ETV Bharat / bharat

ವರ್ಷಾಂತ್ಯದಿಂದ ದೇಶದಲ್ಲಿ 5ಜಿ ಸೇವೆ ಶುರು: ಕೇಂದ್ರ ಸರ್ಕಾರ - ಈ ವರ್ಷದಿಂದ 5 ಜಿ ಡೇಟಾ ಸೇವೆ

ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಾಗುವುದು. ಹರಾಜಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ಕ್ಕೆ ಕೋರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

5g-services
5ಜಿ ಸೇವೆ
author img

By

Published : Mar 25, 2022, 8:26 PM IST

ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದ್ದು, ಸ್ಪೆಕ್ಟ್ರಮ್ ಹರಾಜು ಕೂಡ ಶೀಘ್ರದಲ್ಲೇ ನಡೆಯಲಿದೆ ಎಂದು ತಿಳಿಸಿದೆ. ಪ್ರಶ್ನೋತ್ತರ ವೇಳೆಯಲ್ಲಿ ಸದನಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಸಚಿವ ದೇವು ಸಿನ್ಹ ಚೌಹಾಣ್, ದೇಶದಲ್ಲಿ 5ಜಿ ತಂತ್ರಜ್ಞಾನ ಪ್ರಾರಂಭಕ್ಕಾಗಿ ನಾಲ್ಕು ಕಂಪನಿಗಳಿಗೆ ತರಂಗಾಂತರಗಳನ್ನು ರೂಪಿಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಪ್ರಯೋಗಗಳು ಪೂರ್ಣಗೊಂಡು, ದೇಶಾದ್ಯಂತ 5ಜಿ ಸೇವೆ ಜನರಿಗೆ ಸಿಗಲಿದೆ ಎಂದು ತಿಳಿಸಿದರು.

ಇನ್ನು ಭಾರಿ ನಷ್ಟದಿಂದಾಗಿ ಮುಚ್ಚುವ ಹಂತಕ್ಕೆ ತಲುಪಿರುವ ಬಿಎಸ್​ಎನ್​ಎಲ್​ ಕೂಡ ಈ ವರ್ಷ 4 ಜಿ ಸೇವೆಯನ್ನು ಆರಂಭಿಸಲಿದೆ. ಕಳೆದ 7 ವರ್ಷಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಮಹಾನ್​ ಕ್ರಾಂತಿಯಾಗಿದೆ. ಅಂತರ್ಜಾಲ ಬಳಕೆಯ ಮೇಲೆ ಸುಂಕಗಳು ಕಡಿಮೆ ಇದ್ದ ಕಾರಣ ಡೇಟಾ ಬಳಕೆಯು ಹೆಚ್ಚಿದೆ ಎಂದು ಅವರು ನೀಡಿದರು.

ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಅನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ಸರ್ಕಾರಿ ಸ್ವಾಮ್ಯದ ನಿಗಮವಾದ ಬಿಎಸ್​ಎನ್​ಎಲ್​ 4 ಜಿ ಸೇವೆಗಳನ್ನು ಪ್ರಾರಂಭಿಸುವುದರೊಂದಿಗೆ ಕಂಪನಿಯ ಗುಣಮಟ್ಟ ಕೂಡ ಸುಧಾರಿಸಲಿದೆ ಎಂದರು.

2020-21ರಲ್ಲಿ ದೇಶದಲ್ಲಿ ಮೊಬೈಲ್​ ಬಳಕೆದಾರರ ಸಂಖ್ಯೆಯಲ್ಲೂ ಯಾವ ಇಳಿಕೆ ಕಂಡಿಲ್ಲ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆ 2020 ರಲ್ಲಿದ್ದ 1157.75 ಮಿಲಿಯನ್‌ನಿಂದ 2021 ರ ವೇಳೆಗೆ ಅದು 1180.96 ಮಿಲಿಯನ್‌ಗೆ ಏರಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿಗೆ ಲಿಖಿತ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: 37 ವರ್ಷದ ನಂತರ ಸತತ 2ನೇ ಅವಧಿಗೆ ಯುಪಿ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಐತಿಹಾಸಿಕ ಪದಗ್ರಹಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.