ನವದೆಹಲಿ: ಕೇಂದ್ರ ಸರ್ಕಾರವು 'ಶೂನ್ಯ ಲಸಿಕೆ ನೀತಿ' ಹೊಂದಿದ್ದು, ಇದು 'ಮಾತೃ ಭಾರತದ ಹೃದಯದಲ್ಲಿ ಕತ್ತಿ'ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರೆ.
ಈ ವರ್ಷದ ಮೇ ತಿಂಗಳಲ್ಲಿ ಕೋವಿಡ್ ನಂತರದ ನಿರುದ್ಯೋಗ ದರವು ಎರಡು ಅಂಕೆಗಳಲ್ಲಿದೆ ಎಂದು ಮಾಧ್ಯಮ ವರದಿಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರದ ಶೂನ್ಯ ಲಸಿಕೆ ನೀತಿಯು ಮಾತೃ ಭಾರತದ ಹೃದಯದಲ್ಲಿ ಕತ್ತಿಯಾಗಿ ವರ್ತಿಸುತ್ತಿದೆ. ಇದು ದುಃಖಕರವಾದ ಸತ್ಯ ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಎರಡನೇ ಅಲೆಯ ಸಾಂಕ್ರಾಮಿಕ ರೋಗ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಸೊಕ್ಕಿನ ನಿರ್ಣಯಗಳಿಂದ ಶೇ 97ರಷ್ಟು ಭಾರತೀಯರು ಬಡತನಕ್ಕೆ ಒಳಗಾಗಿದ್ದಾರೆ ಇದಕ್ಕೂ ಮುನ್ನ ಮತ್ತೊಂದು ಟ್ವೀಟ್ ಮಾಡಿದ್ದರು.
ಕೋವಿಡ್ ಸಾಂಕ್ರಾಮಿಕ ರೋಗವನ್ನು ಮೋದಿ ಸರ್ಕಾರ ನಿಭಾಯಿಸುವಿಕೆ ಮತ್ತು ಅದರ ಲಸಿಕೆ ನೀತಿಯನ್ನು ಗಾಂಧಿ ಟೀಕಿಸಿದ್ದಾರೆ.
ಮೋದಿ ಸರ್ಕಾರದ ವಿರುದ್ಧದ ಟೀಕೆಯ ಭಾಗವಾಗಿ ಕಾಂಗ್ರೆಸ್ ವ್ಯಾಕ್ಸಿನೇಷನ್ ಬಗ್ಗೆ ತಪ್ಪು ಮಾಹಿತಿ ಮತ್ತು ಭಯವನ್ನು ಹರಡಿದೆ ಎಂದು ಬಿಜೆಪಿ ಆರೋಪಿಸಿದೆ.