ಕೋಲ್ಕತಾ: ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರೆಸಿದ ಮಮತಾ ಬ್ಯಾನರ್ಜಿ, ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಕೇಂದ್ರವು ನಿರ್ಭಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
"ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಯಲ್ಲಿ ಕೇಂದ್ರವು ಹಸ್ತಕ್ಷೇಪ ಮಾಡುತ್ತಿದೆ. ಬಂಗಾಳದ ಜನರಿಗೆ ಬೆಂಬಲ ತೋರಿದ ಮತ್ತು ಸಂಯುಕ್ತ ವ್ಯವಸ್ಥೆಯ ಮೇಲಿನ ಅವರ ಬದ್ಧತೆಯನ್ನು ಪುನರುಚ್ಚರಿಸಿದ್ದಕ್ಕಾಗಿ ಭೂಪೇಶ್ ಬಾಗೆಲ್, ಅರವಿಂದ್ ಕೇಜ್ರಿವಾಲ್, ಕ್ಯಾಪ್ಟನ್ ಅಮರಿಂದರ್ ಸಿಂಗ್, ಅಶೋಕ್ ಗೆಹ್ಲೋಟ್ ಮತ್ತು ಎಂ.ಕೆ. ಸ್ಟಾಲಿನ್ ಅವರಿಗೆ ನನ್ನ ಕೃತಜ್ಞತೆಗಳು" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
-
Centre is brazenly interfering with State Govt functioning by transferring police officers. My gratitude to @bhupeshbaghel @ArvindKejriwal @capt_amarinder @ashokgehlot51 & @mkstalin for showing solidarity to people of Bengal & reaffirming their commitment to federalism.Thank you!
— Mamata Banerjee (@MamataOfficial) December 20, 2020 " class="align-text-top noRightClick twitterSection" data="
">Centre is brazenly interfering with State Govt functioning by transferring police officers. My gratitude to @bhupeshbaghel @ArvindKejriwal @capt_amarinder @ashokgehlot51 & @mkstalin for showing solidarity to people of Bengal & reaffirming their commitment to federalism.Thank you!
— Mamata Banerjee (@MamataOfficial) December 20, 2020Centre is brazenly interfering with State Govt functioning by transferring police officers. My gratitude to @bhupeshbaghel @ArvindKejriwal @capt_amarinder @ashokgehlot51 & @mkstalin for showing solidarity to people of Bengal & reaffirming their commitment to federalism.Thank you!
— Mamata Banerjee (@MamataOfficial) December 20, 2020
ಬಿಜೆಪಿ ಈಗಾಗಲೇ 2021ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೋಲ್ಪುರದಲ್ಲಿ ರೋಡ್ ಶೋ ನಡೆಸಿದ ನಂತರ ದೀದಿ ಈ ಟ್ವೀಟ್ ಮಾಡಿದ್ದಾರೆ. ರೋಡ್ ಶೋ ವೇಳೆ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಬಂಗಾಳದ ಜನರು 'ಬದಲಾವಣೆ' ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಓದಿ: ಮೋದಿಗೆ ಒಂದು ಅವಕಾಶ ಕೊಡಿ,'ಬಂಗಾರದ ಬಂಗಾಳ' ಮಾಡುತ್ತೇವೆ: ಅಮಿತ್ ಶಾ
ಗೃಹ ಸಚಿವಾಲಯ ಪದೇ ಪದೇ ಸಮನ್ಸ್ ನೀಡಿದ ನಂತರವೂ ಮೂವರು ಐಪಿಎಸ್ ಅಧಿಕಾರಿಗಳನ್ನು ಡೆಪ್ಯೂಟೇಶನ್ ಮೇಲೆ ಕಳುಹಿಸಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.
ಭೋಲನಾಥ್ ಪಾಂಡೆ (ಎಸ್‌ಪಿ, ಡೈಮಂಡ್ ಹಾರ್ಬರ್), ಪ್ರವೀಣ್ ತ್ರಿಪಾಠಿ (ಡಿಐಜಿ, ಪ್ರೆಸಿಡೆನ್ಸಿ ರೇಂಜ್) ಮತ್ತು ರಾಜೀವ್ ಮಿಶ್ರಾ (ಎಡಿಜಿ, ದಕ್ಷಿಣ ಬಂಗಾಳ) ಎಂಬ ಮೂವರು ಅಧಿಕಾರಿಗಳು ಡಿಸೆಂಬರ್ 9-10ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಭದ್ರತೆಯ ಜವಾಬ್ದಾರಿ ಹೊತ್ತಿದ್ದರು. ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ನಂತರ ಕೇಂದ್ರ ಸರ್ಕಾರ ಈ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಬರುವಂತೆ ಸೂಚಿಸಿದೆ.