ETV Bharat / bharat

ಹರಿಯಾಣ ರಾಜ್ಯಸಭಾ ಚುನಾವಣೆ : 28 ಶಾಸಕರ ಮೇಲೆ ಛತ್ತೀಸ್‌ಗಢ ಸಿಎಂ ಕಣ್ಣು

author img

By

Published : Jun 6, 2022, 2:46 PM IST

ಹರಿಯಾಣದಲ್ಲಿ ಎರಡು ಸ್ಥಾನಗಳಿಗೆ ನಡೆಯಲಿರುವ ರಾಜ್ಯಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರ ಪ್ರವೇಶದೊಂದಿಗೆ ಕುತೂಹಲ ಮೂಡಿಸಿದೆ. ಈ ಹಿಂದೆ, ಹರಿಯಾಣದ ಎರಡು ರಾಜ್ಯಸಭಾ ಸ್ಥಾನಗಳಲ್ಲಿ ಒಂದು ಕಾಂಗ್ರೆಸ್‌ ತೆಕ್ಕೆಗೆ ಇನ್ನೊಂದು ಬಿಜೆಪಿಗೆ ಪಾಲಾಗುತ್ತಿತ್ತು..

Haryana CM
ಮುಖ್ಯಮಂತ್ರಿ ಭೂಪೇಶ್ ಬಘೇಲ್

ರಾಯ್‌ಪುರ(ಛತ್ತೀಸ್‌ಗಢ) : ಹರಿಯಾಣ ರಾಜ್ಯಸಭಾದ ಎರಡು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ, ಹರಿಯಾಣದ ಎಲ್ಲಾ 28 ಕಾಂಗ್ರೆಸ್ ಶಾಸಕರನ್ನು ಛತ್ತೀಸ್‌ಗಢದ ರಾಯ್‌ಪುರದ ಖಾಸಗಿ ಹೋಟೆಲ್​​ಗೆ ಕರೆತರಲಾಗಿದೆ.

ಹರಿಯಾಣ ಕಾಂಗ್ರೆಸ್ 31 ಶಾಸಕರನ್ನು ಹೊಂದಿದ್ದರೂ, ಮೂವರು ಶಾಸಕರು ಗುಂಪು ಸೇರುವ ಬಗ್ಗೆ ಸ್ಪಷ್ಟವಾಗಿಲ್ಲ. ಹರಿಯಾಣದ 28 ಶಾಸಕರನ್ನು ಒಟ್ಟಿಗೆ ಇರಿಸುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ವಹಿಸಲಾಗಿದೆ. ಆದರೆ, ಛತ್ತೀಸ್‌ಗಢ ಸಿಎಂ ಬಘೇಲ್ ಅವರ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

ಎರಡು ರಾಜ್ಯಸಭಾ ಸ್ಥಾನ : ಹರಿಯಾಣ ಎರಡು ರಾಜ್ಯಸಭಾ ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಬಿಜೆಪಿಯಿಂದ ಮಾಜಿ ಸಚಿವ ಕ್ರಿಶನ್ ಲಾಲ್ ಪನ್ವಾರ್, ಕಾಂಗ್ರೆಸ್​​ನಿಂದ ಅಜಯ್ ಮಾಕನ್ ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾ ಅವರ ಪುತ್ರ ಕಾರ್ತಿಕೇಯ ಶರ್ಮಾ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. ಇದರಿಂದಾಗಿ ರಾಜ್ಯಸಭಾ ಕದನವು ಇನ್ನಷ್ಟು ರೋಚಕಗೊಂಡಿದೆ.

ಕಾರ್ತಿಕೇಯ ಶರ್ಮಾ ಯಾರು?: ಕಾರ್ತಿಕೇಯ ಶರ್ಮಾ ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾ ಅವರ ಪುತ್ರ ಮತ್ತು ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮನು ಶರ್ಮಾ ಅವರ ಸಹೋದರ. ವಿನೋದ್ ಶರ್ಮಾ ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿಯೇ ಇದ್ದರು. ಆದರೆ, ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣ ಅವರ ರಾಜಕೀಯ ಜೀವನವನ್ನೇ ಹಾಳು ಮಾಡಿತು. ವಿನೋದ್ ಶರ್ಮಾ ಅವರನ್ನು ಕಾಂಗ್ರೆಸ್ ಬದಿಗಿಟ್ಟಿತ್ತು. ಬಳಿಕ ಅಂಬಾಲಾ ನಗರದಿಂದ ಶಾಸಕರಾಗಿದ್ದ ವಿನೋದ್ ಶರ್ಮಾ ಅವರ ಪತ್ನಿ ಶಕ್ತಿ ರಾಣಿ ಶರ್ಮಾ ಅವರು 2014ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರು ಸೋತಿದ್ದರು.

ಶರ್ಮಾಗೆ ಜನನಾಯಕ್ ಜನತಾ ಪಕ್ಷದ ಬೆಂಬಲ : ಕಾರ್ತಿಕೇಯ ಶರ್ಮಾ ಅವರಿಗೆ 10 ಶಾಸಕರನ್ನು ಹೊಂದಿರುವ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ)ಬೆಂಬಲವಿದೆ. ಅಲ್ಲದೇ ಅವರು ಸ್ವತಂತ್ರ ಶಾಸಕರ ಬೆಂಬಲವನ್ನೂ ಪಡೆಯುತ್ತಿದ್ದಾರೆ. ಇನ್ನು ಕೆಲವು ಶಾಸಕರು ಕಾರ್ತಿಕೇಯ ಶರ್ಮಾ ಅವರಿಗೆ ಮತ ಹಾಕಬಹುದು. ರಾಜ್ಯಸಭೆಗೆ ಬರಲು 31 ಮತಗಳ ಅಗತ್ಯವಿರುವ ಮಾಜಿ ಸಚಿವ ಕ್ರಿಶನ್ ಲಾಲ್ ಪನ್ವಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಕೆಲವು ಕಾಂಗ್ರೆಸ್ ಶಾಸಕರು ಶರ್ಮಾಗೆ ಮತ : ಮೂಲಗಳ ಪ್ರಕಾರ, ಒಬ್ಬರು ಅಥವಾ ಇಬ್ಬರು ಕಾಂಗ್ರೆಸ್ ಶಾಸಕರು ಕಾರ್ತಿಕೇಯ ಶರ್ಮಾಗೆ ಮತ ಹಾಕಬಹುದು. ಶಾಸಕ ಅಭಯ್ ಚೌತಾಲಾ ಕೂಡ ಶರ್ಮಾಗೆ ಮತ ಹಾಕಬಹುದು. ಏತನ್ಮಧ್ಯೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಕೃಷಿ ಸಚಿವ ರವೀಂದ್ರ ಚೌಬೆ ಅವರು ಜೂನ್ 2ರಂದು ರೆಸಾರ್ಟ್‌ಗೆ ಭೇಟಿ ನೀಡಿ ಹರಿಯಾಣ ಕಾಂಗ್ರೆಸ್ ಶಾಸಕರೊಂದಿಗೆ ಸಂವಾದ ನಡೆಸಿದರು. ಛತ್ತೀಸ್‌ಗಢದ ರೆಸಾರ್ಟ್‌ನಲ್ಲಿ ತಂಗಿರುವ ಹಲವಾರು ಶಾಸಕರು ಹರಿಯಾಣದ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ : ರಾಜ್ಯಸಭಾ ಸ್ಥಾನ ಪಡೆಯಲು ಬಿಜೆಪಿ ಯಾವುದೇ ಹಂತಕ್ಕೂ ಹೋಗಬಹುದು ಎಂದು ಕಾಂಗ್ರೆಸ್ ಹೇಳಿದೆ. ಛತ್ತೀಸ್‌ಗಢದ ಕಾಂಗ್ರೆಸ್ ಮಾಧ್ಯಮ ಘಟಕದ ರಾಜ್ಯಾಧ್ಯಕ್ಷ ಸುಶೀಲ್ ಆನಂದ್ ಶುಕ್ಲಾ, "ಬಿಜೆಪಿ ಕುದುರೆ ವ್ಯಾಪಾರ ಅಥವಾ ಬೆದರಿಕೆ ತಂತ್ರವನ್ನು ಅನುಸರಿಸುತ್ತದೆ. ಅದಕ್ಕಾಗಿಯೇ ಈ ಹರಿಯಾಣ ಶಾಸಕರನ್ನು ಭದ್ರತಾ ಕಾರಣಗಳಿಗಾಗಿ ರಾಯ್‌ಪುರಕ್ಕೆ ಕರೆತರಲಾಗಿದೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.