ನವದೆಹಲಿ: ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಜನವರಿ ಅಥವಾ ಏಪ್ರಿಲ್‌ನಲ್ಲಿ ಸೋಂಕಿಗೆ ಒಳಗಾದ ಮಕ್ಕಳ ಮತ್ತೆ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗುತ್ತಿದ್ದಾರೆ. ಆದರೆ ಸೋಂಕು ಸೌಮ್ಯವಾಗಿರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ. ಇದಲ್ಲದೇ ವೈರಲ್ ಜ್ವರ, ಡೆಂಘಿ, ಮಲೇರಿಯಾ ಮೊದಲಾದ ಋತುಮಾನದ ಕಾಯಿಲೆಗಳೂ ಮಕ್ಕಳನ್ನು ಕಾಡುತ್ತಿವೆ.
ಈ ಬಗ್ಗೆ ದೆಹಲಿಯ ಮಧುಕರ್ ರೇನ್‌ಬೋ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ.ನಿತಿನ್ ವರ್ಮಾ ಮಾತನಾಡಿ, ಮಕ್ಕಳಲ್ಲಿ ಕೋವಿಡ್ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ಗೆ ಒಳಗಾದ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಜನವರಿ ಅಥವಾ ಏಪ್ರಿಲ್‌ನಲ್ಲಿ ಸೋಂಕಿಗೆ ಒಳಗಾದ ಮಕ್ಕಳು ಮತ್ತೊಮ್ಮೆ ಕೊರೊನಾ ಪಾಸಿಟಿವ್ ಆಗುತ್ತಿದ್ದಾರೆ. ಇದು ಕೊರೊನಾದ ವಿಭಿನ್ನ ಸ್ಟ್ರೈನ್ ಆಗಿದ್ರೆ, ಲಸಿಕೆಯಿಂದ ರಕ್ಷಿಸಲು ಸಾಧ್ಯವಾಗುವುದಿಲ್ಲ. ಬಹುಶಃ ಮಕ್ಕಳು ಎರಡನೇ ಬಾರಿಗೆ ಸೋಂಕಿಗೆ ಒಳಗಾಗಲು ಇದೇ ಕಾರಣವಾಗಿದೆ ಎಂದು ವೈದ್ಯ ನಿತಿನ್ ವರ್ಮಾ ಹೇಳಿದರು.
ಡಾ.ವರ್ಮಾ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಇತರ ಸೋಂಕುಗಳಿಗೆ ಒಳಗಾಗುತ್ತಿದ್ದಾರೆ. ನಾನು ನಿತ್ಯ ನಾಲ್ಕರಿಂದ ಐದು ಕೋವಿಡ್ ಸೋಂಕಿತ ಮಕ್ಕಳ ಪ್ರಕರಣಗಳನ್ನು ಕಾಣುತ್ತಿದ್ದೇನೆ. ವೈರಲ್ ಫೀವರ್ ಮತ್ತು ಡೆಂಘಿ ಪ್ರಕರಣಗಳು ಶಾಲೆ ಮತ್ತು ಚಿಕ್ಕ ಮಕ್ಕಳಲ್ಲೂ ಕಂಡುಬರುತ್ತಿವೆ. ಇತ್ತೀಚೆಗೆ ಹಂದಿಜ್ವರದ ಪ್ರಕರಣಗಳು ಕೂಡಾ ಕಂಡು ಬಂದಿವೆ. ಮಕ್ಕಳಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಅವುಗಳನ್ನು ಮನೆಯಲ್ಲಿಯೇ ಸರಿಯಾಗಿ ಚಿಕಿತ್ಸೆ ನೀಡಬಹುದು ಎಂದು ಡಾ.ವರ್ಮಾ ಹೇಳುತ್ತಾರೆ.
ಜ್ವರ, ನೋವು ಮತ್ತು ದದ್ದು ವೈರಸ್: ಡಾ.ವರ್ಮಾ ಪ್ರಕಾರ, ಜ್ವರ, ಗಂಟಲು ನೋವು ಮತ್ತು ದದ್ದುಗಳ ಪ್ರಕರಣಗಳು ಮಕ್ಕಳಲ್ಲಿ ಹೆಚ್ಚು ಗೋಚರಿಸುತ್ತವೆ. ಕೆಲವರಿಗೆ ವಾಂತಿ ಮತ್ತು ಭೇದಿಯ ಲಕ್ಷಣಗಳೂ ಇವೆ. ಕೋವಿಡ್ ತಡೆಗಟ್ಟಲು ಲಸಿಕೆ ನೀಡುವುದರಿಂದ ರೋಗದ ತೀವ್ರತೆಯನ್ನು ತಡೆಯಲು ಸಹಾಯ ಮಾಡುತ್ತದೆ. ನಾವು ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅವಶ್ಯಕ.
ಹೆಚ್ಚಾಗಿ ಕೋವಿಡ್ ಪ್ರಕರಣಗಳು ಶಾಲೆಗಳಿಂದಲೇ ಬಂದಿವೆ. ಆದ್ದರಿಂದ ಅಲ್ಲಿನ ಪರಿಸರ ಮತ್ತು ಕೋವಿಡ್‌ನ ಪ್ರತಿಕೂಲ ವರ್ತನೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯವಾಗಿರಬೇಕು ಮತ್ತು ಮಕ್ಕಳ ನಡುವೆ ಸರಿಯಾದ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಆಹಾರ ಸೇವಿಸುವಾಗಲೂ ಎಚ್ಚರಿಕೆ ಅಗತ್ಯ. ಕೊರೊನಾ ಪ್ರಕರಣಗಳು ಉಲ್ಬಣ ಕುರಿತು ಶಾಲೆ ಮುಚ್ಚುವ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದ್ದಾರೆ.
ಓದಿ: ನಾಲ್ಕೇ ದಿನಗಳಲ್ಲಿ ಕೋವಿಡ್ನಿಂದ ಸಿಎಂ ಗುಣಮುಖ: ನಾಳೆ ಎರಡು ಜಿಲ್ಲೆಗಳ ಪ್ರವಾಸ