ETV Bharat / bharat

ಹೀಗಿತ್ತು ಸಂಸದ ಸಂತೋಖ್ ಚೌಧರಿ ಅವರ ರಾಜಕೀಯ ಜೀವನ..!

ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೃದಾಯಾಘಾತದಿಂದ ಸಾವು- 1978ರಲ್ಲಿ ರಾಜಕೀಯ ಪ್ರವೇಶ- ಎರಡು ಬಾರಿ ಜಲಂಧರ್​ನಿಂದ ಸಂಸದರಾಗಿ ಆಯ್ಕೆ.

chaudhry-santokh-singh-life-mp-santokh-choudhry-died-of-heart-attack
ಸಂಸದ ಸಂತೋಖ್ ಚೌಧರಿ ಅವರ ರಾಜಕೀಯ ಜೀವನ...
author img

By

Published : Jan 14, 2023, 5:53 PM IST

ಚಂಡೀಗಢ: ಪಂಜಾಬ್​ ರಾಜಕೀಯದಲ್ಲೇ ದುರದೃಷ್ಟಕರ ಸುದ್ದಿಯೊಂದು ಹೊರಬಿದಿದ್ದು, ಜಲಂದರ್​ ಕ್ಷೇತ್ರದ ಸಂಸದ ಚೌಧರಿ ಸಂತೋಖ್​ ಸಿಂಗ್​ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚೌಧರಿ ಸಂತೋಖ್​ ಸಿಂಗ್ ಅವರು ಪಂಜಾಬ್​ನಲ್ಲಿ ನಡೆಯುತ್ತಿರುವ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲೇ ಹೃದಾಯಾಘಾತ ಸಂಭವಿಸಿದ್ದು, ಕೂಡಲೇ ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ರವಾನಿಸಲಾಗಿತ್ತು.

ಅಸ್ಪತ್ರೆ ತಲುಪಿದ ನಂತರ ವೈದ್ಯರು ಸಂತೋಖ್​ ಸಿಂಗ್​ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು. ಪಂಜಾಬ್​ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದ ಚೌಧರಿ ಸಂತೋಖ್​ ಸಿಂಗ್​ ರಾಜಕೀಯದಲ್ಲಿ ಅಪಾರ ಅನುಭವವನ್ನು ಹೊಂದಿದ್ದರು, 2014ರಲ್ಲಿ ಮತ್ತು 2019ರಲ್ಲಿ ಜಲಂಧರ್​ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು.

ಚೌಧರಿ ಸಂತೋಖ್​ ಸಿಂಗ್ ಅವರ ರಾಜಕೀಯ ಜೀವನ: 1978ರಲ್ಲಿ ರಾಜಕೀಯ ಪ್ರವೇಶ ಮಾಡಿದ ಸಂತೋಖ್​ ಸಿಂಗ್​ 1992ರ ವಿಧಾನ ಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಫಿಲ್ಲೌರ್ ನಿಂದ ಸ್ಪರ್ಧಿಸಿ ಗೆದ್ದರು, ನಂತರ 1997ರಲ್ಲಿ ಪಂಜಾಬ್​ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಒಂದು ವರ್ಷ ಸೇವೆ ಸಲ್ಲಿಸಿದರು. 2002ರಲ್ಲಿ ಪಂಜಾಬ್​ನಲ್ಲಿ ಕಾಂಗ್ರೆಸ್​ ಸರ್ಕಾರ ರೂಪುಗೊಂಡಿತ್ತು.

ಕ್ಯಾಪ್ಟನ್​ ಅಮರಿಂದರ್​ ಸಿಂಗ್ ​ಮುಖ್ಯಮಂತ್ರಿಯಾಗಿದ್ದರು. ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಚೌಧರಿ ಸಂತೋಖ್​ ಸಿಂಗ್​ ಮೊಟ್ಟ ಮೊದಲ ಬಾರಿಗೆ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರಿಗೆ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಇಲಾಖೆಗಳ ಮಂತ್ರಿಯಾಗಿ ಚೌಧರಿ ಸಂತೋಖ್​ ಸಿಂಗ್​ ಅವರು ಕಾರ್ಯನಿರ್ವಹಿಸಿದ್ದರು.

ರಾಜಕೀಯ ಕುಟುಂಬ: 2004 ರಿಂದ 2010ರ ವರೆಗೆ ಚೌಧರಿ ಸಂತೋಖ್​ ಸಿಂಗ್​ ಅವರು ಪಂಜಾಬ್​ ಪ್ರದೇಶದ ಕಾಂಗ್ರೆಸ್​ ಸಮಿತಿಯ ಉಪಾಧ್ಯಕ್ಷರಾಗಿದ್ದರು. 2014ರಲ್ಲಿ ​ಮೊದಲ ಬಾರಿಗೆ ಜಲಂಧರ್​ನಿಂದ ಸಂಸದರಾದರು. 2022ರ ಪಂಜಾಬ್​ ವಿಧಾನ ಸಭೆ ಚುನಾವಣೆಯಲ್ಲಿ ಅವರ ಮಗ ಚೌಧರಿ ಬಿಕ್ರಮ್​ ಸಿಂಗ್​ ಫಿಲ್ಲೌರ್‌ ಕ್ಷೇತ್ರದ ಶಾಸಕರಾಗಿದ್ದರು. ಚೌಧರಿ ಸಂತೋಖ್​ ಸಿಂಗ್​ ಕುಟುಂಬವು ರಾಜಕೀಯ ಕುಟುಂಬವಾಗಿತ್ತು, ಅವರ ಅಜ್ಜ ಗೋಪಾಲ್ ಸಿಂಗ್​ ಮತ್ತು ತಂದೆ ಗುರುಬಂದ ಸಿಂಗ್​ ವ್ಯವಸಾಯ ಮಾಡಿಕೊಂಡು ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು.

ಮೂರು ತಿಂಗಳು ಜೈಲುವಾಸ: ಚೌಧರಿ ತಮ್ಮ ರಾಜಕೀಯ ಜೀವನದಲ್ಲಿ ಮೂರು ತಿಂಗಳುಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ಪಂಜಾಬ್​ ಭಯೋತ್ಪಾದನೆಯ ಕರಾಳ ಸಮಯದಲ್ಲಿ ಅನೇಕ ಕಾಂಗ್ರೆಸ್​ ನಾಯಕರು ವಿದೇಶಕ್ಕೆ ಓಡಿಹೋಗಿದ್ದರು. ಆದರೆ, ಚೌಧರಿ ಸಂತೋಖ್​ ಸಿಂಗ್​ ಅವರು ಕಾಂಗ್ರೆಸ್​ ಪಕ್ಷವನ್ನು ತೊರೆಯದೇ ಅಲ್ಲೆ ಸ್ಥಿರವಾಗಿ ನೆಲೆಗೊಂಡರು.

ಚೌಧರಿ ಸಂತೋಖ್​ ಸಿಂಗ್​ ಅವರ ನಿಧನಕ್ಕೆ ಗಣ್ಯರುಗಳು ಸಂತಾಪ ಸೂಚಿಸಿದ್ದಾರೆ. ಪಂಜಾಬ್​ನ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರು ''ಜಲಂಧರ್​ನ ಕಾಂಗ್ರೆಸ್​ ಸಂತೋಖ್​ ಸಿಂಗ್​ ಚೌಧರಿ ಅವರ ಅಕಾಲಿಕ ಮರಣದಿಂದ ತೀವ್ರ ದುಃಖ ತಂದಿದೆ, ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಟ್ವಿಟರ್​ನಲ್ಲಿ ಟ್ವೀಟ್​ ಮಾಡಿದ್ದಾರೆ. ಇನ್ನು ಪಂಜಾಬ್​ನ ಮಾಜಿ ಮುಖ್ಯಮಂತ್ರಿಯಾದ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರು ಸಂತಾಪ ಸೂಚಿಸಿದ್ದು ‘‘ಹೃದಯಾಘಾತಕ್ಕೀಡಾಗಿ ಸಂಸದ ಸಂತೋಖ್​ ಸಿಂಗ್​ ಚೌಧರಿ ಅವರ ಹಠಾತ್​ ನಿಧನದ ಸುದ್ದಿ ಕೇಳಿ ಅತೀವ ನೋವಾಗಿದೆ. ಇಂತಹ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು’’ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ವೇಳೆ ಹೃದಯಾಘಾತದಿಂದ ಕಾಂಗ್ರೆಸ್​ ಸಂಸದ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.