ತಿರುಪತಿ, ಆಂಧ್ರಪ್ರದೇಶ : ಶ್ರೀವೆಂಕಟೇಶ್ವರನ ಸನ್ನಿಧಾನವಿರುವ ತಿರುಪತಿಯ ತಿರುಮಲ ಬೆಟ್ಟದ ರಸ್ತೆಗಳಲ್ಲಿ ಚಿರತೆ ಅಡ್ಡಾಡುತ್ತಿರುವುದು ಭಕ್ತರ ಮೊಬೈಲ್ನಲ್ಲಿ ಸೆರೆಯಾಗಿದೆ. ಹರಿಣಿ ಪ್ರದೇಶದ ರಸ್ತೆ ಬದಿಯ ಗೋಡೆಯ ಮೇಲೆ ಚಿರತೆ ಕುಳಿತಿರುವುದು ಆತಂಕ ಸೃಷ್ಟಿಸಿದೆ.
ಭಕ್ತರು ವಾಹನದಲ್ಲಿ ತೆರಳುವಾಗ ಚಿರತೆ ಕಂಡಿದೆ. ಭದ್ರತಾ ಸಿಬ್ಬಂದಿಗೆ ವಿಷಯ ತಲುಪಿಸಿದ್ದಾರೆ. ಇದಾದ ನಂತರ ಭದ್ರತಾ ಸಿಬ್ಬಂದಿ ಉಳಿದ ಭಕ್ತರನ್ನು ಈ ಕುರಿತು ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ ತಿರುಮಲದ ರಸ್ತೆಗಳಲ್ಲಿನ ವಾಹನಗಳಲ್ಲಿ ಪ್ರಯಾಣಿಸುವಾಗ, ಯಾವುದೇ ಕಾರಣಕ್ಕೂ ವಾಹನಗಳಿಂದ ಕೆಳಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಶ್ರೀಶೈಲಂ ಬಳಿ ಕರಡಿ ದರ್ಶನ
ಕರ್ನೂಲು ಜಿಲ್ಲೆಯ ಶ್ರೀಶೈಲಂ ವಲಯದ ಸುಂದಿಪೆಂಟ ಗ್ರಾಮದಲ್ಲಿ ಕೆಲವು ದಿನಗಳಿಂದ ಕರಡಿ ಕಾಟ ಹೆಚ್ಚಾಗಿದೆ. ಗ್ರಾಮದ ಹೊರ ವಲಯದಲ್ಲಿರುವ ರಿಕ್ಷಾ ಕಾಲೋನಿಯ ಬಳಿ ಕರಡಿ ಪತ್ತೆಯಾಗಿದೆ. ಗುರುವಾರ ರಾತ್ರಿ ಕರಡಿಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಪ್ರಯತ್ನಿಸಿದ್ದಾರೆ.
ಸ್ಥಳೀಯರು ಕರಡಿಯನ್ನು ಆದಷ್ಟು ಬೇಗನೆ ಹಿಡಿಯಲು ಒತ್ತಾಯಿಸಿದ್ದಾರೆ. ಬೋನುಗಳ ಮೂಲಕ ಕರಡಿಯನ್ನು ಹಿಡಿದು, ಕಾಡಿಗೆ ಬಿಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ವೀಲ್ ಕಳ್ಳರ ಗ್ಯಾಂಗ್ ಎಂಟ್ರಿ: 10ಕ್ಕೂ ಹೆಚ್ಚು ಆಟೋ ಚಕ್ರಗಳು ಗಾಯಬ್