ದೆಹಲಿ: ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾಲನ್ನು ಹೊಂದಿರುವ ಅಬಕಾರಿ ಇಲಾಖೆಯ ಸ್ಮರಣಾರ್ಥವಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಈ ಮೂಲಕ ಈ ಇಲಾಖೆ ಸೇವೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲಾಗುವುದು. ಇದೇ ಕಾರಣಕ್ಕೆ ಪ್ರತಿ ವರ್ಷ ಫೆಬ್ರವರಿ 24 ರಂದು ಇಡೀ ದೇಶಾದ್ಯಂತ ಕೇಂದ್ರ ಅಬಕಾರಿ ದಿನವನ್ನಾಗಿ ಆಚರಿಸಲಾಗುವುದು. ಅಬಕಾರಿ ಇಲಾಖೆಯ ನೌಕರರು ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಉತ್ತೇಜಿಸಲು, ಸರಕುಗಳ ಉತ್ಪಾದನಾ ಉದ್ಯಮದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಇತರ ನಿಯಮಗಳನ್ನು ಜಾರಿಗೆ ತರಲು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುವುದು.
ಅಬಕಾರಿ ದಿನದ ಇತಿಹಾಸ: ಕೇಂದ್ರೀಯ ಅಬಕಾರಿ ದಿನವು 1994ರ ಫೆಬ್ರವರಿ 24 ರಂದು ಜಾರಿಗೆ ಬಂದ ಕೇಂದ್ರೀಯ ಅಬಕಾರಿ ಮತ್ತು ಉಪ್ಪು ಕಾಯಿದೆಯನ್ನು ಸ್ಮರಿಸುತ್ತದೆ. ಕಸ್ಟಮ್ಸ್, ಸರಕು ಮತ್ತು ಸೇವಾ ತೆರಿಗೆ, ಕೇಂದ್ರೀಯ ಅಬಕಾರಿ, ಸೇವಾ ತೆರಿಗೆ, ತೆರಿಗೆಗಳು ಮತ್ತು ಕಸ್ಟಮ್ಸ್ ಮತ್ತು ಮಾದಕ ವಸ್ತುಗಳನ್ನು ಕೇಂದ್ರೀಯ ಪರೋಕ್ಷ ಮಂಡಳಿಯು ಇದರಲ್ಲಿ ಕಾರ್ಯ ನಿರ್ವಹಿಸುತ್ತದೆ.
ಅಬಕಾರಿ ದಿನವನ್ನು ಹೇಗೆ ಆಚರಿಸಲಾಗುವುದು?: ಪ್ರತಿ ವರ್ಷ ಈ ದಿನದ ನಿಮಿತ್ತ ದೇಶಾದ್ಯಂತ ಸೆಮಿನಾರ್, ಕಾರ್ಯಗಾರ, ಶೈಕ್ಷಣಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮ, ಜಾಗೃತಿ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಉನ್ನತ ಅಧಿಕಾರಿ ಮತ್ತು ಇಲಾಖೆಗಳು ಕೂಡ ಜಾಗೃತಿ ಕಾರ್ಯಕ್ರಮವನ್ನು ನಡೆಸುವವರು.
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಬಗ್ಗೆ: ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಈ ಹಿಂದೆ ಕೇಂದ್ರ ಅಬಕಾರಿ ಮತ್ತು ಸುಂಕ ಎಂದೇ ಜನಪ್ರಿಯವಾಗಿತ್ತು. ಈ ಇಲಾಖೆ ಕಸ್ಟಮ್ ಮತ್ತು ಕೇಂದ್ರೀಯ ಅಬಕಾರಿ, ಕೇಂದ್ರ ಜಿಎಸ್‌ಟಿ ಇಲಾಖೆಯು ಸುಂಕ ಕಾನೂನುಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊಂದಿದೆ. ಈ ಇಲಾಖೆಯನ್ನು ಕಂದಾಯ ಇಲಾಖೆ, ಹಣಕಾಸು ಸಚಿವಾಲಯ ಮೇಲ್ವಿಚಾರಣೆ ಮಾಡುತ್ತದೆ.
ಇದು ಕಸ್ಟಮ್ಸ್ ಸುಂಕಗಳು, ಕೇಂದ್ರೀಯ ಅಬಕಾರಿ ಸುಂಕಗಳು, ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆಗಳ ಲೆವಿ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುತ್ತದೆ ಮತ್ತು ಐಜಿಎಸ್ಟಿ ಕಳ್ಳಸಾಗಣೆ ತಡೆಯುತ್ತದೆ. ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ಜಿಎಸ್‌ಟಿ ಕಮಿಷನರೇಟ್‌ಗಳು ಮತ್ತು ಕೇಂದ್ರೀಯ ಕಂದಾಯ ನಿಯಂತ್ರಣ ಪ್ರಯೋಗಾಲಯದ ಜೊತೆಗೆ ಮಂಡಳಿಯು ಎಲ್ಲ ಅಧೀನ ಸಂಸ್ಥೆಗಳಿಗೆ ಆಡಳಿತಾತ್ಮಕ ಅಧಿಕಾರವಾಗಿದೆ.
ಹೇಗೆ ಕಾರ್ಯ ನಿರ್ವಹಿಸಲಿದೆ: ತೆರಿಗೆ ಸಂಗ್ರಹಿಸಲು, ಕಳ್ಳಸಾಗಾಣಿಕೆ ತಡೆಗಟ್ಟಲು ಮತ್ತು ಮೋಸದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತೆರಿಗೆಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲಾಗುತ್ತಿದ್ಯಾ, ಎಲ್ಲ ಆಮದು ಮತ್ತು ರಫ್ತುಗಳು ಸರ್ಕಾರವು ಜಾರಿಗೊಳಿಸಿದ ನಿಯಮಗಳು ಮತ್ತು ಕಾನೂನುಗಳಿಗೆ ಅನುಗುಣವಾಗಿರುತ್ತವೆಯಾ ಎಂಬುದನ್ನು ಇಲಾಖೆ ಖಚಿತಪಡಿಸುತ್ತದೆ. ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಇಲಾಖೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇದನ್ನೂ ಓದಿ: ಇಂದಿನಿಂದ ಕಾಂಗ್ರೆಸ್ ಸರ್ವ ಸದಸ್ಯರ ಸಮಾವೇಶ.. 2024 ರ ಚುನಾವಣೆಯ ಕಾರ್ಯತಂತ್ರದ ಚರ್ಚೆ