ನವದೆಹಲಿ: ಗಂಭೀರ ಸ್ವರೂಪದ ಭ್ರಷ್ಟಾಚಾರ ಪ್ರಕರಣದಡಿ 2011ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿ ಕಂಕಿಪತಿ ರಾಜೇಶ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಇದಕ್ಕೂ ಮುನ್ನ ಆರೋಪಿತ ಅಧಿಕಾರಿಯನ್ನು ವಿಚಾರಣೆಗಾಗಿ ಅಹಮದಾಬಾದ್‌ನ ಕಚೇರಿಗೆ ಕರೆಸಲಾಗಿತ್ತು. ವಿಚಾರಣೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕೆ.ರಾಜೇಶ್ ಗುಜರಾತ್ ರಾಜ್ಯದ ಸುರೇಂದ್ರನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ ಭೂ ವ್ಯವಹಾರ ಮತ್ತು ಅನರ್ಹರಿಗೆ ಶಸ್ತ್ರಾಸ್ತ್ರ ಪರವಾನಗಿ ಮಂಜೂರು ಮಾಡಲು ಲಂಚ ಪಡೆದಿದ್ದರು. ಮೇ ತಿಂಗಳಲ್ಲಿ ಇವರ ಪರವಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ರಫೀಕ್ ಮೆನನ್ ಎಂಬಾತನನ್ನು ತನಿಖಾ ದಳ ಬಂಧಿಸಿತ್ತು.
ಇದನ್ನೂ ಓದಿ: ಎಂಟು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಸರ್ಕಾರಿ ಜಮೀನು ಮಂಜೂರಾತಿ ಹಾಗೂ ಅನರ್ಹ ಫಲಾನುಭವಿಗಳ ಹೆಸರಿಗೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನುಗಳನ್ನು ಸಕ್ರಮ ಮಾಡಿಕೊಡಲು ಅಧಿಕಾರಿ ರಾಕೇಶ್ ಲಂಚ ಪಡೆದಿದ್ದರು ಎನ್ನಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ಕೋರಿಕೆಯ ಮೇರೆಗೆ ಪ್ರಾಥಮಿಕ ತನಿಖೆ ನಡೆಸಲಾಗಿತ್ತು.