ETV Bharat / bharat

'ಸಂವಿಧಾನದ ಆತ್ಮಕ್ಕೆ ಧಕ್ಕೆ ಬರದಂತೆ ಬದಲಾದ ಕಾಲಕ್ಕನುಗುಣವಾಗಿ ವಿಶ್ಲೇಷಿಸುವುದೇ ನ್ಯಾಯಾಧೀಶರ ಕೌಶಲ್ಯ' - ಸಂವಿಧಾನದ ಬಗ್ಗೆ ಸಿಜೆಐ ವ್ಯಾಖ್ಯಾನ

ಮಹಾರಾಷ್ಟ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಾನೂನು ಪರಿಭಾಷೆಯ ಬಗ್ಗೆ ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಸಂವಿಧಾನದ ಮೂಲ ಆಶಯ, ರಚನೆಗೆ ಧಕ್ಕೆಯಾಗದಂತೆ ಅದನ್ನು ವ್ಯಾಖ್ಯಾನಿಸಬೇಕು ಎಂದು ಕಿವಿಮಾತು ಹೇಳಿದರು.

cji-chandrachud-on-judges-skill
ಸಿಜೆಐ ಚಂದ್ರಚೂಡ್​
author img

By

Published : Jan 22, 2023, 10:29 AM IST

ಮುಂಬೈ (ಮಹಾರಾಷ್ಟ್ರ) : "ಬದಲಾಗುತ್ತಿರುವ ಕಾಲಘಟ್ಟ ಮತ್ತು ಪ್ರಕರಣಕ್ಕೆ ತಕ್ಕಂತೆ ಸಂವಿಧಾನದ ಮೂಲ ಆಶಯವನ್ನು ಮರೆಯದೇ ನ್ಯಾಯ ನಿರ್ಣಯ ಮಾಡುವುದರಲ್ಲಿ ನ್ಯಾಯಾಧೀಶರ ಕುಶಲತೆ ಅಡಗಿದೆ. ಸಂವಿಧಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಅದನ್ನು ಹೆಕ್ಕಿ ತೆಗೆಯುವ ಕೌಶಲ್ಯ ನಮ್ಮದಾಗಿರಬೇಕು" ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟರು.

ನಾನಿ ಪಾಲ್ಖಿವಾಲಾ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಕಾನೂನು ಉಪನ್ಯಾಸ ನೀಡಿದ ಸಿಜೆಐ, "ದೇಶದ ಸಂವಿಧಾನದ ಮೂಲ ರಚನೆಯು ಅದನ್ನು ವ್ಯಾಖ್ಯಾನಿಸುವ ಮತ್ತು ಅನುಷ್ಠಾನಕ್ಕೆ ತರುವವರಿಗೆ ಮಾರ್ಗದರ್ಶನ ನೀಡುತ್ತದೆ. ಕ್ಲಿಷ್ಟಕರ ಸಂಗತಿಗಳಿಗೂ ಅದರಲ್ಲಿ ಪರಿಹಾರವಿದೆ. ಅದನ್ನು ಕಾಲಕ್ಕೆ ತಕ್ಕಂತೆ ಅರಿತು ನಿರ್ಧರಿಸುವ ಚಾಕಚಕ್ಯತೆ ಜಡ್ಜ್​ಗಳಿಗೆ ಇರಬೇಕು" ಎಂದು ಹೇಳಿದರು.

"ಇತ್ತೀಚಿನ ದಶಕಗಳಲ್ಲಿ ದೇಶದ ಕಾನೂನು ಗ್ರಾಹಕರ ಕಲ್ಯಾಣ, ವಾಣಿಜ್ಯ ವಹಿವಾಟುಗಳಿಗೆ ಹೆಚ್ಚಿನ ಬೆಂಬಲ ನೀಡಿದೆ. ಅನ್ಯಾಯದ ವಿರುದ್ಧ ಕಾನೂನು ಕೆಲಸ ಮಾಡಿದೆ. ಇದು ಗಮನಾರ್ಹ ಬದಲಾವಣೆ. ಸಂವಿಧಾನದೊಂದಿಗೆ ನಾಗರಿಕರ ವಿಕಸನವೂ ಆಗಿರುವುದು ಮಹತ್ವದ್ದು. ನ್ಯಾಯಾಂಗದ ವ್ಯಾಖ್ಯಾನ, ನ್ಯಾಯಾಧೀಶರ ಕುಶಲತೆ ಸಂವಿಧಾನದ ಆತ್ಮವನ್ನು ಅಖಂಡವಾಗಿಟ್ಟುಕೊಂಡು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅದನ್ನು ಅರ್ಥೈಸುವುದಾಗಿದೆ" ಎಂದು ವಿಶ್ಲೇಷಿಸಿದರು.

ಎಲ್ಲದಕ್ಕೂ ಸಂವಿಧಾನವೇ ಅಂತಿಮ: "ಕಾನೂನಿನಡಿಯ ನಿಯಮಗಳು, ಅಧಿಕಾರಗಳ ಪ್ರತ್ಯೇಕತೆ, ನ್ಯಾಯಾಂಗ ವಿಮರ್ಶೆ, ಜಾತ್ಯತೀತತೆ, ಫೆಡರಲಿಸಂ, ಸ್ವಾತಂತ್ರ್ಯ, ವ್ಯಕ್ತಿ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯು ಸಂವಿಧಾನದ ಮೂಲ ರಚನೆಯಲ್ಲೇ ಇದೆ. ತತ್ವಶಾಸ್ತ್ರವು ಸಂವಿಧಾನದ ಶ್ರೇಷ್ಠತೆಯ ಮೇಲೆ ಆಧಾರಿತವಾಗಿದೆ. ಎಲ್ಲ ಆಗುಹೋಗುಗಳಿಗೆ ಸಂವಿಧಾನವೇ ಅಂತಿಮ ನಿರ್ಣಯವಾಗಿದೆ" ಎಂಬುದನ್ನು ಸಿಜೆಐ ಮನದಟ್ಟು ಮಾಡಿದರು.

"ಈಗಿನ ವಿಶ್ವ ಆರ್ಥಿಕತೆಯು ರಾಷ್ಟ್ರೀಯ ಗಡಿಗಳನ್ನು ದಾಟಿದೆ. ಕಂಪನಿಗಳು ತನ್ನದೇ ದೇಶದ ಗಡಿಯಲ್ಲಿ ಮಾತ್ರ ಉಳಿಯುವುದಿಲ್ಲ. ಅದು ವಿಶ್ವಾದ್ಯಂತ ಪಸರಿಸಿಕೊಳ್ಳುತ್ತಿವೆ. ಗ್ರಾಹಕರ ವ್ಯಾಜ್ಯ, ಕಲ್ಯಾಣ ಮತ್ತು ವಾಣಿಜ್ಯ ವಹಿವಾಟುಗಳನ್ನು ಕಾನೂನು ಬಲವಾಗಿ ಬೆಂಬಲಿಸಿದೆ. ಇದು ಸ್ಪರ್ಧಾತ್ಮಕ ಕಾನೂನು, ದಿವಾಳಿತನ ಮತ್ತು ನ್ಯಾಯಯುತವಾದ ಮಾರುಕಟ್ಟೆಯನ್ನು ಕಾನೂನು ಉತ್ತೇಜಿಸುತ್ತದೆ. ಅದೇ ರೀತಿ, ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಭಾರತದಲ್ಲಿ ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ಪರೋಕ್ಷ ತೆರಿಗೆಯನ್ನು ಸರಳೀಕರಿಸಲು ಪ್ರಯತ್ನಿಸಿದೆ" ಎಂದು ಅವರು ಹೇಳಿದರು.

ಆರ್ಥಿಕ ಉದಾರತೆಗೂ ಮಿತಿ ಇರಲಿ: "ಸಂವಿಧಾನ ಎಂದಿಗೂ ಮಿತಿ ಇಲ್ಲದ ಆರ್ಥಿಕ ಉದಾರವಾದವನ್ನು ಬೆಂಬಲಿಸುವುದಿಲ್ಲ. ಬದಲಿಗೆ, ಸರಿಯಾದ ಮತ್ತು ಸಮತೋಲಿತ ಪ್ರಗತಿ ಸಾಧಿಸಲು ಮಾರ್ಗದರ್ಶನ ನೀಡುತ್ತದೆ. ಸಾಮಾಜಿಕ ಬೇಡಿಕೆಗಳನ್ನು ಪೂರೈಸಲು ತನ್ನ ಕಾನೂನು ಮತ್ತು ಆರ್ಥಿಕ ನೀತಿಗಳನ್ನು ಬದಲಾಯಿಸಲು ಸರ್ಕಾರಗಳಿಗೆ ನಿರ್ದೇಶನ ನೀಡುತ್ತದೆ" ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದರು.

ಇದನ್ನೂ ಓದಿ: 11 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ 2 ಕೆಜಿ ತೂಕದ ಭ್ರೂಣ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.