ಜಬಲ್ಪುರ್ (ಮಧ್ಯಪ್ರದೇಶ): ನಿಯಂತ್ರಣ ಕಳೆದುಕೊಂಡ ಟ್ರಕ್ವೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿದ್ದು, ಇದರ ರಭಸಕ್ಕೆ ಡ್ರೈವರ್ಅದರೊಳಗಿನಿಂದ ಹೊರಗೆ ಹಾರಿಬಿದ್ದಿದ್ದಾನೆ.
ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಧ್ಯಪ್ರದೇಶದ ಜಬಲ್ಪುರ್ ಠಾಣಾ ಕ್ಷೇತ್ರದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಟ್ರಕ್ ಏಕಾಏಕಿ ನಿಯಂತ್ರಣ ಕಳೆದುಕೊಂಡಿರುವ ಕಾರಣ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಟ್ರಕ್ ಡ್ರೈವ್ ಮಾಡ್ತಿದ್ದ ಡ್ರೈವರ್ ಅಪಘಾತದ ರಭಸಕ್ಕೆ ಹೊರಗಡೆ ಬಿದ್ದಿದ್ದಾನೆ. ಘಟನೆಯಿಂದ ಡ್ರೈವರ್ ಹಾಗೂ ಕ್ಲೀನರ್ಗಳಿಬ್ಬರಿಗೂ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 12ನೇ ತರಗತಿ ಪರೀಕ್ಷೆ ನಡೆಯುವುದು ಖಚಿತ ; ಜೂನ್ 1ಕ್ಕೆ ದಿನಾಂಕ ನಿಗದಿ ಸಾಧ್ಯತೆ