ಬೆಂಗಳೂರು/ನವದೆಹಲಿ : ಚಂದ್ರಯಾನ-3 ಗಗನನೌಕೆಯು ಭೂಮಿಯ ಏಕೈಕ ಉಪಗ್ರಹ ಚಂದ್ರನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ಮುಂಜಾನೆ ಚಂದ್ರಯಾನ 3ರ ಎರಡನೇ ಮತ್ತು ಅಂತಿಮ ಹಂತದ ಡೀಬೂಸ್ಟ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಲ್ಯಾಂಡರ್ (ವಿಕ್ರಮ್) ವೇಗವನ್ನು ಕಡಿಮೆ ಮಾಡಿ, ಲ್ಯಾಂಡರ್ ಘಟಕವನ್ನು ಚಂದ್ರನ ಮೇಲ್ಮೈಗೆ ಬಹಳ ಹತ್ತಿರವಿರುವ ಕಕ್ಷೆ ಸೇರುವಂತೆ ಮಾಡಲಾಗಿದೆ.
-
Chandrayaan-3 Mission:
— ISRO (@isro) August 19, 2023 " class="align-text-top noRightClick twitterSection" data="
The second and final deboosting operation has successfully reduced the LM orbit to 25 km x 134 km.
The module would undergo internal checks and await the sun-rise at the designated landing site.
The powered descent is expected to commence on August… pic.twitter.com/7ygrlW8GQ5
">Chandrayaan-3 Mission:
— ISRO (@isro) August 19, 2023
The second and final deboosting operation has successfully reduced the LM orbit to 25 km x 134 km.
The module would undergo internal checks and await the sun-rise at the designated landing site.
The powered descent is expected to commence on August… pic.twitter.com/7ygrlW8GQ5Chandrayaan-3 Mission:
— ISRO (@isro) August 19, 2023
The second and final deboosting operation has successfully reduced the LM orbit to 25 km x 134 km.
The module would undergo internal checks and await the sun-rise at the designated landing site.
The powered descent is expected to commence on August… pic.twitter.com/7ygrlW8GQ5
ಡೀಬೂಸ್ಟಿಂಗ್ ಎಂದರೇನು?: ಡೀಬೂಸ್ಟಿಂಗ್ ಎನ್ನುವುದು ಚಂದ್ರಯಾನವನ್ನು ಕಕ್ಷೆಯಲ್ಲಿ ಇರಿಸಲು ವೇಗ ನಿಧಾನಗೊಳಿಸುವ ಮಹತ್ವದ ಪ್ರಕ್ರಿಯೆ. ಪ್ರಸ್ತುತ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳನ್ನು ಒಳಗೊಂಡಿರುವ ಮಾಡ್ಯುಲ್ 25 ಕಿಲೋ ವೀಟರ್ x 134 ಕಿಲೋ ಮೀಟರ್ ಕಕ್ಷೆಯಲ್ಲಿದೆ. ಲ್ಯಾಂಡರ್ ಘಟಕವನ್ನು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ (ಸಾಫ್ಟ್ ಲ್ಯಾಂಡಿಂಗ್) ಇಳಿಸಲಾಗುತ್ತದೆ.
-
Chandrayaan-3 Mission:
— ISRO (@isro) August 18, 2023 " class="align-text-top noRightClick twitterSection" data="
View from the Lander Imager (LI) Camera-1
on August 17, 2023
just after the separation of the Lander Module from the Propulsion Module #Chandrayaan_3 #Ch3 pic.twitter.com/abPIyEn1Ad
">Chandrayaan-3 Mission:
— ISRO (@isro) August 18, 2023
View from the Lander Imager (LI) Camera-1
on August 17, 2023
just after the separation of the Lander Module from the Propulsion Module #Chandrayaan_3 #Ch3 pic.twitter.com/abPIyEn1AdChandrayaan-3 Mission:
— ISRO (@isro) August 18, 2023
View from the Lander Imager (LI) Camera-1
on August 17, 2023
just after the separation of the Lander Module from the Propulsion Module #Chandrayaan_3 #Ch3 pic.twitter.com/abPIyEn1Ad
ISRO ಮಾಹಿತಿ: ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ (ನಿಧಾನಗೊಳಿಸುವಿಕೆ) ಕಾರ್ಯಾಚರಣೆಯು LM ಕಕ್ಷೆಯನ್ನು 25 km x 134 kmಗೆ ಯಶಸ್ವಿಯಾಗಿ ಕಡಿಮೆ ಮಾಡಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ. ಹೀಗಾಗಿ, ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್‌ನಲ್ಲಿ ಸೂರ್ಯೋದಯಕ್ಕಾಗಿ ಕಾಯಲಾಗುತ್ತಿದೆ. ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಆಗಸ್ಟ್ 23, 2023ರಂದು ನಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
-
Chandrayaan-3 Mission:
— ISRO (@isro) July 25, 2023 " class="align-text-top noRightClick twitterSection" data="
The orbit-raising maneuver (Earth-bound perigee firing) is performed successfully from ISTRAC/ISRO, Bengaluru.
The spacecraft is expected to attain an orbit of 127609 km x 236 km. The achieved orbit will be confirmed after the observations.
The next… pic.twitter.com/LYb4XBMaU3
">Chandrayaan-3 Mission:
— ISRO (@isro) July 25, 2023
The orbit-raising maneuver (Earth-bound perigee firing) is performed successfully from ISTRAC/ISRO, Bengaluru.
The spacecraft is expected to attain an orbit of 127609 km x 236 km. The achieved orbit will be confirmed after the observations.
The next… pic.twitter.com/LYb4XBMaU3Chandrayaan-3 Mission:
— ISRO (@isro) July 25, 2023
The orbit-raising maneuver (Earth-bound perigee firing) is performed successfully from ISTRAC/ISRO, Bengaluru.
The spacecraft is expected to attain an orbit of 127609 km x 236 km. The achieved orbit will be confirmed after the observations.
The next… pic.twitter.com/LYb4XBMaU3
ಜುಲೈ 14ರಂದು ಉಡಾವಣೆಯಾದ ನಂತರ ಆಗಸ್ಟ್ 5ರಂದು ನೌಕೆ ಚಂದ್ರನ ಕಕ್ಷೆಗೆ ಪ್ರವೇಶಿಸಿತ್ತು. ಆಗಸ್ಟ್ 6, 9, 14 ಮತ್ತು 16 ರಂದು ನೌಕೆಯ ಕಕ್ಷೆ ಕಡಿತ ಕೆಲಸವನ್ನು (ಚಂದ್ರಯಾನ ನೌಕೆಯನ್ನು ಕಕ್ಷೆಯಲ್ಲಿ ಇರಿಸಲು ನಿಧಾನಗೊಳಿಸುವ ಪ್ರಕ್ರಿಯೆ) ನಡೆಸಲಾಯಿತು. ಆಗಸ್ಟ್ 17ರಂದು ಚಂದ್ರಯಾನ 3-ರ ಎಲ್‌ಎಂ (ಲ್ಯಾಂಡರ್ ಮಾಡ್ಯುಲ್) ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಇದೀಗ ಲ್ಯಾಂಡರ್ ಸ್ವತಂತ್ರವಾಗಿ ಚಂದ್ರನ ಅಂಗಳಕ್ಕೆ ಇಳಿಯಲು ಸಿದ್ಧವಾಗುತ್ತಿದೆ.
ಇದನ್ನೂ ಓದಿ : ಚಂದ್ರಯಾನ 3ರ ಐತಿಹಾಸಿಕ ಚಂದ್ರನಂಗಳ ಯಾನ : ಸವಾಲು ಎದುರಿಸಿ ಸುರಕ್ಷಿತದಿಂದ ಇಳಿಸುವ ಯತ್ನ..
-
In the midst of #Chandrayaan3 mission, #ISRO scales another landmark with the successful launch of PSLV-C56/DS-SAR 🛰. PM Sh @NarendraModi’s consistent support enables Team @ISRO to register one success after the other in a serial form. pic.twitter.com/ibt6PlMULg
— Dr Jitendra Singh (@DrJitendraSingh) July 30, 2023 " class="align-text-top noRightClick twitterSection" data="
">In the midst of #Chandrayaan3 mission, #ISRO scales another landmark with the successful launch of PSLV-C56/DS-SAR 🛰. PM Sh @NarendraModi’s consistent support enables Team @ISRO to register one success after the other in a serial form. pic.twitter.com/ibt6PlMULg
— Dr Jitendra Singh (@DrJitendraSingh) July 30, 2023In the midst of #Chandrayaan3 mission, #ISRO scales another landmark with the successful launch of PSLV-C56/DS-SAR 🛰. PM Sh @NarendraModi’s consistent support enables Team @ISRO to register one success after the other in a serial form. pic.twitter.com/ibt6PlMULg
— Dr Jitendra Singh (@DrJitendraSingh) July 30, 2023
ಚಂದ್ರಯಾನ- 3 ಯೋಜನೆಯ ಬಗ್ಗೆ..: ಚಂದ್ರಯಾನ-3 ಎನ್ನುವುದು ಚಂದ್ರಯಾನ-2 ರ ಮುಂದುವರೆದ ಭಾಗ. ಇಸ್ರೋ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ನೌಕೆಯನ್ನು ಉಡಾವಣೆ ಮಾಡಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವುದು, ಚಂದ್ರನ ಮೇಲೆ ರೋವರ್ ತಿರುಗುವುದನ್ನು ಪ್ರದರ್ಶಿಸುವುದು ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಈ ಯೋಜನೆಯ ಉದ್ದೇಶಗಳು. ಚಂದ್ರನ ಮೇಲೆ ಉಪಗ್ರಹವನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಸಾಧನೆಗೈದ ವಿಶ್ವದ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
ಇದನ್ನೂ ಓದಿ : Chandrayaan-3: ಚಂದ್ರಯಾನ-3 ನೌಕೆಯ ಐದನೇ ಕಕ್ಷಾವರೋಹಣ ಯಶಸ್ವಿ.. ನಾಳೆ ಮಾಡ್ಯೂಲ್ ಬೇರ್ಪಡಿಸುವ ಸಾಹಸ