ETV Bharat / bharat

ನಾರದ ಪ್ರಕರಣ : ಸುಪ್ರೀಂಕೋರ್ಟ್‌ನಿಂದ ಅರ್ಜಿ ವಾಪಸ್​ ಪಡೆದ ಸಿಬಿಐ - ಸುಪ್ರೀಂ ಕೋರ್ಟ್​

ಬ್ಯಾನರ್ಜಿ ತನ್ನ ಬೆಂಬಲಿಗರೊಂದಿಗೆ ಸಿಬಿಐ ಕಚೇರಿಗೆ ಹೋಗಿ ಧರಣಿ ಕುಳಿತಿದ್ದರೆ, ರಾಜ್ಯ ಕಾನೂನು ಸಚಿವರು ತಮ್ಮ ಅನುಯಾಯಿಗಳೊಂದಿಗೆ ವಿಶೇಷ ಸಿಬಿಐ ನ್ಯಾಯಾಲಯ ಕಚೇರಿಯಲ್ಲಿ ಹೋರಾಟ ಮಾಡುತ್ತಿದ್ದರು. ನ್ಯಾಯಾಲಯ ಜಾಮೀನು ನೀಡುವ ವಿಚಾರದಲ್ಲಿ ಇವರ ವರ್ತನೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ..

ಸುಪ್ರೀಂ ಕೋರ್ಟ್​
ಸುಪ್ರೀಂ ಕೋರ್ಟ್​
author img

By

Published : May 25, 2021, 5:48 PM IST

ನವದೆಹಲಿ : ನಾರದ ಲಂಚ ಪ್ರಕರಣದ ಆರೋಪಿಗಳಾದ ನಾಲ್ವರು ತೃಣಮೂಲ ಕಾಂಗ್ರೆಸ್ ನಾಯಕರನ್ನು ಗೃಹಬಂಧನಕ್ಕೆ ಅನುಮತಿಸಿ ಕೋಲ್ಕತಾ ಹೈಕೋರ್ಟ್ ಆದೇಶಿಸಿತ್ತು.

ಆದರೆ, ಈ ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಿ ಈ ಜಾಮೀನು ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿತ್ತು. ಇದೀಗ ಆ ಅರ್ಜಿಯನ್ನು ಸಿಬಿಐ ಹಿಂತೆಗೆದುಕೊಂಡಿದೆ.

ಕೋಲ್ಕತಾ ಹೈಕೋರ್ಟ್, ಇತ್ತೀಚೆಗೆ ಮೇ 21ರಂದು ನೀಡಿದ ಆದೇಶದಲ್ಲಿ ನಾರದಾ ಪ್ರಕರಣದ ಆರೋಪಿಗಳಾದ ಇಬ್ಬರು ಮಂತ್ರಿಗಳು ಸೇರಿದಂತೆ ನಾಲ್ಕು ಟಿಎಂಸಿ ಮುಖಂಡರಿಗೆ ಜಾಮೀನು ನೀಡಲು ಮತ್ತು ಗೃಹಬಂಧನದಲ್ಲಿಡಲು ಅವಕಾಶ ನೀಡಿತ್ತು.

“ಕೋಲ್ಕತಾ ಹೈಕೋರ್ಟ್‌ನ 5 ನ್ಯಾಯಾಧೀಶರ ಪೀಠವು ಈ ಸಮಸ್ಯೆಗಳನ್ನು ಪರಿಶೀಲಿಸುತ್ತಿದೆ. ಎಲ್ಲ ಸಮಸ್ಯೆಗಳನ್ನು ಹೈಕೋರ್ಟ್‌ನ ಮುಂದೆ ಎತ್ತುವಂತೆ ಅನುಮತಿ ನೀಡಲಾಗಿದೆ. ಇತರ ಎಲ್ಲ ಪಕ್ಷಗಳು ಹೈಕೋರ್ಟ್ ಮುಂದೆ ಇಂತಹ ವಿವಾದಗಳನ್ನು ಎತ್ತುವ ಸ್ವಾತಂತ್ರ್ಯವನ್ನು ಹೊಂದಿರುತ್ತವೆ.

ನಾವು ಯಾವುದೇ ಆದೇಶವನ್ನು ಅರ್ಹತೆಗಳ ಮೇಲೆ ರವಾನಿಸುತ್ತಿಲ್ಲ” ಎಂದು ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿದೆ. ಸಿಬಿಐ ತನ್ನ ಮನವಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ನಂತರ ನ್ಯಾಯಾಲಯವು ಈ ಹೇಳಿಕೆಯನ್ನು ನೀಡಿದೆ.

ವಿಚಾರಣೆಯ ಸಮಯದಲ್ಲಿ, ಕೋಲ್ಕತಾ ಹೈಕೋರ್ಟ್‌ನ ವಿಶೇಷ ನ್ಯಾಯಪೀಠವು ಮೇ 17ರಂದು ಸಂಜೆ ಹೊರಡಿಸಿದ ಆದೇಶದ ಕುರಿತು ಕೆಲವು ಅವಲೋಕನಗಳನ್ನು ಮಾಡಿತು.

ಸಿಬಿಐಯನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, "ಸಿಬಿಐ ಆರೋಪಿಗಳನ್ನು ಬಂಧಿಸಿದ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿಯ ಇತರ ಉನ್ನತ ನಾಯಕರು ಅಲ್ಲಿನ ವಾತಾವರಣವನ್ನು ಬದಲಾಯಿಸಿದ್ದಾರೆ.

ಬ್ಯಾನರ್ಜಿ ತನ್ನ ಬೆಂಬಲಿಗರೊಂದಿಗೆ ಸಿಬಿಐ ಕಚೇರಿಗೆ ಹೋಗಿ ಧರಣಿ ಕುಳಿತಿದ್ದರೆ, ರಾಜ್ಯ ಕಾನೂನು ಸಚಿವರು ತಮ್ಮ ಅನುಯಾಯಿಗಳೊಂದಿಗೆ ವಿಶೇಷ ಸಿಬಿಐ ನ್ಯಾಯಾಲಯ ಕಚೇರಿಯಲ್ಲಿ ಹೋರಾಟ ಮಾಡುತ್ತಿದ್ದರು. ನ್ಯಾಯಾಲಯ ಜಾಮೀನು ನೀಡುವ ವಿಚಾರದಲ್ಲಿ ಇವರ ವರ್ತನೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ಆದರೆ, ಈ ಹೇಳಿಕೆಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಿಲ್ಲ. ಬದಲಾಗಿ, ಜಾಮೀನು ನೀಡಬೇಕೇ ಅಥವಾ ಬೇಡವೇ ಎಂದು ನಾವು ನೋಡಬೇಕಾಗಿದೆ. ಇತರ ಸಮಸ್ಯೆಗಳಿಗೆ ಪರಿಹಾರಗಳಿವೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.