img

By

Published : Nov 20, 2021, 5:34 PM IST

ಕರೂರ್​​(ತಮಿಳುನಾಡು): ಲೈಂಗಿಕ ಶೋಷಣೆ(sexual harassment)ಯಿಂದ ಮನನೊಂದಿದ್ದ 12ನೇ ತರಗತಿ(Class 12 girl suicide) ವಿದ್ಯಾರ್ಥಿನಿವೋರ್ವಳು ಡೆತ್​ನೋಟ್​ (suicide note,)ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮಿಳುನಾಡಿನ ಕರೂರ್​​ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

17 ವರ್ಷದ ವಿದ್ಯಾರ್ಥಿನಿ(17 Year girl Suicide) ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದು, 'ಲೈಂಗಿಕ ಕಿರುಕುಳದಿಂದ ಸಾಯುವ ಕೊನೆ ಹುಡುಗಿ ನಾನೇ ಆಗಿರಬೇಕು' ಎಂದು ಬರೆದಿದ್ದಾಳೆ. ನಾನು ತೆಗೆದುಕೊಳ್ಳುವ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗುತ್ತದೆ. ಈ ಭೂಮಿಯ ಮೇಲೆ ತುಂಬಾ ವರ್ಷಗಳ ಕಾಲ ನಾನು ಬದುಕಬೇಕು ಎಂಬ ಆಸೆ ಇತ್ತು. ಆದರೆ ಇಷ್ಟು ಬೇಗ ಹೋಗುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ Sorry ಎಂದು ಬರೆದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಪಕ್ಕದ ಮನೆಯ ಮಹಿಳೆ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ.

ಇದನ್ನೂ ಓದಿರಿ: 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ, ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಈಗಾಗಲೇ ಡೆತ್​ನೋಟ್​ ವಶಕ್ಕೆ ಪಡೆದುಕೊಂಡು, ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೈಬರ್​ ಕ್ರೈಂ ಪೊಲೀಸರು(Cyber Crime police) ತನಿಖೆ ಆರಂಭ ಮಾಡಿದ್ದು, ವಿದ್ಯಾರ್ಥಿನಿ ವ್ಯಾಟ್ಸ್​ಆ್ಯಪ್(WhatsApp chat) ಚಾಟ್​ನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿರಿ: ಕೃಷಿ ಕಾಯ್ದೆ ನಿಷೇಧ ಬೆನ್ನಲ್ಲೇ ಸಿಎಎ, ಆರ್ಟಿಕಲ್​​ 370 & ಯುಎಪಿಎ ಹಿಂಪಡೆದುಕೊಳ್ಳಲು ಹೆಚ್ಚಿದ ಒತ್ತಡ

ಕಳೆದ ವಾರ ಕೊಯಮತ್ತೂರಿನಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ​ ಶಿಕ್ಷಕನ ವಿರುದ್ಧ ಲೈಂಗಿಕ ದೌರ್ಜನ್ಯ ವಿರೋಧಿ ಕಾಯ್ದೆಯಡಿ ದೂರು ದಾಖಲಿಸಿ, ಆತನನ್ನು ಬಂಧಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.