ನವದೆಹಲಿ: ಎರಡನೇ ಹಂತದ ಕೋವಿಡ್ ಅಲೆ ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಭಾಗದಲ್ಲೂ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿರುವ ಕೇಂದ್ರ ಸರ್ಕಾರ ಇದೀಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆಯಿಂದ ಈ ಗೈಡ್ಲೈನ್ಸ್ ರಿಲೀಸ್ ಆಗಿದ್ದು, ಅರೆ ನಗರ, ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್ ನಿರ್ವಹಣೆಗೆ ಈ ಮಾರ್ಗಸೂಚಿ ಪಾಲಿಸುವಂತೆ ತಿಳಿಸಲಾಗಿದೆ.
![Centre issues guidelines](https://etvbharatimages.akamaized.net/etvbharat/prod-images/11782578_y.jpg)
ಪ್ರಮುಖವಾಗಿ ಕೋವಿಡ್ ಗುಣಲಕ್ಷಣ ಕಂಡು ಬಂದ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಅಲ್ಲಿನ ಆಶಾ ಕಾರ್ಯಕರ್ತೆಯರು ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗಳಿಗೆ ಹೋಗಿ ಸರ್ವೆ ಮಾಡಬೇಕಿದೆ.
ಪ್ರಮುಖ ಮಾರ್ಗಸೂಚಿಗಳು ಇಂತಿವೆ..
- ಕೋವಿಡ್ ಗುಣಲಕ್ಷಣ/ತೀವ್ರ ಉಸಿರಾಟದ ತೊಂದರೆ ಕಂಡು ಬಂದರೆ ತಕ್ಷಣವೇ ಪರೀಕ್ಷೆ
- ಸಮುದಾಯ ಆರೋಗ್ಯಾಧಿಕಾರಿಯಿಂದ ಕೋವಿಡ್ ಚಿಕಿತ್ಸೆ ಬಗ್ಗೆ ಮಾಹಿತಿ(ಟೆಲಿ ಕನ್ಸಲ್ವೇಷನ್)
- ಱಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಲು ಅಲ್ಲಿನ ನರ್ಸ್ಗಳಿಗೆ ಕೋವಿಡ್ ಟೆಸ್ಟ್ ತರಬೇತಿ
- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಅವಶ್ಯಕತೆ ಇಲ್ಲದಿದ್ದರೆ ಮನೆಯಲ್ಲೇ ಹೋಂ ಐಸೋಲೇಷನ್ಗೆ ಸೂಚನೆ
- ಕೋವಿಡ್ ಪರೀಕ್ಷೆ ಬರುವುದಕ್ಕಿಂತಲೂ ಮುಂಚಿತವಾಗಿ ಕ್ವಾರಂಟೈನ್ ಆಗಲು ಸೂಚನೆ
- ಸಮುದಾಯ ಕೇಂದ್ರಗಳಲ್ಲಿ ಱಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲು ಎಲ್ಲ ರೀತಿಯ ಸೌಲಭ್ಯ ಇರುವಂತೆ ನೋಡಿಕೊಳ್ಳುವುದು
- ಪ್ಯಾರಸಿಟಮಾಲ್ 500 ಮಿ.ಗ್ರಾಂ ಸೇರಿದಂತೆ ಅಗತ್ಯ ಔಷಧಿ ಒಳಗೊಂಡು ಪ್ರತ್ಯೇಕ ಕಿಟ್(ಕೋವಿಡ್ ಸೋಂಕಿರುವ ಮನೆಗಳಿಗೆ)
- ಹೋಂ ಐಸೋಲೇಷನ್ನಲ್ಲಿರುವವರಿಗೆ ಕೋವಿಡ್ ಮೆಡಿಕಲ್ ಕಿಟ್ ನೀಡಲು ಸೂಚನೆ
- ಪಲ್ಸ್ ರೇಟ್ 94ಕ್ಕಿಂತಲೂ ಕಡಿಮೆ ಇದ್ದರೆ ತಕ್ಷಣವೇ ಚಿಕಿತ್ಸೆ, ಜಿಲ್ಲಾ ಕೇಂದ್ರಗಳಿಗೆ ಕಳುಹಿಸಲು ನಿರ್ಧಾರ
ಇದನ್ನೂ ಓದಿ: ರಕ್ಕಸ ತೌಕ್ತೆ ಚಂಡಮಾರುತ.. ನಾಳೆ, ನಾಡಿದ್ದು ಗುಜರಾತ್ನಲ್ಲಿ ಮಳೆ-ಗಾಳಿ ಆರ್ಭಟ
ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳ ಒಟ್ಟು ಸಂಖ್ಯೆಯಲ್ಲಿ ಇಳಿಮುಖವಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಹರಡಿಕೊಂಡಿರುವ ಕಾರಣ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕೋವಿಡ್ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಝೋನ್ ನಿರ್ಮಾಣ, ಜತೆಗೆ ಮನೆ-ಮನೆಗೆ ತೆರಳಿ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು.