ETV Bharat / bharat

ಕೃಷಿ ಕಾನೂನು ಪ್ರತಿಭಟನೆ: ರೈತರೊಂದಿಗೆ 10ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಿಕೆ - ಕೇಂದ್ರ ಸರ್ಕಾರ ವರ್ಸಸ್​ ಕೃಷಿ ಸಂಘಟನೆ

ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಮಧ್ಯೆ ನಾಳೆ 10ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.

farmers talk
farmers talk
author img

By

Published : Jan 19, 2021, 5:54 AM IST

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಇದರ ಮಧ್ಯೆ ಇಂದು ನಡೆಯಬೇಕಾಗಿದ್ದ 10ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಿಕೆಯಾಗಿದೆ.

ಕೃಷಿ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಈಗಾಗಲೇ ನಡೆದಿರುವ ಎಲ್ಲ ಸಭೆಗಳು ವಿಫಲಗೊಂಡಿರುವ ಕಾರಣ ಇಂದು 10ನೇ ಸುತ್ತಿನ ಮಾತುಕತೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ ಇದನ್ನ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಈ ಹಿಂದೆ ನಡೆದಿರುವ ಸಭೆಯಲ್ಲಿ ಕೃಷಿ ಕಾನೂನು ರದ್ಧುಗೊಳಿಸುವಂತೆ ವಿವಿಧ ರೈತ ಸಂಘಟನೆಗಳು ಪಟ್ಟು ಹಿಡಿದಿದ್ದು, ಇದಕ್ಕೆ ಕೇಂದ್ರ ಸರ್ಕಾರ ತಯಾರಿಲ್ಲ. ಇದೇ ಕಾರಣಕ್ಕೆ ರೈತ ಸಂಘಟನೆ ಹಾಗೂ ಕೇಂದ್ರದ ನಡುವೆ ಒಮ್ಮತದ ಅಭಿಪ್ರಾಯ ಮೂಡುತ್ತಿಲ್ಲ ಎಂದು ತಿಳಿದು ಬಂದಿದೆ.

ಓದಿ: ನಾಳೆ ಕೃಷಿ ಕಾನೂನು ಕುರಿತ 'ಸುಪ್ರೀಂ' ಸಮಿತಿಯ ಮೊದಲ ಸಭೆ

ನಾಳೆ ಮಧ್ಯಾಹ್ನ 2 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದ್ದು, ಬಿಕ್ಕಟ್ಟು ಇತ್ಯರ್ಥವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇನ್ನು ಹೊಸ ಕೃಷಿ ಕಾನೂನುಗಳ ಕುರಿತು ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ತನ್ನ ಮೊದಲ ಸಭೆಯನ್ನು ದೆಹಲಿಯ ಪೂಸಾ ಕ್ಯಾಂಪಸ್‌ನಲ್ಲಿ ಇಂದು ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.