ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದ ತನಿಖೆ ತೀವ್ರಗತಿಯಿಂದ ಸಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದ್ದು, ಈಗ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಪುತ್ರಿಯೂ ಆಗಿರುವ ಎಂಎಲ್ಸಿ ಕವಿತಾ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಸಿಬಿಐ ಸೆಕ್ಷನ್ 160 CrPC ಅಡಿಯಲ್ಲಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಇದೇ ತಿಂಗಳ 6ರಂದು ಬೆಳಗ್ಗೆ 11 ಗಂಟೆಗೆ ಹೈದರಾಬಾದ್ನಲ್ಲಿ ವಿಚಾರಣೆ ನಡೆಯಲಿದೆ. ಸಿಬಿಐನಿಂದ ನೋಟಿಸ್ ಬಂದಿರುವುದನ್ನು ಎಂಎಲ್ಸಿ ಕವಿತಾ ಖಚಿತಪಡಿಸಿದ್ದಾರೆ. ದೆಹಲಿ ಮದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ 36 ಜನರನ್ನು ಆರೋಪಿ ಅಮಿತ್ ಅರೋಡಾ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ಪ್ರಕರಣ ಸಂಬಂಧ ಶಂಕೆ ವ್ಯಕ್ತಪಡಿಸಿ ಇಡಿ ಅವರನ್ನು ಬಂಧಿಸಿತ್ತು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ರಿಮಾಂಡ್ ವರದಿಯಲ್ಲಿ ತೆಲುಗು ರಾಜ್ಯಗಳ ಕಲ್ವಕುಂಟ್ಲ ಕವಿತಾ, ಶರತ್ ರೆಡ್ಡಿ, ಗೋರಂಟ್ಲ ಬುಚ್ಚಿಬಾಬು, ಬೋಯಿನಪಲ್ಲಿ ಅಭಿಷೇಕ್, ಸೃಜನ್ ರೆಡ್ಡಿ ಹೆಸರು ಉಲ್ಲೇಖವಾಗಿದ್ದು, ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡುತ್ತಿದೆ.
ಓದಿ: ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್‌ಎಸ್ ಎಂಎಲ್‌ಸಿ ಕವಿತಾ