ETV Bharat / bharat

ಸ್ಕಿಲ್​ ಡೆವಲಪ್​ಮೆಂಟ್​ ಕೇಸ್​: ಚಂದ್ರಬಾಬು ನಾಯ್ಡುಗೆ ಹೈಕೋರ್ಟ್​ನಿಂದ 4 ವಾರಗಳ ಮಧ್ಯಂತರ ಜಾಮೀನು - ಮಧ್ಯಂತರ ಜಾಮೀನು

ಜೈಲು ಶಿಕ್ಷೆಗೆ ಒಳಗಾಗಿರುವ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ.

ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
author img

By ETV Bharat Karnataka Team

Published : Oct 31, 2023, 10:52 AM IST

Updated : Oct 31, 2023, 11:35 AM IST

ಹೈದರಾಬಾದ್​: ಸ್ಕಿಲ್​ ಡೆವಲಪ್​ಮೆಂಟ್​ ಹಗರಣದಲ್ಲಿ ಜೈಲು ಪಾಲಾಗಿದ್ದ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್​ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಅವಧಿ ಮುಂದಿನ ನಾಲ್ಕು ವಾರಗಳವರೆಗೆ ಇರಲಿದೆ.

ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ಕೋರಿ ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ತಲ್ಲಪ್ರಗಡ ಮಲ್ಲಿಕಾರ್ಜುನ ರಾವ್ ಅವರು ಇಂದು ತೀರ್ಪು ಪ್ರಕಟಿಸಿದ್ದು, 4 ವಾರಗಳ ಕಾಲ ಜಾಮೀನನ್ನು ಮಂಜೂರು ಮಾಡಿದ್ದಾರೆ.

ಇದಕ್ಕೂ ಮೊದಲು ಚಂದ್ರಬಾಬು ಅವರಿಗೆ ಜಾಮೀನು ನೀಡಲು ಎಸಿಬಿ ನ್ಯಾಯಾಲಯ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡುವಂತೆ ಪೂರಕ ಅರ್ಜಿ ಸಲ್ಲಿಸಿದ್ದರು. ಚಂದ್ರಬಾಬು ಪರವಾಗಿ ಹಿರಿಯ ವಕೀಲ ಧಮ್ಮಲಪತಿ ಶ್ರೀನಿವಾಸ್ ಅವರು ವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಎಎಜಿ ಪೊನ್ನವೋಲು ಸುಧಾಕರ ರೆಡ್ಡಿ ವಾದಿಸಿದರು.

ಕೋರ್ಟ್​ ಜಾಮೀನು ನೀಡಿದ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಾಯ್ಡು ಪರ ವಕೀಲರು, ಚಂದ್ರಬಾಬು ಅವರ ಆರೋಗ್ಯದ ದೃಷ್ಟಿಯಿಂದ ಜಾಮೀನು ನೀಡಲಾಗಿದೆ. ಕಳೆದ 50 ದಿನಗಳಿಂದ ಜೈಲಿನಲ್ಲಿರುವ ಬಾಬು ಅವರು ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದರು.

ಹತ್ಯೆಗೆ ಸಂಚು ಆರೋಪ: ಕೌಶಲ್ಯಾಭಿವೃದ್ಧಿ ಹಗರಣ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಕೆಲ ದಿನಗಳ ಹಿಂದೆ ಎಸಿಬಿ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದು, ತಮ್ಮ ಹತ್ಯೆಗೆ ಎಡಪಂಥೀಯ ಉಗ್ರಗಾಮಿಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು.

ಮೂರು ಪುಟಗಳ ಪತ್ರದಲ್ಲಿ ಹಲವು ಗಂಭೀರ ವಿಚಾರಗಳನ್ನು ಚಂದ್ರಬಾಬು ನಾಯ್ಡು ಅವರು ಉಲ್ಲೇಖಿಸಿದ್ದರು. ಸೆಪ್ಟೆಂಬರ್​ 9ರಂದು ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಅವರನ್ನು ರಾಜಮಹೇಂದ್ರವರಂನ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿದೆ. ಅಲ್ಲಿ ಅವರು ಅನಾರೋಗ್ಯಕ್ಕಿಡಾಗಿ 5 ಕೆಜಿಗೂ ಅಧಿಕ ತೂಕ ಕಳೆದುಕೊಂಡಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.

ಟಿಡಿಪಿ ಮುಖಂಡರ ಸಂತಸ: ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಟಿಡಿಪಿ ಮುಖಂಡರು ಸಂಸತಕ್ಕೆ ಕಾರಣವಾಗಿದೆ. ಮಾಧ್ಯಮಗೋಷ್ಠಿ ನಡೆಸಿದ ಮುಖಂಡರು, ಭ್ರಷ್ಟಾಚಾರದ ವಿರುದ್ಧ ಧರ್ಮ ಗೆದ್ದಿದೆ ಎಂದು ಹೇಳಿದರು.

ಇದನ್ನೂ ಓದಿ: 'ನನ್ನ ಜೀವಕ್ಕೆ ಅಪಾಯ ಎದುರಾಗಿದೆ': ಎಸಿಬಿ ನ್ಯಾಯಾಧೀಶರಿಗೆ ಜೈಲಿನಿಂದಲೇ ಚಂದ್ರಬಾಬು ನಾಯ್ದು ಪತ್ರ

Last Updated : Oct 31, 2023, 11:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.