ಚೆನ್ನೈ, ತಮಿಳುನಾಡು : 15 ಅಡಿ ಎತ್ತರದ ಸ್ಲೈಡಿಂಗ್ ಗೇಟ್ ಬಿದ್ದು, ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಎಂಜಿನಿಯರ್ ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನ ಕಾನ್‌ಸ್ಟೇಬಲ್ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಹಿರಿಯ ಸೆಕ್ಷನ್ ಇಂಜಿಯನಿರ್ ಆಗಿದ್ದ ನಾರ್ಗುನನ್ (55) ಮತ್ತು ಆರ್‌ಪಿಎಫ್ ಕಾನ್‌ಸ್ಟೇಬಲ್ ಲಕುಮಾನನ್ (41) ಸಾವನ್ನಪ್ಪಿದವರಾಗಿದ್ದು, ಭಾರತೀಯ ರೈಲ್ವೆ ನಡೆಸುತ್ತಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಲಂಡನ್ ಹೈಕೋರ್ಟ್ನಲ್ಲಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ಭಾರಿ ಹಿನ್ನಡೆ
ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ ಉಪಕರಣಗಳನ್ನು ತಂದ ಟ್ರಕ್ಗಾಗಿ ತೆರೆದಿದ್ದ ಬಾಗಿಲನ್ನು ಮುಚ್ಚಲು ಯತ್ನಿಸಿದಾಗ ಈ ಅವಘಡ ಸಂಭವಿಸಿದೆ. ಒಟ್ಟು ಏಳೆಂಟು ಮಂದಿ ಗೇಟ್ ಮುಚ್ಚಲು ಯತ್ನಿಸಿದ್ದು, ಗೇಟ್ನ ಕೆಳಭಾಗದ ಚಕ್ರಗಳ ಲೋಪದೋಷದಿಂದಾಗಿ ಸಿಬ್ಬಂದಿ ಮೇಲೆ ಬಿದ್ದಿದೆ. ಈ ವೇಳೆ ಕೆಲವರು ತಪ್ಪಿಸಿಕೊಂಡರೆ, ನಾರ್ಗುನನ್ ಮತ್ತು ಲಕುಮಾನನ್ ಗೇಟ್ ಅಡಿಯಲ್ಲಿ ಸಿಕ್ಕು ತೀವ್ರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಇಬ್ಬರನ್ನೂ ಐಸಿಎಫ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೂಡಾ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.