ETV Bharat / bharat

ಕೊಳವೆ ಬಾಯಿಯೊಳಗೆ ಬಿದ್ದ ಮೂರು ವರ್ಷದ ಬಾಲಕನ ರಕ್ಷಣೆಗೆ ಹರಸಾಹಸ - ಉತ್ತರ ಪ್ರದೇಶದ ಹಾರ್ದೋಯಿ ಸುದ್ದಿ

ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯ ಹರ್ಪಲ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸತೌತ ಗ್ರಾಮದಲ್ಲಿ ಬಾಲಕನೋರ್ವ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

children-fell-in-25-feet-deep-pit-in-hardoi-police-firefighters-and-villagers-gathered-in-an-effort-to-rescue-them-safely
ಕೊಳವೆ ಬಾಯಿಯೊಳಗೆ ಬಿದ್ದ ಮೂರು ವರ್ಷದ ಬಾಲಕನ ರಕ್ಷಣೆಗೆ ಹರಸಾಹಸ
author img

By

Published : Apr 27, 2021, 10:53 PM IST

ಹಾರ್ದೋಯಿ(ಉತ್ತರ ಪ್ರದೇಶ) : ಆಟ ಆಡುತ್ತಿದ್ದಾಗ ಮೂರು ವರ್ಷದ ಬಾಲಕ ತೆರೆದ ಬೋರ್​ವೆಲ್​ನಲ್ಲಿ ಬಿದ್ದ ಘಟನೆ ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯ ಹರ್ಪಲ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸತೌತ ಗ್ರಾಮದಲ್ಲಿ ನಡೆದಿದೆ.

ಬಾಲಕನ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ

ಶ್ಯಾಮ್​ಜೀತ್, ಕೊಳವೆ ಬಾವಿಗೆ ಬಿದ್ದಿರುವ ಬಾಲಕ. ಈತ ತನ್ನ 7 ವರ್ಷದ ಅಣ್ಣನ ಜೊತೆ ಆಟವಾಡಲು ಹೊರಟಿದ್ದನು. ಈ ವೇಳೆ ತೆರೆದ ಕೊಳವೆ ಬಾವಿ ಕುಸಿದಿದ್ದು, ಶ್ಯಾಮ್​ಜೀತ್ ಸುಮಾರು 25 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ.

ಇದನ್ನೂ ಓದಿ: ವಿವಾದಕ್ಕೀಡಾದ ಕಿರಣ್ ಖೇರ್ ದೇಣಿಗೆ ವಿಚಾರ: ​ ವೆಂಟಿಲೇಟರ್​ ಖರೀದಿಗೆ1 ಕೋಟಿ ನೀಡಿದ್ದ ನಟಿ

ಈ ವೇಳೆ ಶ್ಯಾಮ್​​ಜೀತ್ ಅಣ್ಣ ಕಿರುಚಿಕೊಂಡಿದ್ದು, ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಜೆಸಿಬಿ ಮೂಲಕ ರಕ್ಷಣಾ ಕಾರ್ಯ ಆರಂಭಿಸಿದ್ದು, ಬಾಲಕನನ್ನು ಉಳಿಸಲು ಹರಸಾಹಸ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.