ETV Bharat / bharat

ಗುಜರಾತ್ ಹೈಕೋರ್ಟ್​ನಲ್ಲಿ ಕನ್ನಡ ಬಳಸಿದ ಮುಖ್ಯ ನ್ಯಾಯಮೂರ್ತಿ ಅರವಿಂದ್​ ಕುಮಾರ್​! - ಗುಜರಾತ್ ಹೈಕೋರ್ಟ್​ನಲ್ಲಿ ಕನ್ನಡ

ಕರ್ನಾಟಕ ಮೂಲದ ಅರವಿಂದ್ ಕುಮಾರ್ ಅವರು 2021ರ ಅಕ್ಟೋಬರ್ 13 ರಂದು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಕೇಸ್​ವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಅವರು ದಾವೆದಾರ ಗುಜರಾತಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಬುದ್ಧಿ ಹೇಳಿದ್ದಾರೆ.

ಗುಜರಾತ್ ಹೈಕೋರ್ಟ್​ನಲ್ಲಿ ಕನ್ನಡ ಬಳಸಿದ ಮುಖ್ಯನ್ಯಾಯಮೂರ್ತಿ

author img

By

Published : Jan 9, 2022, 8:47 PM IST

Updated : Jan 9, 2022, 9:29 PM IST

ಅಹಮದಾಬಾದ್: ಕೋರ್ಟ್​ನಲ್ಲಿ ಭಾಷೆ ಬಳಕೆ ವಿಚಾರವಾಗಿ ದಾವೆದಾರ ಮತ್ತು ಮುಖ್ಯ ನ್ಯಾಯಮೂರ್ತಿ ಮಧ್ಯದ ಇಂಟ್ರೆಸ್ಟಿಂಗ್ ಸಂಭಾಷಣೆಗೆ ಗುಜರಾತ್ ಹೈಕೋರ್ಟ್ ಸಾಕ್ಷಿಯಾಯಿತು.

ವಿಚಾರಣೆ ವೇಳೆ ದಾವೆದಾರರು, ಇದು ಗುಜರಾತ್. ಗುಜರಾತಿ ಭಾಷೆಯಲ್ಲಿ ಉತ್ತರಿಸುವೆ ಎಂದಿದ್ದಾರೆ. ಇದಕ್ಕೆ ಗುಜರಾತ್ ಹೈಕೋರ್ಟ್ ಮುಖ್ಯ ನಾಯಮೂರ್ತಿ ಆಗಿರುವ ಕನ್ನಡಿಗ ಅರವಿಂದ್ ಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಹಾಗಾದ್ರೆ ನಾನು ಕನ್ನಡದಲ್ಲಿ ಮಾತಾಡುವೆ ಎಂದಿದ್ದಾರೆ.

ಕರ್ನಾಟಕ ಮೂಲದ ಅರವಿಂದ್ ಕುಮಾರ್ ಅವರು 2021ರ ಅಕ್ಟೋಬರ್ 13 ರಂದು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ವಿಚಾರಣೆ ವೇಳೆ ಇಂಟ್ರೆಸ್ಟಿಂಗ್ ಸಂಭಾಷಣೆ:

ನೀವು ಗುಜರಾತಿಯಲ್ಲಿ ಉತ್ತರಿಸುತ್ತಿರಾ ಎಂದು ಸಿಜೆ ಕೇಳಿದರು. ಅದಕ್ಕೆ ದಾವೆದಾರ, ಹೌದು ಸರ್ ಅಂದರು. ಆಗ ಸಿಜೆ ಅವರು ಹಾಗಾದ್ರೆ ನಾನು ನಿನಗೆ ಕನ್ನಡದಲ್ಲಿ ಹೇಳುತ್ತೇನೆ ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು. ನೀವು ಏನು ಮಾತಾಡುತ್ತಿದ್ದೀರಿ ಅಂತಾ ನಮಗೆ ಅರ್ಥ ಆಗ್ತಿಲ್ಲ. ಮಾತಾಡುವುದಾದ್ರೆ ನಮಗೆ ಅರ್ಥವಾಗುವ ಕನ್ನಡದಲ್ಲಿ ಮಾತಾಡಿ ಎಂದರು.

ಆಗ ದಾವೆದಾರ, ಇದು ಗುಜರಾತ್. ಇದೇ ಮೊದಲ ಬಾರಿಗೆ ನಾನು ಹೈಕೋರ್ಟ್​ಗೆ ಬಂದಿರುವೆ ಎಂದರು. ಬಳಿಕ ಸಿಜೆ ಪ್ರತಿಕ್ರಿಯಿಸಿ, ಇದು ಜಿಲ್ಲಾ ಕೋರ್ಟ್ ಅಲ್ಲ. ಇದು ಹೈಕೋರ್ಟ್. ಸ್ಥಳೀಯ ಕೋರ್ಟ್​ನಲ್ಲಿ ಮಾತ್ರ ಸ್ಥಳೀಯ ಭಾಷೆಗಳನ್ನು ಬಳಸಬಹುದು. ಹೈಕೋರ್ಟ್​ನಲ್ಲಿ ಇಂಗ್ಲಿಷ್ ಬಳಸಬೇಕು ಎಂದು ತಿಳಿಸಿದರು.

(ಇದನ್ನೂ ಓದಿ: Watch: ಒಂದೇ ಬಾಲ್​ಗೆ 7 ರನ್​​.. ಬಾಂಗ್ಲಾ-ಕಿವೀಸ್ ಟೆಸ್ಟ್​ ಪಂದ್ಯದ ಕಾಮಿಡಿ ದೃಶ್ಯ ನೋಡಿ)

Last Updated : Jan 9, 2022, 9:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.