ETV Bharat / bharat

ವೈಎಸ್ ವಿವೇಕಾನಂದ ರೆಡ್ಡಿ ಕೊಲೆ ಕೇಸ್: ಕಡಪ ಸಂಸದ ಅವಿನಾಶ್, ತಂದೆ ಭಾಸ್ಕರ್​ ರೆಡ್ಡಿ ಸೇರಿ ಮೂವರಿಗೆ ಸಿಬಿಐ ಪ್ರಶ್ನೆಗಳ ಸುರಿಮಳೆ - ವೈಎಸ್ ಭಾಸ್ಕರ್​ ರೆಡ್ಡಿ

ಆಂಧ್ರ ಪ್ರದೇಶದ ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್ ಭಾಸ್ಕರ್​ ರೆಡ್ಡಿ, ಉದಯ್ ಕುಮಾರ್ ರೆಡ್ಡಿ ಮತ್ತು ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ವೈಎಸ್ ವಿವೇಕಾನಂದ ರೆಡ್ಡಿ ಕೊಲೆ ಕೇಸ್: ಕಡಪ ಸಂಸದ ಅವಿನಾಶ್, ತಂದೆ ಭಾಸ್ಕರ್​ ರೆಡ್ಡಿ ಸೇರಿ ಮೂವರಿಗೆ ಸಿಬಿಐ ಪ್ರಶ್ನೆಗಳ ಸುರಿಮಳೆ
cbi-grills-avinash-reddy-bhaskar-reddy-udaykumar-in-Vivekananda Reddy murder case
author img

By

Published : Apr 21, 2023, 4:07 PM IST

ಹೈದರಾಬಾದ್ (ತೆಲಂಗಾಣ): ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ, ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ವೈಎಸ್ ಭಾಸ್ಕರ್​ ರೆಡ್ಡಿ, ಉದಯ್ ಕುಮಾರ್ ರೆಡ್ಡಿ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ, ಕಡಪ ಸಂಸದ ವೈಎಸ್ ಅವಿನಾಶ್ ರೆಡ್ಡಿ ಅವರಿಗೂ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

2019ರ ಮಾರ್ಚ್ 15ರಂದು ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ ವಿವೇಕಾನಂದ ರೆಡ್ಡಿ ಕೊಲೆ ನಡೆದಿತ್ತು. ಇವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್ ರಾಜಶೇಖರ್​​ ರೆಡ್ಡಿ ಅವರ ಸಹೋದರರಲ್ಲಿ ಒಬ್ಬರು. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಭಾಸ್ಕರ್ ರೆಡ್ಡಿ ಕೂಡ ವೈಎಸ್ ರಾಜಶೇಖರ್​ ರೆಡ್ಡಿ ಅವರ ಸಹೋದರರಾಗಿದ್ದಾರೆ. 2019ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ತಮ್ಮ ನಿವಾಸದಲ್ಲಿ ವಿವೇಕಾನಂದ ರೆಡ್ಡಿ ಕೊಲೆಯಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಸಂಶಯವನ್ನು ಸಿಬಿಐ ವ್ಯಕ್ತಪಡಿಸಿದೆ.

ಇದರ ಭಾಗವಾಗಿ ಭಾಸ್ಕರ್ ​ರೆಡ್ಡಿ ಅವರನ್ನು ಏಪ್ರಿಲ್​ 16ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಏಪ್ರಿಲ್​ 18ರಂದು ಭಾಸ್ಕರ್​ ರೆಡ್ಡಿ ಹಾಗೂ ಮತ್ತೋರ್ವ ಆರೋಪಿ ಉದಯಕುಮಾರ್ ರೆಡ್ಡಿ ಅವರನ್ನು ಆರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮತ್ತೊಂದೆಡೆ, ಭಾಸ್ಕರ್ ರೆಡ್ಡಿ ಪುತ್ರರಾದ ಕಡಪ ಸಂಸದ ಅವಿನಾಶ್ ರೆಡ್ಡಿ ಅವರನ್ನು ಏಪ್ರಿಲ್​ 25ರವರೆಗೆ ಬಂಧಿಸುವಂತಿಲ್ಲ. ಆದರೆ, ಸಿಬಿಐ ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.

ಆರೋಪಿಗಳಿಗೆ ಪ್ರಶ್ನೆಗಳ ಸುರಿಮಳೆ: ಅಂತೆಯೇ, ಏಪ್ರಿಲ್​ 19ರಿಂದ ಭಾಸ್ಕರ್ ​ರೆಡ್ಡಿ, ಉದಯಕುಮಾರ್ ರೆಡ್ಡಿ ಹಾಗೂ ಅವಿನಾಶ್ ರೆಡ್ಡಿ ಸೇರಿ ಮೂವರನ್ನು ಪ್ರತ್ಯೇಕವಾಗಿ ಸಿಬಿಐ ಅಧಿಕಾರಿಗಳು ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ವಿವೇಕಾನಂದ ರೆಡ್ಡಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮೊದಲಿಗೆ ಹೇಳಿದ್ದು ಉದಯಕುಮಾರ್ ರೆಡ್ಡಿ. ಈ ಹತ್ಯೆಯ ವಿಚಾರ ಆತನಿಗೆ ಮೊದಲೇ ತಿಳಿದಿತ್ತು ಎಂದು ಸಿಬಿಐ ಆರೋಪಿಸಿದೆ.

ಮುಂದುವರೆದು, ಕೊಲೆಯಾದ ದಿನ ಬೆಳಗಿನ ಜಾವ ಪುಲಿವೆಂದುಲದಲ್ಲಿರುವ ವಿವೇಕಾನಂದ ರೆಡ್ಡಿ ಅವರ ಮನೆ ಬಳಿಗೆ ಹೋಗಬೇಕಾದ ಅಗತ್ಯವೇನಿತ್ತು ಎಂಬ ಪ್ರಶ್ನೆಯನ್ನೂ ಉದಯಕುಮಾರ್‌ಗೆ ಕೇಳಲಾಗಿದೆ. ಈತನ ತಾಯಿ ಶಕುಂತಲಾ ಅವರು ತಮ್ಮ ನೆರೆಹೊರೆಯವರಾದ ಪ್ರಭಾವತಿ ದೇವಿ ಅವರಿಗೆ ಹತ್ಯೆಯ ವಿಷಯ ಬೆಳಗ್ಗೆ 4 ಗಂಟೆಗೆ ತಿಳಿದಿದ್ದರು. ಈ ವಿಷಯವನ್ನು ಈ ಹಿಂದೆ ಸಿಬಿಐ ಅಧಿಕಾರಿಗಳು ನಡೆಸಿದ ವಿಚಾರಣೆ ವೇಳೆ ಪ್ರಭಾವತಿ ಬಹಿರಂಗಪಡಿಸಿದ್ದರು. ಈ ಬಗ್ಗೆಯೂ ಆರೋಪಿಗೆ ಸಿಬಿಐ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ.

ಇತ್ತ, ಭಾಸ್ಕರ್​ ರೆಡ್ಡಿ ಅವರಿಗೂ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ಧಾರೆ. ವಿವೇಕಾನಂದ ರೆಡ್ಡಿ ಅವರ ಸಾವಿನ ಬಗ್ಗೆ ತಮಗೆ ಹೇಗೆ ಗೊತ್ತಾಯಿತು?, ಯಾರು ಹೇಳಿದರು?, ಆ ವ್ಯಕ್ತಿ ನಿಖರವಾಗಿ ಏನು ಹೇಳಿದರು?, ವಿವೇಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಕೊಲೆ ಮಾಡಲಾಗಿದೆಯೇ ಎಂದು ಸಿಬಿಐ ಅಧಿಕಾರಿಗಳು ಭಾಸ್ಕರ್​ ರೆಡ್ಡಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇದರ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ಭಾಸ್ಕರ್​ ರೆಡ್ಡಿ ಅವರಿಗೆ ಕೊಂಚ ಬಿಡುವು ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಅವಿನಾಶ್ ರೆಡ್ಡಿಗೆ ಲಿಖಿತ ಪ್ರಶ್ನೆ: ಮತ್ತೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅವಿನಾಶ್ ರೆಡ್ಡಿ ಅವರನ್ನೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಲಿಖಿತವಾಗಿ ಅವಿನಾಶ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಕೊಲೆಯ ಹಿಂದಿನ ದಿನ ಮತ್ತು ನಂತರದ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಮಾಡಲಾಗಿದೆ.

ಕೊಲೆಗಾರರಲ್ಲಿ ಒಬ್ಬನಾದ ಸುನೀಲ್ ಯಾದವ್ ಕೊಲೆಯಾದ ಸ್ವಲ್ಪ ಸಮಯದ ನಂತರ ನಿಮ್ಮ ಮನೆಯಲ್ಲಿ ಯಾಕೆ ಇದ್ದ ಎಂಬ ಪ್ರಶ್ನೆಯನ್ನೂ ಸಿಬಿಐ ಕೇಳಿದೆ. ಇದಕ್ಕೆ ಉತ್ತರಿಸಿರುವ ಅವಿನಾಶ್​ ಈ ಕೊಲೆಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ವಕೀಲರ ಸಮ್ಮುಖದಲ್ಲಿ ಎಲ್ಲ ಆರೋಪಿಗಳ ವಿಚಾರಣೆ ನಡೆಸಿ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ.

ಇದನ್ನೂ ಓದಿ: ಮಾಜಿ ಸಚಿವ ವೈಎಸ್ ವಿವೇಕ್​ ಹತ್ಯೆ ಕೇಸ್​: ವೈಎಸ್ ಭಾಸ್ಕರ್​ ರೆಡ್ಡಿ ಸೇರಿ ಇಬ್ಬರು ಸಿಬಿಐ ಕಸ್ಟಡಿಗೆ, ಸಂಸದ ಅವಿನಾಶ್​ಗೆ ಗ್ರಿಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.