ಬಿಜಾಪುರ (ಛತ್ತೀಸ್‌ಗಢ): ವಿಶ್ವ ಬುಡಕಟ್ಟು ದಿನವಾದ ಸೋಮವಾರ, ಸಮಾಜದ ಮುಖ್ಯವಾಹಿನಿಗೆ ಸೇರುವುದಾಗಿ ಪ್ರತಿಜ್ಞೆ ಮಾಡಿರುವ ನಕ್ಸಲ್ ದಂಪತಿ ಛತ್ತೀಸ್‌ಗಢದ ಬಿಜಾಪುರ ಪೊಲೀಸರ ಮುಂದೆ ಶರಣಾದರು.
ನಕ್ಸಲೈಟ್ ಕಮಾಂಡರ್ ರಾಜು ಕರಮ್ ಹಾಗು ಪತ್ನಿ ಸುನೀತಾ ಕರಮ್ ನಕ್ಸಲ್ ಗುಂಪಿನಿಂದ ಹೊರಬಂದಿದ್ದಾರೆ. ಇವರು ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರಿಬ್ಬರಿಗೂ ತಲಾ 8 ಲಕ್ಷ ರೂಪಾಯಿ ಬಹುಮಾನವನ್ನು ಸರ್ಕಾರ ಘೋಷಣೆ ಮಾಡಿದೆ.
ಈ ಇಬ್ಬರೂ ಒಡಿಶಾ ಮತ್ತು ತೆಲಂಗಾಣ ರಾಜ್ಯದ ನಕ್ಸಲ್ ಗುಂಪುಗಳಲ್ಲಿ ಸಕ್ರಿಯವಾಗಿದ್ದರು. ಈಗ ನಕ್ಸಲ್ ಸಿದ್ಧಾಂತದಲ್ಲಿ ಬದಲಾವಣೆ ಕಂಡುಬಂದಿದ್ದು, ಅವರು ಪೊಳ್ಳು ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದಾರೆ. ಇದೇ ಕಾರಣದಿಂದ ನಾವು ನಕ್ಸಲಿಸಂ ತೊರೆದಿದ್ದೇವೆ ಎಂದು ಶರಣಾದ ನಕ್ಸಲ್ ರಾಜು ಹೇಳಿದ್ದಾರೆ.
'ಸರ್ಕಾರದ ಪುನರ್ವಸತಿ ನೀತಿಯಿಂದ ಪ್ರಭಾವಿತರಾದೆವು..'
ಇದರ ಜೊತೆಗೆ ಛತ್ತೀಸ್‌ಗಢ ಸರ್ಕಾರದ ನಕ್ಸಲ್ ಪುನರ್ವಸತಿ ನೀತಿಯಿಂದ ತಾವು ತುಂಬಾ ಪ್ರಭಾವಿತರಾಗಿದ್ದೇವೆ. ಅದರಿಂದಲೇ ಸಮಾಜದ ಮುಖ್ಯವಾಹಿನಿಗೆ ಮರಳಲು ತೀರ್ಮಾನಿಸಿದ್ದೇವೆ ಎಂದು ಮಾಜಿ ನಕ್ಸಲರು ಹೇಳಿದ್ದಾರೆ.
ರಾಜಾ ಕರಮ್ ಮತ್ತು ಸುನೀತಾ ಕರಮ್ ಒಡಿಶಾದ ಕಲಹಂಡಿ, ಕಂಧಮಾಲ್, ಬೋಧ್, ನಯಾಘರ್ ವಿಭಾಗಗಳ ಜವಾಬ್ದಾರಿ ವಹಿಸಿಕೊಂಡಿದ್ದರು ಎಂದು ಬಿಜಾಪುರ ಎಸ್ಪಿ ಕಮಲೋಚನ್ ಕಶ್ಯಪ್ ಹೇಳಿದ್ದಾರೆ. ಸಿಆರ್‌ಪಿಎಫ್‌ನ ಡಿಐಜಿ ಕೋಮಲ್ ಸಿಂಗ್, ಎಸ್‌ಪಿ ಬಿಜಾಪುರ ಕಮಲೋಚನ್ ಕಶ್ಯಪ್, ಸಿಆರ್‌ಪಿಎಫ್ 85ನೇ ಬೆಟಾಲಿಯನ್ ಕಮಾಂಡರ್ ಯದುವೇಂದ್ರ ಸಿಂಗ್ ಯಾದವ್ ಎದುರು ನಕ್ಸಲೀಯರು ಶರಣಾಗಿದ್ದಾರೆ.
ಇದನ್ನೂ ಓದಿ: ನಿಮ್ಮ ಹೆಸರು 'ನೀರಜ್' ಆಗಿದ್ರೆ ಈ ಬಂಕ್‌ನಲ್ಲಿ 501 ರೂಪಾಯಿಯ ಪೆಟ್ರೋಲ್ ಉಚಿತ!