ಕೋಲ್ಕತ್ತಾ: ಹೌರಾ ಮೂಲದ ಪಾಂಡೆ ಸಹೋದರರಾದ ಶೈಲೇಶ್ ರೋಹಿತ್ ಮತ್ತು ಅರವಿಂದ್ ಪಾಂಡೆ ಅವರನ್ನು ಗುಜರಾತ್ ಮತ್ತು ಒಡಿಶಾಗಳಲ್ಲಿ ಕೋಲ್ಕತ್ತಾ ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ. ಶಿಬ್‌ಪುರದಲ್ಲಿರುವ ಇವರ ಮನೆ ಮತ್ತು ಇವರ ಕಾರಿನಿಂದ ಇಡಿ ಕೋಟ್ಯಂತರ ರೂಪಾಯಿ ವಶಪಡಿಸಿಕೊಂಡಿತ್ತು. ಅದರ ನಂತರ ಪಾಂಡೆ ಬ್ರದರ್ಸ್ ಕೆಲಕಾಲ ಪರಾರಿಯಾಗಿದ್ದರು.
ಶುಕ್ರವಾರ ಮುಂಜಾನೆ ಗುಜರಾತ್ ಮತ್ತು ಒಡಿಶಾ ಗಡಿಯಲ್ಲಿ ಪಾಂಡೆ ಸಹೋದರರನ್ನು ಪೊಲೀಸರು ಬಂಧಿಸಿದ್ದು, ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕೋಲ್ಕತ್ತಾಕ್ಕೆ ಕರೆತರುತ್ತಿದ್ದಾರೆ. ಪಾಂಡೆ ಸಹೋದರರೊಂದಿಗೆ ಮತ್ತೊಬ್ಬನನ್ನು ಕೂಡ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ.
ಲಾಲ್ ಬಜಾರ್ ಮೂಲಗಳ ಪ್ರಕಾರ, ಪಾಂಡೆ ಸಹೋದರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಬಯಸಿದ್ದಾರೆ. ಕೋಲ್ಕತ್ತಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ನಾಲ್ವರನ್ನು ವಿಚಾರಣೆ ನಡೆಸಲಿದ್ದಾರೆ. ಪಾಂಡೆ ಬ್ರದರ್ಸ್ ಮನೆ ಮತ್ತು ಕಾರಿನಿಂದ ಪೊಲೀಸರು ಇದುವರೆಗೆ 200 ಕೋಟಿ ರೂ.ಗೂ ಹೆಚ್ಚು ಹಣ ವಶಪಡಿಸಿಕೊಂಡಿದ್ದಾರೆ. ಇಷ್ಟೊಂದು ಹಣ ಅವರ ಬಳಿ ಎಲ್ಲಿಂದ ಬಂತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಪಾಂಡೆ ಬ್ರದರ್ಸ್ ಚಿಟ್ ಫಂಡ್ ಮತ್ತು ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳ ಮೂಲಕ ಹಲವಾರು ಹವಾಲಾ ವ್ಯವಹಾರಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಖಾಸಗಿ ಬಸ್ನಲ್ಲಿ 50 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಐವರ ಬಂಧನ