ತಿರುಪತಿ(ಆಂಧ್ರಪ್ರದೇಶ): ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಟೆಕ್ಕಿ ಗಂಡ ಆಕೆ ಕೋವಿಡ್ನಿಂದ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕಳೆದ ಜೂನ್ 23ರಂದು ಈ ಘಟನೆ ನಡೆದಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇದೀಗ ಆರೋಪಿಗೋಸ್ಕರ ಶೋಧ ಕಾರ್ಯ ನಡೆಸಿದ್ದಾರೆ.
ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭುವನೇಶ್ವರಿ ಕೋವಿಡ್ನಿಂದಾಗಿ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಳು. ಆದರೆ, ಕೋವಿಡ್ನಿಂದಾಗಿ ಆಕೆಯ ಗಂಡ ಮರ್ಮರೆಡ್ಡಿ ಶ್ರೀಕಾಂತ್ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ಖಿನ್ನತೆಗೊಳಗಾಗಿ, ಮದ್ಯಪಾನದ ಚಟಕ್ಕೊಳಗಾಗಿದ್ದನು. ಹೀಗಾಗಿ ಹೆಂಡತಿ ಜತೆ ಮೇಲಿಂದ ಮೇಲೆ ಜಗಳವಾಡುತ್ತಿದ್ದನು.
ಜೂನ್ 23ರಂದು ಇಬ್ಬರ ನಡುವೆ ಜಗಳವಾಗಿದ್ದು, ಅದು ತಾರಕ್ಕೇರಿದಾಗ ಕೊಲೆ ಮಾಡಿದ್ದಾನೆ. ತದನಂತರ ಸೂಟ್ಕೇಸ್ವೊಂದರಲ್ಲಿ ತುಂಬಿದ್ದಾನೆ. ಅಲ್ಲಿಂದ ತನ್ನ 18 ತಿಂಗಳ ಮಗುವಿನೊಂದಿಗೆ ತೆರಳಿದ್ದು, ಹತ್ತಿರದ ಎಸ್ವಿಆರ್ಆರ್ ಸರ್ಕಾರಿ ಆಸ್ಪತ್ರೆ ಬಳಿ ಎಸೆದಿದ್ದಾನೆ. ಜತೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಅಲ್ಲಿಂದ ಪರಾರಿಯಾಗಿದ್ದಾನೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
27 ವರ್ಷದ ಭುವನೇಶ್ವರಿ ಕಾಣೆಯಾಗುತ್ತಿದ್ದಂತೆ ಆಕೆಯ ಸಂಬಂಧಿಕರು ಪ್ರಶ್ನೆ ಮಾಡಿದ್ದು, ಈ ವೇಳೆ ಆಕೆ ಕೋವಿಡ್ನಿಂದ ಸಾವನ್ನಪ್ಪಿದ್ದು, ವೈದ್ಯರೇ ಅಂತ್ಯಕ್ರಿಯೆ ನಡೆಸಿದ್ದಾಗಿ ಕಥೆ ಕಟ್ಟಿದ್ದಾನೆ. ಆದರ ಭುವನೇಶ್ವರಿ ಸಂಬಂಧಿಯೊಬ್ಬರು ಪೊಲೀಸ್ ಅಧಿಕಾರಿಯಾಗಿದ್ದು, ಇವರ ಮೇಲೆ ಸಂದೇಹ ವ್ಯಕ್ತಪಡಿಸಿದ್ದಾರೆ. ಜತೆಗೆ ಮನೆಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಸೂಟ್ಕೇಸ್ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿರಿ: ಟ್ರ್ಯಾಕ್ಟರ್ ಏರಿ ಕಲ್ಯಾಣ ಮಂಟಪಕ್ಕೆ ಬಂದ ವಧು... Video
ಪ್ರಕರಣ ದಾಖಲು ಮಾಡಿಕೊಂಡು ಶೋಧಕಾರ್ಯ ಆರಂಭಿಸಿದ್ದ ಪೊಲೀಸರಿಗೆ ಮಹಿಳೆಯ ಮೃತದೇಹ ಆಸ್ಪತ್ರೆ ಆವರಣದಲ್ಲಿ ಸಿಕ್ಕಿದೆ. ಇದರಲ್ಲಿ ಕ್ಯಾಬ್ ಡ್ರೈವರ್ ಕೂಡ ಭಾಗಿಯಾಗಿದ್ದು ತಿಳಿದು ಬಂದಿದೆ. ಆತನ ಬಂಧನ ಮಾಡಲಾಗಿದೆ. ಜತೆಗೆ ತಲೆ ಮರೆಸಿಕೊಂಡಿರುವ ಶ್ರೀಕಾಂತ್ಗೋಸ್ಕರ ಬಲೆ ಬೀಸಿದ್ದಾರೆ.
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ
ಭುವನೇಶ್ವರಿ ಹಾಗೂ ಶ್ರೀಕಾಂತ್ ಟೆಕ್ಕಿಗಳಾಗಿದ್ದು, ಪರಸ್ಪರ ಪ್ರೀತಿಸಿ ಈ ಹಿಂದೆ ಮದುವೆ ಮಾಡಿಕೊಂಡಿದ್ದರು. ಹೈದರಾಬಾದ್ನ TCS ಕಂಪನಿಯಲ್ಲಿ ಭುವನೇಶ್ವರಿ ಕೆಲಸ ಮಾಡ್ತಿದ್ದಳು. ಕೊರೊನಾ ವೈರಸ್ ಹೆಚ್ಚಾಗಿದ್ದ ಕಾರಣ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಳು. ಕೋವಿಡ್ ಕಾರಣಕ್ಕಾಗಿ ಆಕೆಯ ಗಂಡ ಕೆಲಸ ಕಳೆದುಕೊಂಡಿದ್ದನು.