ETV Bharat / bharat

JNU Clash: ಜೆಎನ್​ಯುನಲ್ಲಿ ಎಬಿವಿಪಿ - ಎಡಪಂಥೀಯ ವಿದ್ಯಾರ್ಥಿಗಳ ಮಧ್ಯೆ ಗಲಾಟೆ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಇದೀಗ ಎಬಿವಿಪಿ ಹಾಗೂ ಎಡಪಂಥೀಯ ಸಂಘಟನೆಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿರುವುದು ಬೆಳಕಿಗೆ ಬಂದಿದೆ.

JNU Clash
JNU Clash
author img

By

Published : Nov 15, 2021, 10:46 AM IST

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ( Jawaharlal Nehru University) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಮತ್ತು ಎಡಪಂಥೀಯ ವಿದ್ಯಾರ್ಥಿಗಳ (Left Students) ಮಧ್ಯೆ ಗಲಾಟೆ ನಡೆದಿದ್ದು, ಅನೇಕರು ಗಾಯಗೊಂಡಿದ್ದಾರೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿ ಚಟುವಟಿಕೆ ಕೇಂದ್ರದಲ್ಲಿ ಸಭೆ ನಡೆಸುತ್ತಿದ್ದ ವೇಳೆ ನುಗ್ಗಿದ ಕೆಲ ಎಡಪಂಥೀಯ ಸಂಘಟನೆಗಳ ವಿದ್ಯಾರ್ಥಿಗಳು ನಮ್ಮವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ. ಹಲ್ಲೆಗೊಳಗಾದವರಲ್ಲಿ ಯುವತಿಯರೂ ಇದ್ದಾರೆ. ಓರ್ವ ಯುವತಿಯ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ದೆಹಲಿಯ ಏಮ್ಸ್​ನಲ್ಲಿ ದಾಖಲಿಸಲಾಗಿದೆ ಎಂದು ಜೆಎನ್​ಯು ಎಬಿವಿಪಿ ಘಟಕದ ಅಧ್ಯಕ್ಷ ಶಿವಂ ಚೌರಾಸಿಯಾ ಆರೋಪಿಸಿದ್ದಾರೆ.

  • ABVP'S GOONS UNLEASHED VIOLENCE IN JNU TODAY.

    Time and again these criminals have unleashed violence on students and have disrupted campus democracy.

    Will the JNU Administration still be silent ? Will no actions be taken on the goons ?

    Photos of students attacked today. pic.twitter.com/ZnkjZ10Vhq

    — Aishe (ঐশী) (@aishe_ghosh) November 14, 2021 " class="align-text-top noRightClick twitterSection" data=" ">

ಇತ್ತ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ (JNUSU) ಅಧ್ಯಕ್ಷೆ ಮತ್ತು ವಿಶ್ವವಿದ್ಯಾನಿಲಯದ ಎಸ್‌ಎಫ್‌ಐ (SFI) ಘಟಕದ ಸದಸ್ಯೆ ಐಶೆ ಘೋಷ್ (Aishe Ghosh), "ಎಬಿವಿಪಿ 'ಗೂಂಡಾಗಳು' ವಿದ್ಯಾರ್ಥಿಗಳ ಮೇಲೆ ಮತ್ತೆ ತಮ್ಮ ದಾಳಿಯನ್ನು ಪ್ರಾರಂಭಿಸಿದ್ದು, ಕ್ಯಾಂಪಸ್ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಜೆಎನ್‌ಯು ಆಡಳಿತ ಇನ್ನೂ ಮೌನವಾಗಿದೆಯೇ? ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲವೇ?" ಎಂದು ಟ್ವೀಟ್ ಮಾಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.