ನವದೆಹಲಿ: ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಪ್ರಕಟಿಸಿದೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆ ನಡೆಸಿರಲಿಲ್ಲ. ಈ ಹಿಂದೆ ನಡೆಸಿದ್ದ ಪರೀಕ್ಷೆಗಳಲ್ಲಿ ಪಡೆದಿದ್ದ ಅಂಕಗಳ ಆಧಾರದ ಮೇಲೆ ಗ್ರೇಡ್ ನೀಡಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ.
ಫಲಿತಾಂಶವನ್ನು ವೀಕ್ಷಿಸಲು cbseresults.nic.in ವೆಬ್ಸೈಟ್ಗೆ ಭೇಟಿ ನೀಡಬಹುದು. ಹಾಗೆಯೇ cbse.gov.in ಮತ್ತು cbse.nic.in ವೆಬ್ಸೈಟ್ನಲ್ಲಿ ಕೂಡ ಫಲಿತಾಂಶದ ಬಗ್ಗೆ ಮಾಹಿತಿ ಪಡೆಯಬಹುದು.
ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡುವ ಜೊತೆಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ, ವಿದ್ಯಾರ್ಥಿಗಳ ಅಂಕಪಟ್ಟಿ (Mark Sheet)ಯನ್ನು ಡಿಜಿಲಾಕರ್ (Digilocker)ನಲ್ಲೂ ಪ್ರಕಟಿಸಿದೆ. ಇಲ್ಲಿ ಫಲಿತಾಂಶವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ರೋಲ್ ನಂಬರ್ ಅಗತ್ಯವಿರುವುದಿಲ್ಲ. ಆಧಾರ್ ಕಾರ್ಡ್ ನಂಬರ್ ಮತ್ತು ಫೋನ್ ನಂಬರ್ ನಮೂದಿಸಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಎಸ್ಎಂಎಸ್ ಮೂಲಕವೂ ಪರೀಕ್ಷಾ ಫಲಿತಾಂಶವನ್ನು ತಿಳಿದುಕೊಳ್ಳಬಹುದು.
ಈ ವರ್ಷ ದೇಶಾದ್ಯಂತ 18 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್ಇ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈ ವಿದ್ಯಾರ್ಥಿಗಳಿಗೆ ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡಲಾಗುವುದು. ಫಲಿತಾಂಶ ನೋಡಲು ಅಧಿಕೃತ ವೆಬ್ಸೈಟ್ cbse.gov.inಗೆ ಭೇಟಿ ನೀಡಬೇಕು. ಅದಕ್ಕೂ ಮೊದಲು ನಿಮ್ಮ ರೋಲ್ ನಂಬರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ವೆಬ್ಸೈಟ್ ಓಪನ್ ಮಾಡಿದಾಗ ಅಲ್ಲಿ ರೋಲ್ ನಂಬರ್ ಫೈಂಡರ್ (Roll Number Finder) ಎಂಬ ಆಯ್ಕೆ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ಮುಂದುವರೆಸು (Continue) ಎಂದು ಇರುತ್ತದೆ. ಅಲ್ಲಿ 10ನೇ ತರಗತಿ ಎಂದು ಆಯ್ಕೆ ಮಾಡಿ, ಎಲ್ಲ ವಿವರಗಳನ್ನು ಭರ್ತಿ ಮಾಡಿದರೆ ಸರ್ಚ್ ಡೇಟಾ (Search Data) ಮೇಲೆ ಕ್ಲಿಕ್ ಮಾಡಿದರೆ ರೋಲ್ ನಂಬರ್ ಸಿಗುತ್ತದೆ. ಆ ರೋಲ್ ನಂಬರ್ ಅನ್ನು ನಮೂದಿಸಿ ನಿಮ್ಮ ಫಲಿತಾಂಶದ ಮಾಹಿತಿ ಪಡೆಯಬಹುದು.