ETV Bharat / bharat

ISRO Spying Case: ಸುಪ್ರೀಂಗೆ ತನಿಖಾ ವರದಿ ಸಲ್ಲಿಸಿದ ಸಿಬಿಐ

ಇಸ್ರೋ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವಿಚಾರಣಾ ವರದಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದೆ.

ಸುಪ್ರೀಂಗೆ ವರದಿ ಸಲ್ಲಿಸಿದ ಸಿಬಿಐ
ಸುಪ್ರೀಂಗೆ ವರದಿ ಸಲ್ಲಿಸಿದ ಸಿಬಿಐ
author img

By

Published : Jul 25, 2021, 9:38 AM IST

ನವದೆಹಲಿ: ಇಸ್ರೋ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ತನ್ನ ವಿಚಾರಣಾ ವರದಿಯನ್ನು ಶನಿವಾರ ಸುಪ್ರೀಂಕೋರ್ಟ್​​ಗೆ ಸಲ್ಲಿಸಿದೆ.

1994 ರಲ್ಲಿ ಬೇಹುಗಾರಿಕೆ ನಡೆಸಿದ ಆರೋಪ ಹೊತ್ತಿದ್ದ ಇಸ್ರೋದ ಅಂದಿನ ವಿಜ್ಞಾನಿ ನಂಬಿ ನಾರಾಯಣನ್​ಗೆ ಕೇರಳದ ಪೊಲೀಸ್ ಅಧಿಕಾರಿಗಳು ಸಾಥ್​ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು ಏಪ್ರಿಲ್​ 15 ರಂದು ಸಿಬಿಐಗೆ ನಿರ್ದೇಶನ ನೀಡಿತ್ತು.

ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್ ನೇತೃತ್ವದ ಸಮಿತಿಯು 2020 ರ ಮಾರ್ಚ್​​ನಲ್ಲಿ ಕೋರ್ಟ್​​ಗೆ ಪ್ರಕರಣದ ತನಿಖಾ ಭಾಗವಾಗಿ ವರದಿ ಸಲ್ಲಿಸಿತ್ತು. ಅಲ್ಲದೆ, ಇದೊಂದು ಗಂಭೀರ ವಿಷಯವಾಗಿದ್ದು, ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಸಮಿತಿಯು ನ್ಯಾಯಾಲಯದ ಗಮನಕ್ಕೆ ತಂದಿತ್ತು. ಹಾಗಾಗಿ ನ್ಯಾಯಾಲಯವು ಹೆಚ್ಚಿನ ತನಿಖೆಗೆ ಆದೇಶಿಸಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಅಡಗಿ ಕುಳಿತಿದ್ದ ಹಾಸನದ ನಟೋರಿಯಸ್ ರೌಡಿಶೀಟರ್ ಚೇತು ಅರೆಸ್ಟ್​

ಸೆಪ್ಟೆಂಬರ್ 18, 2018 ರ ಆದೇಶದ ಪ್ರಕಾರ, ಮಾರ್ಚ್ 25, 2021 ರಂದು ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್ ನೇತೃತ್ವದ ಸಮಿತಿಯು ಸುಪ್ರೀಂ ಕೋರ್ಟ್​​ಗೆ ತನ್ನ ವರದಿ ಸಲ್ಲಿಸಿತ್ತು. ಈ ವೇಳೆ ನಂಬಿ ನಾರಾಯಣನ್ ಪರ ವಕೀಲರು ವರದಿಯ ನಕಲಿ ಪ್ರತಿ ನೀಡುವಂತೆ ಕೋರಿದ್ದರು. ಆದರೆ, ವರದಿ ಗೌಪ್ಯತೆಯನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.