ETV Bharat / bharat

ವುಡ್‌ ಕಟ್ಟರ್​ನಿಂದ ಪತ್ನಿ ಮಕ್ಕಳ ಕತ್ತು ಸೀಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ - ಚೆನ್ನೈನಲ್ಲಿ ಆತ್ಮಹತ್ಯೆ ಶರಣಾದ ಕುಟುಂಬಸ್ಥರು

ಕುಟುಂಬಸ್ಥರು ಮನೆಯಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡ ನೆರೆಹೊರೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಾಲ್ವರೂ ರಕ್ತದ ಮಡುವಿನಲ್ಲಿ ಕತ್ತು ಸೀಳಿಕೊಂಡು ಬಿದ್ದಿರುವುದು ಕಂಡು ಬಂದಿದೆ..

chennai-man-kills-wife-two
ಮಾಡಿಕೊಂಡ ಚೆನ್ನೈ ವ್ಯಕ್ತಿ
author img

By

Published : May 28, 2022, 3:17 PM IST

Updated : May 28, 2022, 4:08 PM IST

ಚೆನ್ನೈ(ತಮಿಳುನಾಡು) : ಹಣದ ಕೊರತೆಯಿಂದ ಜೀವನ ನಡೆಸಲು ಕಷ್ಟವಾಗಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಪೋರ್ಟಬಲ್ ಎಲೆಕ್ಟ್ರಿಕ್‌ವುಡ್ ಕಟ್ಟರ್​ನಿಂದ ಕತ್ತು ಸೀಳಿ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಚೆನ್ನೈನಲ್ಲಿ ಶನಿವಾರ ನಡೆದಿದೆ.

ಚೆನ್ನೈನ ಪೊಜಿಚಲೂರ್‌ನ ನಿವಾಸಿಗಳಾಗಿದ್ದ ಪ್ರಕಾಶ್ (41), ಅವರ ಪತ್ನಿ ಗಾಯತ್ರಿ ಮತ್ತು 13 ಮತ್ತು 9 ವರ್ಷದ ಇಬ್ಬರು ಮಕ್ಕಳು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಈ ಭೀಕರ ಘಟನೆ ನೆರೆಹೊರೆಯಲ್ಲಿ ಆಘಾತವನ್ನುಂಟು ಮಾಡಿದೆ.

ಕುಟುಂಬಸ್ಥರು ಮನೆಯಿಂದ ಹೊರಬಾರದೇ ಇದ್ದಾಗ ಅನುಮಾನಗೊಂಡ ನೆರೆಹೊರೆಯವರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಾಲ್ವರೂ ರಕ್ತದ ಮಡುವಿನಲ್ಲಿ ಕತ್ತು ಸೀಳಿಕೊಂಡು ಬಿದ್ದಿರುವುದು ಕಂಡು ಬಂದಿದೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಿದಾಗ ಕುಟುಂಬದವರು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಕಾರಣ ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಓದಿ: ಅಪರಿಚಿತ ಕಾರು ಹಿಟ್ ಅಂಡ್ ರನ್ ; ಇಬ್ಬರು ಸವಾರರು ಸ್ಥಳದಲ್ಲೇ ಸಾವು

Last Updated : May 28, 2022, 4:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.