ETV Bharat / bharat

ಬಿಎಸ್​ಎಫ್​ ಯೋಧರಿಗೆ ವಿಶ್ವದರ್ಜೆಯ ತಂತ್ರಜ್ಞಾನ ಒದಗಿಸಲು ಕೇಂದ್ರ ಸಿದ್ಧ: ಅಮಿತ್​ ಶಾ ಅಭಯ - ಬಿಎಸ್​ಎಫ್​ ಪಡೆಗೆ ವಿಶ್ವದರ್ಜೆಯ ತಂತ್ರಜ್ಞಾನ

ಬಿಎಸ್​ಎಫ್​ ಭದ್ರತಾ ಪಡೆಗಳ ಮೊದಲ ಸಾಲಿನಲ್ಲಿದೆ. ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತೆಯೇ ರಾಷ್ಟ್ರೀಯ ಭದ್ರತೆಯಾಗಿದೆ. ಅದಕ್ಕಾಗಿ ಬಿಎಸ್​ಎಫ್​ ಯೋಧರಿಗೆ ವಿಶ್ವದ ಅತ್ಯುನ್ನತ ತಂತ್ರಜ್ಞಾನಾಧಾರಿತ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಗೃಹ ಸಚಿವ ಅಮಿತ್​ ಶಾ ತಿಳಿಸಿದರು.

Amith Shah
ಗೃಹ ಸಚಿವ ಅಮಿತ್​ ಶಾ
author img

By

Published : Dec 5, 2021, 9:08 PM IST

ಜೈಸಲ್ಮೇರ್​(ರಾಜಸ್ಥಾನ): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತೆಯೇ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ದೇಶದ ಗಡಿ ಕಾಯುವ ಪ್ರಮುಖ ಪಡೆಯಾದ ಗಡಿ ಭದ್ರತಾ ಪಡೆ(ಬಿಎಸ್ಎಫ್​) ಯೋಧರಿಗೆ ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಒದಗಿಸಲು ಸರ್ಕಾರ ಸಿದ್ಧ ಎಂದು ಗೃಹ ಸಚಿವ ಅಮಿತ್​ ಶಾ ಅಭಯ ನೀಡಿದರು.

ರಾಜಸ್ತಾನದ ಜೈಸಲ್ಮೇರ್​ನಲ್ಲಿ ನಡೆದ ಬಿಎಸ್‌ಎಫ್‌ನ 57ನೇ ಪುನರುತ್ಥಾನ ದಿನವನ್ನು ಉದ್ದೇಶಿಸಿ ಮಾತನಾಡಿದ ಅಮಿತ್​ ಶಾ, ಬಿಎಸ್​ಎಫ್​ ಭದ್ರತಾ ಪಡೆಗಳ ಮೊದಲ ಸಾಲಿನಲ್ಲಿದೆ. ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತೆಯೇ ರಾಷ್ಟ್ರೀಯ ಭದ್ರತೆಯಾಗಿದೆ. ಅದಕ್ಕಾಗಿ ಬಿಎಸ್​ಎಫ್​ ಯೋಧರಿಗೆ ವಿಶ್ವದ ಅತ್ಯುನ್ನತ ತಂತ್ರಜ್ಞಾನಾಧಾರಿತ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ವಾಗ್ದಾನ ಮಾಡಿದರು.

2014ರಿಂದ ದೇಶದ ಗಡಿ ಭದ್ರತೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೇಶದ ಗಡಿಯಲ್ಲಿ ವಿರೋಧಿಗಳಿಂದ ಎಲ್ಲೇ ಅತಿಕ್ರಮಣ ಯತ್ನ ನಡೆದರೂ ತಕ್ಷಣವೇ ಅಲ್ಲಿ ನಮ್ಮ ಸೇನಾಪಡೆಗಳು ಪ್ರತಿದಾಳಿ ನಡೆಸಿವೆ. ದೇಶದ ಪೊಲೀಸ್ ಪಡೆ, ಬಿಎಸ್‌ಎಫ್ ಮತ್ತು ಸಿಎಪಿಎಫ್‌ನ 35,000 ಕ್ಕೂ ಹೆಚ್ಚು ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಅಮಿತ್​ ಶಾ ತಿಳಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ 6 ಮಂದಿಗೆ, ರಾಜಸ್ಥಾನದಲ್ಲಿ 9 ಜನರಿಗೆ ಒಮಿಕ್ರಾನ್ ದೃಢ: ದೇಶದಲ್ಲಿ 21ಕ್ಕೇರಿತು ರೂಪಾಂತರಿ ವೈರಸ್ ಕೇಸ್​ ​

ಇದೇ ವೇಳೆ ಹುತಾತ್ಮರಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ಬಿಎಸ್‌ಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಎಸ್‌ಎಫ್‌ನ 57ನೇ ಪುನರುತ್ಥಾನ ದಿನದ ಅಂಗವಾಗಿ ಕೇಂದ್ರ ಗೃಹ ಸಚಿವರು ಬಿಎಸ್‌ಎಫ್ ಯೋಧರಿಗೆ ಪದಕಗಳನ್ನು ಪ್ರದಾನ ಮಾಡಿದರು.

ಇದಕ್ಕೂ ಮುನ್ನ ಶನಿವಾರದಂದು ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಾದ ರೋಹಿತಾಶ್ ಬಾರ್ಡರ್‌ಗೆ ಗೃಹ ಸಚಿವರು ಭೇಟಿ ನೀಡಿ, ಬಿಎಸ್‌ಎಫ್ ಸಿಬ್ಬಂದಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.