ಚಂಡೀಗಢ(ಪಂಜಾಬ್): 60-65 ವರ್ಷ ದಾಟುತ್ತಿದ್ದಂತೆ ಜನರು ಸಾಮಾನ್ಯವಾಗಿ ದೇವರ ಸ್ತೋತ್ರ ಭಜಿಸುತ್ತಾ, ವಿವಿಧ ದೇವಾಲಯಗಳ ಯಾತ್ರೆ ಮಾಡುತ್ತ ತಮ್ಮ ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ, ಚಂಡೀಗಢದಲ್ಲೊಂದು ವಿಭಿನ್ನ ಪ್ರಕರಣ ಬೆಳಕಿಗೆ ಬಂದಿದೆ. ಇದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.
ಇಲ್ಲಿ ಸುಮಾರು 67 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 70 ವರ್ಷ ಹಾಗೂ 65 ವರ್ಷದ ವೃದ್ಧೆಯರಿಬ್ಬರನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಅನೇಕ ತಿಂಗಳಿಂದ ಇವರು ಕಳ್ಳತನ, ಸರಗಳ್ಳತನ ಹಾಗೂ ವಂಚನೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಬಂಧಿತರನ್ನು 65 ವರ್ಷದ ಸತ್ಯ ಹಾಗೂ 70 ವರ್ಷದ ಗುರ್ಮೀತೋ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕೆಲಸ ಮಾಡ್ತಿದ್ದ ವೇಳೆ ಸ್ಫೋಟಗೊಂಡ ಲ್ಯಾಪ್ಟಾಪ್; ಯುವತಿಗೆ ಗಂಭೀರ ಗಾಯ
ಬಂಧಿತರಿಂದ 16 ಗ್ರಾಂ ಚಿನ್ನದ ಬಳೆ ಹಾಗೂ ಇತರೆ ಬೆಳೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರನ್ನು ವಿಚಾರಣೆಗೊಳಪಡಿಸಿದಾಗ ತಾವು ಎಸಗಿರುವ ಕೃತ್ಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ. ಪಂಜಾಬ್ನ ರಾಜಧಾನಿ ಚಂಡೀಗಢದ ವಿವಿಧ ನಗರಗಳಲ್ಲಿ ಇವರ ವಿರುದ್ಧ ಸರಗಳ್ಳತನ, ವಂಚನೆ ಸೇರಿದಂತೆ 67 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಆರೋಪಿಗಳನ್ನು ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ.