ETV Bharat / bharat

ಮತ್ತೊಂದು ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಚೀನಾ ಅನುಮೋದನೆ - ಚೀನಾ ಅಕಾಡೆಮಿ ಆಫ್ ಸೈನ್ಸಸ್‌

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿರುವ ಮತ್ತೊಂದು ಲಸಿಕೆಯ ತುರ್ತು ಬಳಕೆಗೆ ಚೀನಾ ಅನುಮೋದನೆ ನೀಡಿದೆ.

China approves another Covid vax for emergency use
ಮತ್ತೊಂದು ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಚೀನಾ ಅನುಮೋದನೆ
author img

By

Published : Mar 18, 2021, 11:26 AM IST

ಬೀಜಿಂಗ್: ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಮತ್ತೊಂದು ಕೋವಿಡ್​-19 ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆಗೆ ಅನುಮೋದಿಸಿರುವುದಾಗಿ ಚೀನಾ ತಿಳಿಸಿದೆ.

ಚೀನಾ ಅಕಾಡೆಮಿ ಆಫ್ ಸೈನ್ಸಸ್‌ ಅಡಿಯಲ್ಲಿ ಬರುವ ಮೈಕ್ರೋಬಯಾಲಜಿ ಸಂಸ್ಥೆ ಹಾಗೂ ಅನ್ಹುಯಿ ಝಿಪೈ ಲಾಂಗ್ಕಾಮ್ ಎಂಬ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಇದಾಗಿದೆ.

ಇದನ್ನೂ ಓದಿ: ಮತ್ತೆ ಕೊರೊನಾ ಅಬ್ಬರ: ನಿನ್ನೆ ದೇಶದಲ್ಲಿ 35 ಸಾವಿರ ಸೋಂಕಿತರು ಪತ್ತೆ.. ಒಟ್ಟು 3.71 ಕೋಟಿ ಮಂದಿಗೆ ಲಸಿಕೆ

ಈ ವ್ಯಾಕ್ಸಿನ್​ನ ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳು 2020ರ ಅಕ್ಟೋಬರ್‌ನಲ್ಲೇ ಪೂರ್ಣಗೊಂಡಿವೆ. ಚೀನಾ, ಉಜ್ಬೇಕಿಸ್ತಾನ್, ಪಾಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲಿ ನವೆಂಬರ್‌ನಿಂದ ಈ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ.

ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಯಾವುದೇ ತೀವ್ರವಾದ ಅಡ್ಡಪರಿಣಾಮ ಉಂಟಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ. ಚೀನಾದಲ್ಲಿ ತುರ್ತು ಬಳಕೆಗಾಗಿ ಅನುಮೋದಿಸಲಾದ ನಾಲ್ಕನೇ ಕೋವಿಡ್ ಲಸಿಕೆ ಇದಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.