ನವದೆಹಲಿ: ದ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಎಕ್ಸಾಮಿನೇಷನ್ (CISCE) 10 ಮತ್ತು 12ನೇ ತರಗತಿಗಳಿಗಾಗಿ ನಡೆಸಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.
ಉನ್ನತ ಮೂಲಗಳ ಪ್ರಕಾರ 'ಕೈ ಮೀರಿದ ಕಾರಣ'ಗಳಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಅಂದರೆ ಇನ್ನೂ ಪರೀಕ್ಷೆಯನ್ನು ಮುಂದೂಡಿರುವುದಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಸಿಐಎಸ್ಸಿಇ 2021-22ನೇ ವರ್ಷದ 10 ಮತ್ತು 12 ತರಗತಿಗಳ ಮೊದಲ ಸೆಮಿಸ್ಟರ್ನ ಪರೀಕ್ಷೆಗಳನ್ನು ಮುಂದೂಡಲು ನಿರ್ಧಾರ ಮಾಡಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನ ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಸಿಐಎಸ್ಸಿಇ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಆ್ಯರಾಥೂನ್ ಆದೇಶಿಸಿದ್ದಾರೆ.
ಅಂದಹಾಗೆ ಈ ಮೊದಲು ನವೆಂಬರ್ 15ರಂದು ಪರೀಕ್ಷೆಯನ್ನು ನಡೆಸಲು ಬೋರ್ಡ್ ನಿರ್ಧಾರ ಮಾಡಿತ್ತು. ಆದರೆ ಈಗ ಪರೀಕ್ಷೆಯನ್ನು ಮುಂದೂಡಿದೆ.
ಇದನ್ನೂ ಓದಿ: ಉತ್ತರಾಖಂಡ ಭೀಕರ ಪ್ರವಾಹಕ್ಕೆ 45 ಸಾವು: ಮನೆ ಕಳೆದುಕೊಂಡವರಿಗೆ 1 ಲಕ್ಷ, ಮೃತರಿಗೆ 4 ಲಕ್ಷ ರೂ.ಪರಿಹಾರ