ETV Bharat / bharat

ಅಕ್ರಮ ಹಣ ವರ್ಗಾವಣೆ ಪ್ರಕರಣ: ಐಎಎಸ್ ಅಧಿಕಾರಿ ಬಂಧನ, ಜಿಲ್ಲಾಧಿಕಾರಿ ಮನೆಗೆ ಇಡಿ ಸೀಲ್​

ಗಣಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಛತ್ತೀಸ್‌ಗಢದ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಸೇರಿ ಮೂವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

chhattisgarh-ed-arrests-ias-officer-2-others-in-money-laundering-case
ಅಕ್ರಮ ಹಣ ವರ್ಗಾವಣೆ ಪ್ರಕರಣ: ಓರ್ವ ಐಎಎಸ್ ಅಧಿಕಾರಿ ಬಂಧನ, ಜಿಲ್ಲಾಧಿಕಾರಿ ಮನೆಗೆ ಇಡಿ ಸೀಲ್​
author img

By

Published : Oct 13, 2022, 3:20 PM IST

ನವದೆಹಲಿ: ಛತ್ತೀಸ್‌ಗಢ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಸೇರಿ ಮೂವರನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಮತ್ತೊಬ್ಬ ಐಎಎಸ್​ ಮಹಿಳಾ ಅಧಿಕಾರಿ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಅತ್ಯಂತ ನಿಕಟವಾಗಿರುವ ಕೆಲವು ಅಧಿಕಾರಿಗಳು ಕಲ್ಲಿದ್ದಲು ಮತ್ತು ಇತರ ಉದ್ಯಮಿಗಳಿಂದ ಕಮಿಷನ್, ಲಂಚ ಪಡೆಯುವಲ್ಲಿ ಭಾಗಿಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ಈ ಹಿಂದೆ ಛತ್ತೀಸ್‌ಗಢ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ, ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿತ್ತು.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್​ ಸಿಗ್ನಲ್​ ಕೊಟ್ಟ ಪ್ರಧಾನಿ ಮೋದಿ

ಇದರ ನಡುವೆ ಇಡಿ ಅಧಿಕಾರಿಗಳು ಸತತ ಎರಡು ದಿನಗಳಿಂದ ಛತ್ತೀಸ್‌ಗಢದಲ್ಲಿ ದಾಳಿ ನಡೆಸಿ ಸುಮಾರು 4 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಐಎಎಸ್ ಜೆಪಿ ಮೌರ್ಯ ಮತ್ತು ರಾನು ಸಾಹು ಅವರಿಗೆ ಸೇರಿದ ನಿವಾಸಗಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದಲ್ಲದೇ, ಇತರ ಮೂವರು ಐಪಿಎಸ್ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ದಾಳಿ ಮಾಡಿ ಶೋಧ ಕಾರ್ಯ ನಡೆಸಲಾಗಿದೆ.

ಪ್ರತಿ ಟನ್ ಕಲ್ಲಿದ್ದಲು ಗಣಿಗಾರಿಕೆಯಿಂದ 25 ರೂಪಾಯಿ ಕಮಿಷನ್ ಪಡೆದಿರುವ ಬಗ್ಗೆ ಬುಧವಾರ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಅವರನ್ನು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೇ ಸಮೀರ್ ವಿಷ್ಣೋಯ್, ಇಂದ್ರಮಣಿ ಗ್ರೂಪ್‌ನ ಸುನೀಲ್ ಅಗರ್ವಾಲ್ ಮತ್ತು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸೂರ್ಯಕಾಂತ್ ತಿವಾರಿ ಎಂಬುವವರ ಚಿಕ್ಕಪ್ಪ ಲಕ್ಷ್ಮಿಕಾಂತ್ ತಿವಾರಿ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಡಿಸಿ ಮನೆಗೆ ಸೀಲ್​: ಗಣಿ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಮತ್ತು ರಾಯಗಢ ಜಿಲ್ಲಾಧಿಕಾರಿ ರಾನು ಸಾಹು ಹೆಸರು ಕೇಳಿ ಬಂದಿದೆ. ಆದರೆ, ಇಡಿ ದಾಳಿ ದಾಳಿ ವೇಳೆ ಲಭ್ಯವಿಲ್ಲದ ಕಾರಣ ಅವರ ನಿವಾಸಕ್ಕೂ ಸೀಲ್ ಹಾಕಲಾಗಿದೆ. ಇವರ ಕೂಡ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

ಆದರೆ, ಸದ್ಯ ಜಿಲ್ಲಾಧಿಕಾರಿ ರಾನು ಸಾಹು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ತನಿಖೆಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಇನ್ನು, ಈ ಹಿಂದೆ ಇಡಿ ದಾಳಿ ನಡೆಸಿದಾಗ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇದನ್ನು ರಾಜಕೀಯ ದಾಳಿ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಜಾರ್ಖಂಡ್​ ಸಿಎಂ ಆಪ್ತನ ನಿವಾಸದ ಮೇಲೆ ಇಡಿ ದಾಳಿ: ಎರಡು AK 47 ರೈಫಲ್​​ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.