ಚಂಡೀಗಢ: ಮಹಿಳಾ ಪೊಲೀಸ್ ಕಾನ್ಸ್ಟೆಬಲ್ವೋರ್ವರು ಮಗುವಿನೊಂದಿಗೆ ಕರ್ತವ್ಯ ನಿರ್ಹಹಣೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ತನಿಖೆಗೊಳಪಡಲಿದ್ದಾರೆ.
ಚಂಡೀಗಢ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಪ್ರಿಯಾಂಕಾ ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ ಆಕೆಯ ವಿರುದ್ಧ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಇಲ್ಲಿನ ಸೆಕ್ಟರ್ 15-16-23-24 ಚೌಕ್ ಬಳಿ ಬೆಳಗ್ಗೆ ಮಹಿಳಾ ಕಾನ್ಸ್ಟೆಬಲ್ ಪ್ರಿಯಾಂಕಾ ಕರ್ತವ್ಯದಲ್ಲಿರುವುದು ಕಂಡು ಬಂದಿರಲಿಲ್ಲ. ಈ ವೇಳೆ, ಇನ್ಸ್ಪೆಕ್ಟರ್ ಪ್ರಶ್ನೆ ಮಾಡಿದಾಗ ಆಕೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು. ಇದಾದ ಬಳಿಕ ತಡವಾಗಿ ಸ್ಥಳಕ್ಕಾಗಮಿಸಿದ ಪ್ರಿಯಾಂಕಾ ಮಗು ಹೊತ್ತುಕೊಂಡು ಕರ್ತವ್ಯ ನಿರ್ವಹಣೆ ಮಾಡಿದ್ದರು. ಆದರೆ, ಈ ಹಿಂದೆ ಆಕೆ ಮಗುವಿನೊಂದಿಗೆ ಕರ್ತವ್ಯ ನಿರ್ವಹಣೆ ಮಾಡುವುದಕ್ಕೆ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಅವರ ಆದೇಶ ಕಡೆಗಣಿಸಿ ಮಹಿಳಾ ಕಾನ್ಸ್ಟೇಬಲ್ ಕರ್ತವ್ಯ ನಿರ್ವಹಣೆ ಮಾಡಿದ್ದು, ಹೀಗಾಗಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತಂದೆಯ ಹೆಸರು ಕೇಳಿದ ಮಗ... ಅತ್ಯಾಚಾರವಾದ 27 ವರ್ಷಗಳ ಬಳಿಕ ರೇಪಿಸ್ಟ್ಗಳ ಮೇಲೆ ಕೇಸ್ ಜಡಿದ ತಾಯಿ!
ಇನ್ನು ಮಹಿಳಾ ಕಾನ್ಸ್ಟೇಬಲ್ ತನ್ನ ಮಡಿಲಲ್ಲಿ ಮಗುವನ್ನ ಹಾಕಿಕೊಂಡು ಸಂಚಾರ ನಿಯಂತ್ರಣ ಮಾಡುತ್ತಿರುವ ಪ್ರಿಯಾಂಕಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.