ETV Bharat / bharat

Chandrayaan 3: ರಾಕೆಟ್​ ಉಡಾವಣೆಗೆ ಕ್ಷಣಗಣನೆ.. ಒಡಿಶಾ ತಂತ್ರಜ್ಞರಿಂದಲೂ ಗಣನೀಯ ಕೊಡುಗೆ - ಸೆಂಟ್ರಲ್ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್

Chandrayaan 3 ಉಡಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಕೌಂಟ್​​ಡೌನ್​ ​ ಶುರುವಾಗಿದೆ. ಆದರೆ ಈ ಉಪಗ್ರಹಕ್ಕೆ ಬೇಕಾದ ಅನೇಕ ವಸ್ತುಗಳು ಒಡಿಶಾದಲ್ಲಿ ತಯಾರಿಸಲಾಗಿದ್ದು, ಇದು ರಾಜ್ಯದ ಜನರಿಗೆ ಸಂತಸದ ವಿಷಯವಾಗಿದೆ.

Chandrayaan 3  Odishas major role in moon mission  ರಾಕೆಟ್​ ಉಡಾವಣೆಗೆ ಕ್ಷಣಗಣನೆ  ರಾಜ್ಯದ ಜನರಿಗೆ ಸಂತಸದ ವಿಷಯ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  Chandrayaan 3 ಉಡಾವಣೆ ಪ್ರಕ್ರಿಯೆ ಆರಂಭ  ಸೆಂಟ್ರಲ್ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್  ಸಿಟಿಟಿಸಿಯಲ್ಲಿ ಹಲವಾರು ನಿರ್ಣಾಯಕ ಘಟಕ
ರಾಕೆಟ್​ ಉಡಾವಣೆಗೆ ಕ್ಷಣಗಣನೆ.. ರಾಜ್ಯದ ಜನರಿಗೆ ಸಂತಸದ ವಿಷಯ!
author img

By

Published : Jul 13, 2023, 6:45 PM IST

Updated : Jul 13, 2023, 7:40 PM IST

ಭುವನೇಶ್ವರ್​, ಒಡಿಶಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಳೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ Chandrayaan 3 ಉಡ್ಡಯನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚಂದ್ರಯಾನ- 3 ರಲ್ಲಿ ಒಡಿಶಾ ರಾಜ್ಯವು ಪ್ರಮುಖ ಪಾತ್ರ ವಹಿಸಿರುವುದರಿಂದ ಒಡಿಶಾದ ಜನರಿಗೆ ಇದು ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ ಅಲ್ಲಿನ ತಂತ್ರಜ್ಞರು ಹೇಳಿದ್ದಾರೆ.

ವರದಿಗಳ ಪ್ರಕಾರ, ಚಂದ್ರಯಾನ-3 ಉಪಗ್ರಹದ ಹೆಚ್ಚಿನ ಭಾಗಗಳನ್ನು ಭುವನೇಶ್ವರ ಮೂಲದ ಸೆಂಟ್ರಲ್ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್ (CTTC) ನಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. ವಾಲ್ವ್‌ಗಳು, ಆಂತರಿಕ ಸಂಚರಣೆ ವ್ಯವಸ್ಥೆಗಳು, ತಾಪಮಾನ ಸಂವೇದಕಗಳು, ಏರೋಸ್ಪೇಸ್, ಗೈರೊಸ್ಕೋಪ್, ಆರ್‌ಜಿಪಿಡಿ ಘಟಕಗಳು ಮತ್ತು ಇತರ ಹಲವು ಘಟಕಗಳನ್ನು ರಾಜಧಾನಿಯ ಸಿಟಿಟಿಸಿಯಲ್ಲಿ ತಯಾರಿಸಲಾಗಿದೆ. ತರಬೇತಿ ಕೇಂದ್ರದ 150 ಕ್ಕೂ ಹೆಚ್ಚು ತಂತ್ರಜ್ಞರು ಚಂದ್ರಯಾನ -3 ರ ಪ್ರಮುಖ ಘಟಕಗಳನ್ನು ತಯಾರಿಸಲು ಕಳೆದ ಎರಡು ವರ್ಷಗಳಿಂದ ಶ್ರಮಿಸಿದ್ದಾರೆ ಎಂದು ವರದಿಯಾಗಿದೆ.

ಚಂದ್ರಯಾನ-3 ಗಾಗಿ ಸಿಟಿಟಿಸಿಯಲ್ಲಿ ಹಲವಾರು ನಿರ್ಣಾಯಕ ಘಟಕಗಳನ್ನು ತಯಾರಿಸಲಾಗಿದೆ. ನಾವು ಇಸ್ರೋಗೆ 17,000 ಕ್ಕೂ ಹೆಚ್ಚು ಘಟಕಗಳನ್ನು ಪೂರೈಸಿದ್ದೇವೆ. ನಾಳೆ CTTC ಭುವನೇಶ್ವರಕ್ಕೆ ಒಂದು ದೊಡ್ಡ ದಿನವಾಗಿದೆ ಮತ್ತು ನಾವು ಚಂದ್ರಯಾನ -3 ರ ಯಶಸ್ಸಿಗೆ ಕಾತರದಿಂದ ಕಾಯುತ್ತಿದ್ದೇವೆ ಎಂದು CTTC ಜನರಲ್ ಮ್ಯಾನೇಜರ್ ಎಲ್ ರಾಜಶೇಖರ್ ಹೇಳಿದ್ದಾರೆ.

CTTCಯು 2023 ರ ಕೊನೆಯಲ್ಲಿ ಅಥವಾ 2024 ರಲ್ಲಿ ಉಡಾವಣೆಯಾಗಲಿರುವ ಉಪಗ್ರಹಕ್ಕೆ ಪ್ರಮುಖ ಘಟಕಗಳನ್ನು ತಯಾರಿಸುತ್ತಿದೆ ಎಂದು ವರದಿಯಾಗಿದೆ. CTTC ಭುವನೇಶ್ವರ್ ಈಗ 23 ವರ್ಷಗಳಿಗೂ ಹೆಚ್ಚು ಕಾಲ ISRO ನೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಓದಿ: Chandrayaan-3: ಚಂದ್ರಯಾನ-3 ರ ಉಡಾವಣಾ ನಿಯಂತ್ರಣ ಮುನ್ನಡೆಸಲಿರುವ ಅಸ್ಸೋಂನ ವಿಜ್ಞಾನಿ

3,84,000 ಕಿಮೀ ದೂರ ಪ್ರಯಾಣ: ಚಂದ್ರಯಾನ ಸರಣಿಯಲ್ಲಿ ಇದು ಮೂರನೇ ಉಡಾವಣೆಯಾಗಿದೆ (India Moon Mission). LVM3 M4 ಹೆವಿ ಕ್ಯಾರಿಯರ್ ಉಪಗ್ರಹ ಮೂಲಕ ಈ ಪ್ರಯೋಗ ನಡೆಯುತ್ತಿದೆ. ಈ ಉಪಗ್ರಹವು ಲ್ಯಾಂಡರ್ ಮತ್ತು ರೋವರ್ ಪ್ರೊಪಲ್ಷನ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿದೆ. ಸುಮಾರು 3,84,000 ಕಿಮೀ ದೂರ ಪ್ರಯಾಣಿಸಿ ಚಂದ್ರನ ಮೇಲಿರುವ 100 ಕಿಲೋಮೀಟರ್ ಕಕ್ಷೆಯನ್ನು ತಲುಪಲಿದೆ. ಅದರ ನಂತರ, ಚಂದ್ರನ ದಕ್ಷಿಣ ಧ್ರುವದಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಇಳಿಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರಲ್ಲಿ ಆರ್ಬಿಟರ್ ಕಳುಹಿಸುತ್ತಿಲ್ಲವಂತೆ. ಚಂದ್ರಯಾನ 2 ರಲ್ಲಿ ಉಡಾವಣೆಯಾದ ಆರ್ಬಿಟರ್ ಚಂದ್ರನ ಸುತ್ತ ಸುತ್ತುತ್ತಿದೆ. ಈಗ ಅದನ್ನೇ ಬಳಸಲಾಗುತ್ತಿದೆ ಎಂದು ಇಸ್ರೋ ಬಹಿರಂಗಪಡಿಸಿದೆ.

ಬಾಹುಬಲಿ ರಾಕೆಟ್​: ಚಂದ್ರಯಾನ-3 ಮಿಷನ್‌ನ ಉಡಾವಣೆಗೆ ಅನುಕೂಲವಾಗುವಂತೆ ಇಸ್ರೋ ಜಿಎಸ್​​ಎಲ್​ವಿ (GSLV) ಮಾರ್ಕ್ III ಎಂದೂ ಕರೆಯಲ್ಪಡುವ ಲಾಂಚ್ ವೆಹಿಕಲ್ ಮಾರ್ಕ್-III (LVM-3) ಅನ್ನು ಬಳಸಿಕೊಳ್ಳುತ್ತಿದೆ. ಇಸ್ರೋ ಅಭಿವೃದ್ಧಿಪಡಿಸಿದ ಎಲ್​ವಿಎಂ -3 ಸಂಸ್ಥೆಯ ಫ್ಲೀಟ್‌ನಲ್ಲಿ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ. 4 ಮೀಟರ್ ವ್ಯಾಸದೊಂದಿಗೆ 43.5 ಮೀಟರ್​ ಎತ್ತರ ಇರುವ ಇದು 640 ಟನ್ ತೂಕವನ್ನು ಎತ್ತುವ ಸಾಮರ್ಥ್ಯ ಹೊಂದಿದೆ.

Last Updated : Jul 13, 2023, 7:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.