ETV Bharat / bharat

3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಕಾಮುಕನಿಗೆ ಜೀವಾವಧಿ ಶಿಕ್ಷೆ

ಛತ್ತೀಸ್​ಗಢದಲ್ಲಿ ಕಾಮುಕನೋರ್ವನಿಗೆ ಕೋರ್ಟ್​ ತಕ್ಕ ಶಾಸ್ತಿ ಮಾಡಿದೆ. ಬಾಲಕಿ ಮೇಲಿನ ಅತ್ಯಾಚಾರ ಸಾಬೀತಾದ ಹಿನ್ನೆಲೆ ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಆದೇಶ ಹೊರಡಿಸಿದೆ.

Chhattisgarh: Man gets life term until death for raping 3-yr-old girl

author img

By

Published : Aug 1, 2021, 4:20 PM IST

ರಾಯ್‌ಪುರ (ಛತ್ತೀಸ್‌ಗಢ): ನಮ್ಮ ನಡುವೆ ಅದೆಷ್ಟೋ ಕಾಮುಕರು ಜಗತ್ತನ್ನೇ ಅರಿಯದ ಪುಟ್ಟ ಪುಟ್ಟ ಕಂದಮ್ಮಗಳನ್ನು ತಮ್ಮ ಕಾಮ ದಾಹಕ್ಕೆ ಬಲಿಕೊಡುತ್ತಿದ್ದಾರೆ. ಇಂಥವರಿಗೆ ಕಾನೂನು ಎಷ್ಟೇ ಶಿಕ್ಷೆ ವಿಧಿಸಿದರೂ ಸಾಲದು. ಅಂತೆಯೇ ಇಲ್ಲೊಂದು ಇಂಥಹದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮುಕನಿಗೆ ನ್ಯಾಯಾಲಯ ಸರಿಯಾದ ಶಿಕ್ಷೆ ವಿಧಿಸಿದೆ.

2019 ರಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ 39 ವರ್ಷದ ಆಟೋ ರಿಕ್ಷಾ ಚಾಲಕನಿಗೆ ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿ ಛತ್ತೀಸ್‌ಗಢದ ದುರ್ಗ ಜಿಲ್ಲೆಯ ನ್ಯಾಯಾಲಯ ತ್ವರಿತ ಆದೇಶ ನೀಡಿದೆ. ಭಾರತೀಯ ದಂಡ ಸಂಹಿತೆ ಕಾಯ್ದೆ 376 (ಎಬಿ) (12 ವರ್ಷದೊಳಗಿನ ಬಾಲಕಿ ಮೇಲೆ ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 363 (ಅಪಹರಣ) ಅಡಿಯಲ್ಲಿ ಈತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಾಗೆ 5,500 ರೂ.ಗಳ ದಂಡ ವಿಧಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕಮಲ್ ಕಿಶೋರ್ ವರ್ಮಾ ಮಾಹಿತಿ ನೀಡಿದ್ದಾರೆ.

ಏನಿದು ಹಿನ್ನೆಲೆ..

ಆಗಸ್ಟ್ 26, 2019 ರಂದು, ಆರೋಪಿ ಬಾಲಕಿಯನ್ನು ತನ್ನ ವಾಹನದಲ್ಲಿ ದುರ್ಗದ ಉಟೈ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಅಲ್ಲಿಂದ ಪರಾರಿಯಾಗಿದ್ದಾನೆ.

ಕೆಲ ಸ್ಥಳೀಯರು ಬಾಲಕಿಯನ್ನು ಗುರುತಿಸಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ ನಂತರ ಅಕೆಯ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಇದಾದ ನಂತರ ಸಂತ್ರಸ್ತೆಯ ತಾಯಿ ಆಕೆಯ ಖಾಸಗಿ ಭಾಗಗಳಲ್ಲಿ ರಕ್ತಸ್ರಾವದ ಜೊತೆ ಗಾಯಗಳನ್ನು ಗಮನಿಸಿದ್ದಾರೆ. ಘಟನೆ ಸಂಬಂಧ ಆಕೆ ಪೊಲೀಸರಿಗೆ ದೂರು ನೀಡಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.