ETV Bharat / bharat

ವೈಕುಂಠ ಏಕಾದಶಿ: ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಸಿಜೆಐ ಎನ್​ವಿ ರಮಣ

CJI N V Ramana visits Tirupati: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ​ವಿ ರಮಣ ಆಂಧ್ರಪ್ರದೇಶ ತಿರುಪತಿಗೆ ಭೇಟಿ ನೀಡಿದ್ದು, ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

cji-ramana-worships-at-lord-sri-venkateswara-shrine
ವೈಕುಂಠ ಏಕಾದಶಿ: ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಸಿಜೆಐ ಎನ್​ವಿ ರಮಣ
author img

By

Published : Jan 13, 2022, 12:20 PM IST

ತಿರುಪತಿ(ಆಂಧ್ರಪ್ರದೇಶ): ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​ ವಿ ರಮಣ ಆಂಧ್ರಪ್ರದೇಶ ತಿರುಪತಿಗೆ ಭೇಟಿ ನೀಡಿದ್ದು, ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೂಜೆಯ ನಂತರ ವೈಕುಂಠ ಏಕಾದಶಿಯ ವೇಳೆ ಮಾತ್ರ ತೆರೆಯಲ್ಪಡುವ ವೈಕುಂಠ ದ್ವಾರಂ ಎಂದು ಕರೆಯಲ್ಪಡುವ ಪವಿತ್ರ ಮಾರ್ಗದಲ್ಲಿ ಪ್ರದಕ್ಷಿಣೆ ಹಾಕಿದರು. ಈ ಮಾರ್ಗ ದೇವಾಲಯದ ಗರ್ಭಗುಡಿಯನ್ನು ಸುತ್ತುವರೆದಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ರಾತ್ರಿಯೇ ತಿರುಮಲಕ್ಕೆ ಬಂದಿದ್ದ ನ್ಯಾ. ಎನ್​ ವಿ ರಮಣ, ರಾತ್ರಿ ಅಲ್ಲಿಯೇ ತಂಗಿದ್ದು, ಬೆಳಗ್ಗೆ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಅಲ್ಲಿಂದ ಹೊರಡುವ ಮೊದಲು ಶ್ರೀ ವೆಂಕಟೇಶ್ವರನ ಸ್ವರ್ಣ ರಥೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಶ್ರೀ ವೆಂಕಟೇಶ್ವರ ಮಾತ್ರವಲ್ಲದೇ, ತಿರುಚನೂರ್ ಸಮೀಪದಲ್ಲಿರುವ ಪದ್ಮಾವತಿ ದೇವಾಲಯಕ್ಕೂ ಎನ್ ​ವಿ ರಮಣ ಭೇಟಿ ನೀಡಿದ್ದಾರೆ. ಸಿಜೆಐ ಕಳೆದ ವರ್ಷ ಅಕ್ಟೋಬರ್ 14ರಂದು ತಿರುಪತಿಯ ದೇಗುಲಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: ವಿಯೆಟ್ನಾಂ ಕಾರ್ಮಿಕರ ಮೇಲೆ ಚೀನಾ ಸೈನಿಕರಿಂದ ಕಲ್ಲು ತೂರಾಟ!: ಮದ್ಯ ಸೇವಿಸಿದ್ದಾರೆಯೇ? ಎಂದು ಟ್ವಿಟ್ಟರ್​ನಲ್ಲಿ​ ಪ್ರಶ್ನೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.