ಹೈದರಾಬಾದ್: ಐದು ರಾಜ್ಯಗಳ 690 ವಿಧಾನಸಭೆ ಕ್ಷೇತ್ರಗಳ ಫಲಿತಾಂಶ ಇದೀಗ ಬಹಿರಂಗಗೊಳ್ಳುತ್ತಿದ್ದು, ಆರಂಭಿಕ ಮಾಹಿತಿ ಪ್ರಕಾರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಮುನ್ನಡೆ ಪಡೆದುಕೊಂಡಿದ್ದಾರೆ. ಆದರೆ, ಉತ್ತರಾಖಂಡದಲ್ಲಿ ಸಿಎಂ ಧಾಮಿ ಹಾಗೂ ಗೋವಾ ಸಿಎಂ ಪ್ರಮೋದ್ ಸಾವಂತ್ ಆರಂಭಿಕ ಹಿನ್ನಡೆಯಲಿದ್ದಾರೆ.
ಪಂಜಾಬ್ನಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಹಿನ್ನಡೆಯಲಿದ್ದು , ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ,ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಮಣಿಪುರ ಸಿಎಂ ಮುನ್ನಡೆಯಲಿದ್ದಾರೆ. ಉತ್ತರಾಖಂಡ ಸಿಎಂ ಪುಸ್ಕರ್ ಸಿಂಗ್ ದಮ್ಮಿ ಹಾಗೂ ಗೋವಾ ಸಿಎಂ ಪ್ರಮೋದ್ ಸಾವಂತ್ ಹಿನ್ನಡೆಯಲಿದ್ದಾರೆ. ಉಳಿದಂತೆ ಪಂಜಾಬ್ನಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಸೋನು ಸೂದ್ ಸಹೋದರಿ ಹಿನ್ನಡೆ ಅನುಭವಿಸಿದ್ದಾರೆ.
ಅಕಾಲಿ ದಳ ಅಧ್ಯಕ್ಷ ಸುಕ್ಬೀರ್ ಸಿಂಗ್ ಬಾದಲ್ ಕೂಡ ಮುನ್ನಡೆಯಲಿದ್ದು, ಅಖಿಲೇಶ್ ಯಾದವ್ ಕೂಡ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಅರ್ಚನಾ ಗೌತಮ್ ಹಿನ್ನಡೆಯಲಿದ್ದಾರೆ.ಉಳಿದಂತೆ ಸ್ವಾಮಿ ಪ್ರಸಾದ್ ಮೌರ್ಯ, ಕೇಶವ್ ಪ್ರಸಾದ್ ಮೌರ್ಯ ಸಹ ಮುನ್ನಡೆ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ 156, ಸಮಾಜವಾದಿ ಪಕ್ಷ 64, ಬಿಎಸ್ಪಿ 4, ಕಾಂಗ್ರೆಸ್ ಹಾಗೂ ಇತರ 2 ಸ್ಥಾನಗಳಲ್ಲಿ ಮುನ್ನಡೆಯಲಿವೆ. ಪಂಜಾಬ್ನಲ್ಲಿ ಎಎಪಿ 40, ಕಾಂಗ್ರೆಸ್ 13, ಅಕಾಲಿ ದಳ 6 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಉತ್ತರಾಖಂಡದಲ್ಲಿ ಬಿಜೆಪಿ 29, ಕಾಂಗ್ರೆಸ್ 22 ಹಾಗೂ ಎಎಪಿ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.