ನವದೆಹಲಿ: ಇತಿಹಾಸದಲ್ಲಿ ಈ ವರ್ಷ ಖಾಸಗೀಕರಣದ ವಿಷಯದಲ್ಲಿ ಪ್ರಮುಖವಾಗಿ ದಾಖಲಾಗುತ್ತದೆ. ಈ ವಿಚಾರದಲ್ಲಿ ನನಗೆ ಬಹಳ ಆತ್ಮವಿಶ್ವಾಸವಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.
ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಆಯೋಜಿಸಲಾಗಿದ್ದ ಪಿಜಿಪಿಎಂಎಎಕ್ಸ್ ಲೀಡರ್ಶಿಪ್ ಸಮಿಟ್ 2021 ಉದ್ದೇಶಿಸಿ ಅವರು ಮಾತನಾಡಿದರು. ಈ ವರ್ಷದ ಬಜೆಟ್ನಲ್ಲಿ ಹೇಳಿದಂತೆ ಖಾಸಗೀಕರಣದಿಂದ ಸುಮಾರು 1.75 ಲಕ್ಷ ಕೋಟಿ ಆದಾಯ ಗಳಿಸುವ ಗುರಿ ಸಾಧಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇದಷ್ಟೇ ಅಲ್ಲದೇ, ಭಾರತ್ ಪೆಟ್ರೋಲಿಯಂ ಹಾಗೂ ಎಲ್ಐಸಿ ಸರ್ಕಾರಿ ಕಂಪನಿಗಳು ಸಹ ಖಾಸಗೀಕರಣಗೊಳ್ಳಲು ಸಜ್ಜಾಗಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bank Holiday: ಗ್ರಾಹಕರೇ ಗಮನಿಸಿ... ಅಕ್ಟೋಬರ್ ತಿಂಗಳಲ್ಲಿ 21 ದಿನ ಬ್ಯಾಂಕ್ ರಜೆ
ಈ ಪ್ರಕ್ರಿಯೆಗಳು ಈ ವರ್ಷದ ನಾಲ್ಕನೇ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳಲಿವೆ ಎಂದೂ ಕೃಷ್ಣಮೂರ್ತಿ ಸುಬ್ರಮಣಿಯನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.