ETV Bharat / bharat

ಛತ್ತೀಸ್​ಗಢ: ಬೆಂಕಿಪೊಟ್ಟಣದೊಂದಿಗೆ ಆಟವಾಡುತ್ತಿದ್ದ ಬಾಲಕಿ, ಹುಲ್ಲಿನ ಬಣವೆಗೆ ಕಿಡಿ ತಗುಲಿ ಸಾವು - ಹುಲ್ಲಿನ ಬಣವೆಗೆ ಕಿಡಿ ತಗುಲಿ ಸಾವು

ಮದುವೆಗಾಗಿ ನೆಂಟರ ಮನೆಗೆ ಆಗಮಿಸಿದ್ದ ಬಾಲಕಿ ಒಣ ಹುಲ್ಲಿನ ಬಣವೆ ಬಳಿ ಬೆಂಕಿ ಪೊಟ್ಟಣದಲ್ಲಿ ಆಡವಾಡುತ್ತಿದ್ದಾಗ ಕಿಡಿ ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಛತ್ತೀಸ್​ಗಢ: ಬೆಂಕಿಪೊಟ್ಟಣದಲ್ಲಿ ಆಟವಾಡುತ್ತಿದ್ದ ಬಾಲಕಿ, ಹುಲ್ಲಿನ ಬಣವೆ ಕಿಡಿ ತಗುಲಿ ಸಾವು

author img

By

Published : Feb 15, 2023, 5:11 PM IST

ಕೊರಿಯಾ (ಛತ್ತೀಸ್​ಗಢ): ಬೆಂಕಿ ಪಟ್ಟಣ ಹಿಡಿದುಕೊಂಡು ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ಛತ್ತಿಸ್​ಗಢದ ಕೊರಿಯಾ ಪ್ರದೇಶದ ಸೊನ್ಹತ್​ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬಾಲಕಿ ತಮ್ಮ ತಂದೆ ತಾಯಿ ಜೊತೆ ಸೊನ್ಹತ್​​ನ ಸಂಬಂಧಿಕರ ಮನೆಗೆ ತೆರಳಿದ್ದಳು. ಈ ವೇಳೆ, ಹುಲ್ಲಿನ ಬಣವೆ ತುಂಬಿದ್ದ ಕೊಠಡಿಯಲ್ಲಿ ಬೆಂಕಿ ಪೊಟ್ಟಣ ಹಿಡಿದು ಆಟವಾಡುತ್ತಿದ್ದಳು. ಆಕಸ್ಮಿಕವಾಗಿ ಈ ಬೆಂಕಿ ಕಿಡಿ ಹುಲ್ಲಿನ ಬಣವೆಗೆ ತಗುಲಿದ್ದು, ಬಾಲಕಿ ಸಜೀವ ದಹನಗೊಂಡಿದ್ದಾಳೆ. ಘಟನೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ, ತನಿಖೆಗೆ ಮುಂದಾದರು. ಮೃತ ಬಾಲಕಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಯುವತಿ ದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಾಗಿ ರಾಧೆ ನಗರದ ರಹಮ್ ಲಾಲ್​ ಪಂಡೊ ಮತ್ತು ಅವರ ಕುಟುಂಬಸ್ಥರು ಸಹೋದರಿ ಮನೆಗೆ ಬಂದಿದ್ದಾರೆ. ಈ ವೇಳೆ, ನಿರ್ಮಾಣ ಹಂತದ ಕಟ್ಟಡದಲ್ಲಿ ಆಟವಾಡಲು ಬಾಲಕಿ ಹೋಗಿದ್ದಾಳೆ. ಈ ಕಟ್ಟಡದಲ್ಲಿ ಜಾನುವಾರುಗಳಿಗಾಗಿ ಹುಲ್ಲಿನ ಬಣವೆ ಸಂಗ್ರಹಿಸಲಾಗಿತ್ತು. ಬೆಂಕಿ ಪೊಟ್ಟಣ ಹಿಡಿದುಕೊಂಡು ಆಟವಾಡಲು ಹೋದ ಬಾಲಕಿ ಕೈಯಲ್ಲಿ ಕಡ್ಡಿ ಕಿರಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದೆ.

ಬಾಲಕಿಯ ಕಿರುಚಾಟದ ಆಕ್ರಂದನ ಕೇಳಿದಾಕ್ಷಣ ತಾಯಿ ಸೇರಿದಂತೆ ಹಲವು ಮಂದಿ ಆಕೆಯ ರಕ್ಷಣೆಗೆ ಧಾವಿಸಿದ್ದರು. ತಾಯಿ ಸೇರಿದಂತೆ ಗ್ರಾಮದ ಇತರರು ಆಕೆಯನ್ನು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಬಣಗಿದ ಹುಲ್ಲಿನ ಬಣವೆ ಹಿನ್ನಲೆ ಬೆಂಕಿ ಕೆನ್ನಾಲಿಕೆ ಚಾಚಿಕೊಂಡಿದ್ದು, ಆದಾಗಲೇ ಸಮಯ ಮೀರಿ ಹೋಗಿತ್ತು. ಬೆಂಕಿಯ ಹುಡುಗಿಯನ್ನು ಪೂರ್ತಿ ಆಹುತಿಗೆ ತೆಗೆದುಕೊಂಡಿತು.

ಈ ಘಟನೆ ಬೆನ್ನಲ್ಲೇ ಸ್ಥಳೀಯ ಜನರು ಎಚ್ಚರಿಕೆ ಇರುವಂತೆ ಸೂಚನೆ ನೀಡಲಾಗಿದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಈ ರೀತಿಯ ಬೆಂಕಿ ಅನಾಹುತಗಳು ಹೆಚ್ಚಲಿದೆ. ಈ ರೀತಿ ದುರ್ಘಟನೆ ನಡೆಯದಂತೆ ಕ್ರಮ ವಹಿಸುವಂತೆ ತಿಳಿಸಿದ್ದಾರೆ. ಅಲ್ಲದೆ, ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಇದೊಂದು ದುರ್ಘಟನೆಯಾಗಿದ್ದು, ನಾವು ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅಲವತ್ತುಗೊಂಡಿದ್ದಾರೆ.

ಬಿಹಾರದಲ್ಲಿ ಗುಂಡೇಟಿಗೆ ಬಾಲಕಿ ಬಲಿ: ನೆರೆ ಮನೆಯ ಮದುವೆ ಸಮಾರಂಭವನ್ನು ಬಾಗಿಲ ಹಿಂದೆ ನಿಂತು ನೋಡುತ್ತಿದ್ದ 11 ವರ್ಷದ ಬಾಲಕಿ ಗುಂಟೇಟಿಗೆ ಬಲಿಯಾಗಿರುವ ಘಟನೆ ನಡೆದಿದೆ. ಬಿಹಾರದ ಚಂಪಾರಣ್​ ಜಿಲ್ಲೆಯ ಗೊಬರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ನಜಾಮಿ ಸಾವನ್ನಪ್ಪಿದ ಬಾಲಕಿ. ನೆರೆ ಮನೆಯ ಮದುವೆ ಸಮಾರಂಭದಲ್ಲಿ ಆರ್ಕೆಸ್ಟಾ ಹಿನ್ನಲೆ ಬಾಲಕಿ ಬಾಗಿಲ ಹಿಂದೆ ನಿಂತು ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ವಧುವಿನ ದೊಡ್ಡ ಅಣ್ಣ ಗಾಳಿಯಲ್ಲಿ ಗುಂಡು ಹಾರಿದ್ದಾನೆ. ಈ ಗುಂಡು ನಜಾಮಿ ಎದೆ ಹೊಕ್ಕಿದ್ದು, ಆಕೆ ಸಾವನ್ನಪ್ಪಿದ್ದಾಳೆ.

ಘಟನೆ ಬಳಿಕ ಸಂತ್ರಸ್ತೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಾಳಿಯಲ್ಲಿ ಗುಂಡು ಹಾರಿಸಿದ್ದ ಜಿತೇಂದ್ರ ಶಾ ಎಂಬಾಂತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪುಣೆಯ ಭೀಮಾಂಶಕರ ಜ್ಯೋತಿರ್ಲಿಂಗ ನಿಜವಲ್ಲ: ಅಸ್ಸೋಂ ಸರ್ಕಾರದ ಹೇಳಿಕೆಗೆ ಅರ್ಚಕರ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.